ದೇಶ

ಮತಗಟ್ಟೆ ಹಿಂಸಾಚಾರ: ಕೇಂದ್ರ ಪಡೆಗಳ ಕ್ರಮ ಪ್ರಶ್ನಿಸಿದ ಮಮತಾ ಬ್ಯಾನರ್ಜಿ, ಸಿಐಡಿ ತನಿಖೆಗೆ ಆದೇಶ

Lingaraj Badiger

ಸಿಲಿಗುರಿ(ಪಶ್ಚಿಮ ಬಂಗಾಳ): ನಾಲ್ಕು ಜನರ ಸಾವಿಗೆ ಕಾರಣವಾದ ಕೂಚ್ ಬೆಹಾರ್‌ ಮತಗಟ್ಟೆ ಹಿಂಸಾಚಾರಕ್ಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಭದ್ರತಾ ಪಡೆಯ ಕ್ರಮವನ್ನು ಪ್ರಶ್ನಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಘಟನೆ ಕರಿತು ಸಿಐಡಿ ತನಿಖೆಗೆ ಆದೇಶಿಸಿದ್ದಾರೆ.

ಕೇಂದ್ರ ಪಡೆಗಳು ಆತ್ಮರಕ್ಷಣೆಗಾಗಿ ಮತದಾರರ ಮೇಲೆ ಗುಂಡು ಹಾರಿಸಿರುವುದಾಗಿ ಹೇಳುತ್ತಿವೆ. ಆದರೆ ಕೇಂದ್ರ ಪಡೆಗಳ ಹೇಳಿಕೆ ಖಚಿತಪಡಿಸುವ ಯಾವುದೇ ಸಿಸಿಟಿವಿ ದೃಶ್ಯ ಅಥವಾ ಇತರೆ ಸಾಕ್ಷ್ಯಗಳು ಇಲ್ಲ. "ಈ ಸಿದ್ಧಾಂತ ಎಲ್ಲಿಂದ ಬಂದಿದೆ? ಅವರ ಕಡೆಯಿಂದ ಯಾರು ಗಾಯಗೊಂಡಿದ್ದಾರೆ? ಆ ಬಗ್ಗೆ ಯಾವುದೇ ವಿಡಿಯೋ ತುಣುಕನ್ನು ಹೊಂದಿದ್ದೀರಾ? ಎಂದು ಪ್ರಶ್ನಿಸಿದ ಸಿಎಂ, ಘಟನೆಯ ಹಿಂದಿನ ಸಂದರ್ಭಗಳನ್ನು ಕಂಡುಹಿಡಿಯಲು ಸಿಐಡಿ ತನಿಖೆ ಆರಂಭಿಸಲಾಗುವುದು" ಎಂದು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಇದೇ ವೇಳೆ ಕೂಚ್ ಬಿಹಾರ್ ಜಿಲ್ಲೆಯ ಸಿತಾಲ್‌ಕುಚಿ ಗ್ರಾಮದಲ್ಲಿ ನಡೆದ ಹಿಂಸಾಚಾರಕ್ಕೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆಯಾಗಿದ್ದು, ತಕ್ಷಣವೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಮಮತಾ ಬ್ಯಾನರ್ಜಿ ಒತ್ತಾಯಿಸಿದ್ದಾರೆ.

ಮತದಾನದ ವೇಳೆ ಉದ್ರಿಕ್ತರ ಗುಂಪೊಂದು ನಮ್ಮ ಮೇಲೆ ದಾಳಿ ಮಾಡಿದೆ ಎಂದು ಆರೋಪಿಸಿ ಕೇಂದ್ರ ಭದ್ರತಾ ಪಡೆಗಳು ಗುಂಡು ಹಾರಿಸಿದ ಪರಿಣಾಮ ನಾಲ್ವರು ಮೃತಪಟ್ಟಿದ್ದಾರೆ.

SCROLL FOR NEXT