ಸಂಸತ್ 
ದೇಶ

ರಾಜ್ಯಸಭೆ ಕಲಾಪ ಆ.04 ಕ್ಕೆ ಮುಂದೂಡಿಕೆ; ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆ ಅಂಗೀಕಾರ 

ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ರಾಜ್ಯಸಭೆಯ ಕಲಾಪವನ್ನು ಆ.04 ಕ್ಕೆ ಮುಂದೂಡಲಾಗಿದೆ. 

ನವದೆಹಲಿ: ಪ್ರತಿಪಕ್ಷಗಳ ನಿರಂತರ ಪ್ರತಿಭಟನೆಯ ಪರಿಣಾಮ ರಾಜ್ಯಸಭೆಯ ಕಲಾಪವನ್ನು ಆ.04 ಕ್ಕೆ ಮುಂದೂಡಲಾಗಿದೆ.  ಪೆಗಾಸಸ್ ಸ್ಪೈವೇರ್, ರೈತರ ಪ್ರತಿಭಟನೆ ಕುರಿತು ಚರ್ಚೆ ನಡೆಸಬೇಕೆಂಬ ಆಗ್ರಹಿಸಿ ಪ್ರತಿಭಟನೆ ನಡೆದಿದ ಪರಿಣಾಮ ರಾಜ್ಯಸಭೆ ಕಲಾಪಕ್ಕೆ ಅಡ್ಡಿಯುಂಟಾಗಿದ್ದು, ಕಲಾಪ ಮುಂದೂಡಲಾಗಿದೆ. 

ಕಲಾಪದಲ್ಲಿನ ಗದ್ದಲದ ನಡುವೆಯೂ ಮೇಲ್ಮನೆಯಲ್ಲಿ ರಾಜ್ಯಸಭೆ ಕಲಾಪ ಆ.04 ಕ್ಕೆ ಮುಂದೂಡಿಕೆ; ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆಯನ್ನು ಅಂಗೀಕರಿಸಲಾಗಿದೆ. 

ಮಧ್ಯಾಹ್ನ 2 ಗಂಟೆಗೆ ಭೋಜನ ವಿರಾಮದ ನಂತರ ಪ್ರಾರಂಭವಾದ ಕಲಾಪದಲ್ಲಿ ಬಿಜೆಪಿ ಸದಸ್ಯ ಭುವನೇಶ್ವರ್ ಕಲಿತಾ ಅವರು ಸಭಾಧ್ಯಕ್ಷರಾಗಿ ಕಲಾಪವನ್ನು ಮುನ್ನಡೆಸಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ; ದಿವಾಳಿ ಮತ್ತು ದಿವಾಳಿತನ ನೀತಿ (ತಿದ್ದುಪಡಿ) ಮಸೂದೆ ಅಂಗೀಕಾರ Insolvency and Bankruptcy Code (Amendment) Bill, 2021. ಯನ್ನು ಮಂಡಿಸಲು ಸೂಚಿಸಿದರು. ಬೆನ್ನಲ್ಲೇ ಪ್ರತಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. 

ಪ್ರತಿಪಕ್ಷ ಸದಸ್ಯರ ಘೋಷಣೆಗಳ ನಡುವೆಯೇ ಸಭಾಧ್ಯಕ್ಷರು ಅಮರ ಪಟ್ನಾಯಕ್ (ಬಿಜೆಡಿ) ಅವರನ್ನು ಮಸೂದೆ ಕುರಿತು ಚರ್ಚೆ ಪ್ರಾರಂಭಿಸುವಂತೆ ಸೂಚಿಸಿದರು. 

ಈ ಬಳಿಕ ಟಿಆರ್ ಎಸ್ ನ ಬಂಡ ಪ್ರಕಾಶ್, ಟಿಡಿಪಿಯ ಎಂ ತಂಬಿದುರೈ, ಕೆ ರವೀಂದ್ರ ಕುಮಾರ್, ವೈಎಸ್ ಆರ್ ಸಿಪಿಯ ವಿ ವಿಜಯಸಾಯಿ ರೆಡ್ಡಿ ಮಸೂದೆ ಮೇಲಿನ ಚರ್ಚೆಯಲ್ಲಿ ಭಾಗವಹಿಸಿದ್ದರು. ಸಿಪಿಐ-ಎಂ ನ ಸದಸ್ಯ ಜಾನ್ ಬ್ರಿಟಾನ್ ಅವರು ಮಸೂದೆ ಬಗ್ಗೆ ಮಾತನಾಡುವುದಾಗಿ ಎದ್ದು ನಿಂತು ಗೂಢಚರ್ಯೆ, ಪ್ರಜಾಪ್ರಭುತ್ವಕ್ಕೆ ಅಪಾಯದ ಸಂಗತಿಗಳನ್ನು ಮಾತನಾಡಲಾರಂಭಿಸಿದರು. ಕೆಲವು ಸದಸ್ಯರಿಂದ ನಡೆದ ಚರ್ಚೆಯ ನಂತರ ಮಸೂದೆಯನ್ನು ಧ್ವನಿ ಮತಕ್ಕೆ ಹಾಕಿ ಅಂಗೀಕರಿಸಲಾಯಿತು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

'ದೊಡ್ಡ ಆಘಾತ': ಅಮೆರಿಕದಲ್ಲಿ ಶೇ.50 ಸುಂಕ ಜಾರಿ, 48.2 ಬಿಲಿಯನ್ ಡಾಲರ್ ಮೌಲ್ಯದ ಭಾರತದ ರಫ್ತಿಗೆ ಹೊಡೆತ

ಜಮ್ಮುವಿನಲ್ಲಿ ಭೀಕರ ಮಳೆಯಿಂದ ಭಾರೀ ಅನಾಹುತ ಸೃಷ್ಟಿ: ವೈಷ್ಣೋದೇವಿ ಮಾರ್ಗದಲ್ಲಿ ಭೂಕುಸಿತ, ಕನಿಷ್ಠ 32 ಮಂದಿ ಸಾವು

Shocking: ಆಸಿಸ್ ಕ್ರಿಕೆಟ್ ದಿಗ್ಗಜ Michael Clarkeಗೆ 'ಚರ್ಮದ ಕ್ಯಾನ್ಸರ್'!

'ಮದುವೆಗೆ ಮುನ್ನ ಪೋಷಕರ ಒಪ್ಪಿಗೆ ಕಡ್ಡಾಯಗೊಳಿಸಿ': ಹರಿಯಾಣ BJP ಶಾಸಕ

ಭಾರತದ ಮೇಲೆ ಸುಂಕಾಸ್ತ್ರ ಜಾರಿ: ಮತ್ತೆ ಇಂಡೋ-ಪಾಕ್ ಯುದ್ಧ ನಿಲ್ಲಿಸಿದ್ದು ನಾನೇ ಎಂದು ಪುನರುಚ್ಛರಿಸಿದ ಡೊನಾಲ್ಡ್ ಟ್ರಂಪ್

SCROLL FOR NEXT