ದೇಶ

ಸುನಂದಾ ಪುಷ್ಕರ್ ಪ್ರಕರಣ: ಸಂಯಮದಿಂದ ವರ್ತಿಸುವಂತೆ ಅರ್ನಾಬ್ ಗೆ ದೆಹಲಿ ಹೈಕೋರ್ಟ್ ಸಲಹೆ

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ  ಪ್ರಕರಣದಲ್ಲಿ ಸಮಾನಾಂತರ ವಿಚಾರಣೆ ಹಾಗೂ ತನಿಖೆ ನಡೆಸಿದ್ದಕ್ಕಾಗ  ಅರ್ನಾಬ್ ಗೋಸ್ವಾಮಿಯನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಈ ವಿಷಯವನ್ನು ಚರ್ಚಿಸುವ ವೇಳೆ ವಾಕ್ಚಾತುರ್ಯವನ್ನು ಬಳಸದೆ ಸಂಯಮವನ್ನು ತೋರಿಸಿ ಎಂದು ಹೇಳಿದೆ. 

ನವದೆಹಲಿ: ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರ ಪತ್ನಿ ಸುನಂದಾ ಪುಷ್ಕರ್ ಸಾವಿನ  ಪ್ರಕರಣದಲ್ಲಿ ಸಮಾನಾಂತರ ವಿಚಾರಣೆ ಹಾಗೂ ತನಿಖೆ ನಡೆಸಿದ್ದಕ್ಕಾಗ  ಅರ್ನಾಬ್ ಗೋಸ್ವಾಮಿಯನ್ನು ದೆಹಲಿ ಹೈಕೋರ್ಟ್ ಪ್ರಶ್ನಿಸಿದೆ. ಅಲ್ಲದೆ ಈ ವಿಷಯವನ್ನು ಚರ್ಚಿಸುವ ವೇಳೆ ವಾಕ್ಚಾತುರ್ಯವನ್ನು ಬಳಸದೆ ಸಂಯಮವನ್ನು ತೋರಿಸಿ ಎಂದು ಹೇಳಿದೆ. 

ನ್ಯಾಯಮೂರ್ತಿ ಮುಕ್ತಾ ಗುಪ್ತಾ "ಯಾರೂ  ಮಾದ್ಯಮವನ್ನು ಟೀಕಿಸುತ್ತಾರೆ ಎಂದು ಬಾವಿಸಬಾರದು, ಆದರೆ  ಅದೇ ಸಮಯದಲ್ಲಿ, ತನಿಖೆಯ ಪಾವಿತ್ರ್ಯವನ್ನು ಕಾಪಾಡಿಕೊಳ್ಳಬೇಕು "ಎಂದು ಹೇಳಿದರು.

"ದಯವಿಟ್ಟು ಸಂಯಮವನ್ನು ತೋರಿಸಿ. ಒಮ್ಮೆ ಕ್ರಿಮಿನಲ್ ಪ್ರಕರಣದಲ್ಲಿ ಪೊಲೀಸ್ ತನಿಖೆ ನಡೆಯುತ್ತಿದ್ದರೆ, ಮಾಧ್ಯಮಗಳು ಸಮಾನಾಂತರವಾಗಿ ತನಿಖೆ ನಡೆಸಲು ಸಾಧ್ಯವಿಲ್ಲ" ಎಂದು ನ್ಯಾಯಾಧೀಶರು ಹೇಳಿದರು. ಅಲ್ಲದೆ ಸಾರ್ವಜನಿಕರು ಕ್ರಿಮಿನಲ್ ಪ್ರಕರಣದ ವಿಚಾರವನ್ನು ಮೊದಲು ಕೋರ್ಟ್ ವಿಚಾರಣೆಯನ್ನು ಗಮನಿಸಿ ಅರಿಯಬೇಕು. ನಂತರ ಮಾದ್ಯಮಗಳತ್ತ ನೋಡಬೇಕು ಎಂದಿದ್ದಾರೆ. 

