ದೇಶ

ಶಾಂತಿಯುತ ಮಾರ್ಗಗಳ ಮೂಲಕವೇ ಸಂಘರ್ಷಗಳನ್ನು ಬಗೆಹರಿಸಿಕೊಳ್ಳಬೇಕು:ಬ್ರಿಕ್ಸ್ ಸಭೆಯಲ್ಲಿ ಸಚಿವರುಗಳ ಒಕ್ಕೊರಲ ನಿರ್ಧಾರ

Sumana Upadhyaya

ನವದೆಹಲಿ:ಸಂಘರ್ಷ,ಭಿನ್ನಾಭಿಪ್ರಾಯಗಳನ್ನು ಶಾಂತಿಯುತ ಮಾರ್ಗಗಳ ಮೂಲಕ ಬಗೆಹರಿಸಿಕೊಳ್ಳಬೇಕು, ರಾಜಕೀಯ ಮಾತುಕತೆ ಮೂಲಕ ರಾಜತಾಂತ್ರಿಕ ಮಟ್ಟದಲ್ಲಿ ಮತ್ತು ಸಂಧಾನ ಮಾಡಿಕೊಳ್ಳುವುದು ಇದಕ್ಕಿರುವ ಅತ್ಯುತ್ತಮ ಮಾರ್ಗ ಎಂದು ಬ್ರಿಕ್ಸ್ ಸಭೆಯಲ್ಲಿ ನಾಯಕರು ತೀರ್ಮಾನಕ್ಕೆ ಬಂದಿದ್ದಾರೆ.

ಬ್ರಿಕ್ಸ್ ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರುಗಳ ಸಭೆ ನಿನ್ನೆ ವರ್ಚುವಲ್ ಆಗಿ ನಡೆಯಿತು. ಸಭೆ ನಂತರ ಹೊರಡಿಸಲಾದ ಘೋಷಣೆಯಲ್ಲಿ ಸಂಘರ್ಷದ ಬಗ್ಗೆ ನಿರ್ಣಯ ಹೊರಡಿಸುವ ಬಗ್ಗೆ ಒತ್ತು ನೀಡಲಾಯಿತು. ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಕೂಡ ಸಭೆಯಲ್ಲಿ ಹಾಜರಿದ್ದರು.

ಘೋಷಣೆಯಲ್ಲಿ ಜಗತ್ತಿನ ವಿವಿಧ ರಾಷ್ಟ್ರಗಳಲ್ಲಿ ನಡೆಯುತ್ತಿರುವ ಸಂಘರ್ಷಗಳ ಬಗ್ಗೆ ಬ್ರಿಕ್ಸ್ ಸಭೆಯ ನಂತರ ಹೊರಡಿಸಲಾದ ಘೋಷಣೆಯಲ್ಲಿ ನಮೂದಿಸಲಾಗಿದ್ದರೂ ಕೂಡ ಪೂರ್ವ ಲಡಾಕ್ ಪ್ರಾಂತ್ಯದಲ್ಲಿ ಕಳೆದ ನಾಲ್ಕು ತಿಂಗಳಿನಿಂದ ಭಾರತ-ಚೀನಾ ಮಧ್ಯೆ ನಡೆಯುತ್ತಿರುವ ಗಡಿ ಸಂಘರ್ಷದ ಸಮಯದಲ್ಲಿ ಈ ಉಲ್ಲೇಖ ಮಾಡಿರುವುದು ಮಹತ್ವ ಪಡೆದಿದೆ.

ತಮ್ಮ ಐತಿಹಾಸಿಕ ಹಿನ್ನೆಲೆ, ಅದ್ವಿತೀಯ ಪರಿಸರದ ಹೊರತಾಗಿಯೂ ದೇಶ-ದೇಶಗಳ ಮಧ್ಯೆ ಸಂಘರ್ಷ ಬಂದರೆ ಅದನ್ನು ರಾಜತಾಂತ್ರಿಕ ಮಟ್ಟದಲ್ಲಿ ರಾಜಕೀಯ ಮಾತುಕತೆ, ಸಂಧಾನಗಳ ಮೂಲಕ ಅಂತಾರಾಷ್ಟ್ರೀಯ ನಿಯಮಗಳಿಗೆ ಬದ್ಧವಾಗಿ ತತ್ವಗಳನ್ನು ಕಾಪಾಡಿಕೊಂಡು ಶಾಂತಿಯುತ ಮಾರ್ಗದಲ್ಲಿ ಪರಿಹಾರ ಕಂಡುಕೊಳ್ಳಬೇಕು ಎಂದು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಜೈಶಂಕರ್ ಹೇಳಿದ್ದೇನು?:ಭಯೋತ್ಪಾದನೆ ಇಂದು ಜಗತ್ತಿನಲ್ಲಿ ಬಹುದೊಡ್ಡ ಸವಾಲಾಗಿದ್ದು ಅದನ್ನು ಬಗೆಹರಿಸುವ ಬಗ್ಗೆ ಎಲ್ಲಾ ರಾಷ್ಟ್ರಗಳು ಸಹಕರಿಸಬೇಕು ಎಂದು ಒತ್ತು ನೀಡಿದರು. ಶಾಶ್ವತ ಮತ್ತು ಶಾಶ್ವತ ರಹಿತ ವಿಭಾಗಗಳಲ್ಲಿ ವಿಶ್ವಸಂಸ್ಥೆ ಭದ್ರತಾ ಮಂಡಳಿಯನ್ನು ವಿಸ್ತರಿಸಬೇಕು, ವಿಶ್ವ ಆರೋಗ್ಯ ಸಂಘಟನೆ, ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವ ಆರೋಗ್ಯ ಸಂಸ್ಥೆಗಳನ್ನು ಸುಧಾರಿಸಬೇಕು ಎಂದು ಸಹ ಹೇಳಿದರು.

ಭಾರತ, ಚೀನಾ, ಬ್ರೆಜಿಲ್, ರಷ್ಯಾ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಬ್ರಿಕ್ಸ್ ನ ಸದಸ್ಯ ರಾಷ್ಟ್ರಗಳಾಗಿವೆ.

SCROLL FOR NEXT