ದೇಶ

ಚುನಾವಣೆ ಹೊಸ್ತಿಲಲ್ಲಿರುವ ಬಿಹಾರಕ್ಕೆ ಮೋದಿ ಬಂಪರ್ ಗಿಫ್ಟ್! 16,000 ಕೋಟಿ ರೂ ಅಭಿವೃದ್ದಿ ಕಾಮಗಾರಿಗೆ ಶೀಘ್ರ ಚಾಲನೆ

Raghavendra Adiga

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಮುಂದಿನ 10 ದಿನಗಳಲ್ಲಿ 16,000 ಕೋಟಿ ರೂ.ಗಳ ಮೌಲ್ಯದ ಅಭಿವೃದ್ಧಿ ಕಾಮಗಾರಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಬಹು  ವಿಧದ ಯೋಜನೆಗಳುಬಿಹಾರದ ಜನರಿಗೆ ಮೂಲಸೌಕರ್ಯ ಹಾಗೂ ಜೀವನಕ್ಕೆ ಅಗತ್ಯವಾದ ಸೌಲಭ್ಯಗಳ ಸುಧಾರಣೆಯಾಗುವಂತೆ ಮಾಡಲಿದೆ ಎನ್ನಲಾಗಿದೆ.

ಎಲ್‌ಪಿಜಿ ಪೈಪ್‌ಲೈನ್, ಎಲ್‌ಪಿಜಿ ಬಾಟ್ಲಿಂಗ್ ಸ್ಥಾವರ, ನಮಾಮಿ ಗಂಗೆ ಅಡಿಯಲ್ಲಿ ಒಳಚರಂಡಿ ಸಂಸ್ಕರಣಾ ಘಟಕ, ನೀರು ಸರಬರಾಜು ಯೋಜನೆಗಳು, ನದಿ ತಟದಲ್ಲಿನ  ಅಭಿವೃದ್ಧಿ ಯೋಜನೆ, ಹೊಸ ರೈಲ್ವೆ ಮಾರ್ಗ, ರೈಲ್ವೆ ಸೇತುವೆ, ವಿವಿಧ ವಿಭಾಗಗಳ ವಿದ್ಯುದೀಕರಣ, ಮತ್ತು ನಿರ್ಮಾಣ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದ ಯೋಜನೆಗಳು,  ಹೆದ್ದಾರಿಗಳು ಮತ್ತು ಸೇತುವೆಗಳ ದುರಸ್ತಿ, ನಿರ್ಮಾಣಗಳು ಇದರಲ್ಲಿ ಸೇರಿದೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ ಪ್ರಧಾನಿ ರಾಜ್ಯದ ಜನರೊಂದಿಗೆ ಸಂವಹನ ನಡೆಸಲಿದ್ದಾರೆ ಎನ್ನಲಾಗಿದೆ. "ಈ ಯೋಜನೆಗಳ ಒಟ್ಟು ವೆಚ್ಚವು 16,000 ಕೋಟಿ ರೂ.ಗಳನ್ನು ಮೀರಿದೆ, ಇದರಿಂದಾಗಿ ಸಾರ್ವಜನಿಕ ವೆಚ್ಚ ಕೋವಿಡ್ -19 ರ ಅವಧಿಯಲ್ಲಿ ಬೆಳವಣಿಗೆಯ ಪ್ರಮುಖ ಚಾಲನೆಯಾಗಿ ಕಾರ್ಯನಿರ್ವಹಿಸುತ್ತದೆ" ಎಂದು ಮೂಲವೊಂದು ತಿಳಿಸಿದೆ. ಅಕ್ಟೋಬರ್-ನವೆಂಬರ್ನಲ್ಲಿ ಬಿಹಾರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

SCROLL FOR NEXT