ಹೈಕೋರ್ಟ್ ಡಿಸೆಂಬರ್ 1, 2017 ರ ಆದೇಶವನ್ನು ಉಲ್ಲೇಖಿಸಿ"ಮಾದ್ಯಮವು  ಯಾರನ್ನೂ ಅಪರಾಧಿ ಮಾಡಲು ಸಾಧ್ಯವಿಲ್ಲ" ಅಥವಾ ಅವನು / ಅವಳು ತಪ್ಪಿತಸ್ಥನೆಂದು ಹೇಳಲು ಅಥವಾ ಯಾವುದೇ ಆಧಾರರಹಿತ ತೀರ್ಪು ನೀಡಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ. ಮಾದ್ಯಮಗಳು ವಿಷಯಗಳ ಬಗ್ಗೆ ವರದಿ ಮಾಡುವಾಗ ಕಾಳಜಿ ಮತ್ತು ಎಚ್ಚರಿಕೆಯಿಂದಿರಬೇಕು. ಈ ಪ್ರಕರಣದ  ತನಿಖೆ ಅಥವಾ ವಿಚಾರಣೆ ಬಾಕಿ ಇದೆ. " ಎಂದಿದೆ.

ಇದೇ ವೇಳೆ , "ಪ್ರತಿವಾದಿಗಳು (ಗೋಸ್ವಾಮಿ ಮತ್ತು ಅವರ ಚಾನೆಲ್) ಮುಂದಿನ ವಿಚಾರಣೆಯ ದಿನಾಂಕದವರೆಗೆ ಅವರ ಪರವಾಗಿ ಅವರ ಸಲಹೆಯ ಮೂಲಕ ನೀಡಿದ ಹೇಳಿಕೆಗೆ ಬದ್ಧರಾಗಿರಲು ನಿರ್ದೇಶಿಸಲಾಗಿದೆ" ಎಂದು ಹೇಳಿದೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Bihar election 2025: ಎನ್ ಡಿಎ ಸೀಟು ಹಂಚಿಕೆ ಅಂತಿಮ, ಬಿಜೆಪಿ, ಜೆಡಿಯು ತಲಾ 101 ಸ್ಥಾನಗಳಲ್ಲಿ ಸ್ಪರ್ಧೆ! ಚಿರಾಗ್ ಗೆ ದಕ್ಕಿದ್ದೆಷ್ಟು?

BJP ಶಾಸಕ ಮುನಿರತ್ನ ಧರಿಸಿದ್ದ RSS ಟೋಪಿ ಕಿತ್ತೆಸೆದ Congress ಮುಖಂಡ: Video Viral!

ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ ODI ಕ್ರಿಕೆಟ್ ನಲ್ಲಿ 1,000 ರನ್ ಪೂರೈಸಿದ ಜಗತ್ತಿನ ಮೊದಲ ಬ್ಯಾಟರ್!

ಯಾವುದೇ ಸಂಪರ್ಕ ಕಡಿತಗೊಳ್ಳದೇ ಎಲ್ಲಾ ಇ-ಮೇಲ್ ಗಳನ್ನು Gmail ನಿಂದ Zoho Mail ಗೆ ವರ್ಗಾವಣೆ ಮಾಡುವುದು ಹೇಗೆ? ಸಿಗುವ ಸೌಲಭ್ಯಗಳೇನು? ಇಲ್ಲಿದೆ ಮಾಹಿತಿ

ನಿಮ್ಮ ಮೇಲೆ ಕ್ರಿಮಿನಲ್ ಕೇಸ್ ಗಳಿವೆ; ಯಾರ ಒತ್ತಡಕ್ಕೆ ಒಳಗಾಗಿ Congress ಮರ್ಯಾದೆ ತೆಗೆಯುತ್ತಿದ್ದೀರಾ? ಚಿದಂಬರಂ ವಿರುದ್ಧ ಹೈಕಮಾಂಡ್ ಗರಂ!

SCROLL FOR NEXT