ಸ್ವದೇಶಿ ಜಾಗರಣ ಮಂಚ್ ನ ಸಂಚಾಲಕ ಅಶ್ವನಿ ಮಹಾಜನ್ 
ದೇಶ

ಸಂಸತ್ ಒಳಗೆ ಚರ್ಚೆ ಇಲ್ಲದೇ ಹೊಸ ತೆರಿಗೆ ವಿಧೇಯಕ: ಹೊರಗೆ ಬಿಜೆಪಿ ವಿರುದ್ಧ ಆರ್ ಎಸ್ಎಸ್ ಅಂಗಸಂಸ್ಥೆ ನಡುವೆ ವಾಗ್ವಾದ! 

ಲೋಕಸಭೆಯಲ್ಲಿ ಆ.07 ರಂದು ಹೊಸ ತೆರಿಗೆ ವಿಧೇಯಕ (ತಿದ್ದುಪಡಿ) ಮಸೂದೆಯನ್ನು ಚರ್ಚೆ ಇಲ್ಲದೇ ಅಂಗೀಕರಿಸಲಾಗಿದೆ.

ನವದೆಹಲಿ: ಲೋಕಸಭೆಯಲ್ಲಿ ಆ.07 ರಂದು ಹೊಸ ತೆರಿಗೆ ವಿಧೇಯಕ (ತಿದ್ದುಪಡಿ) ಮಸೂದೆಯನ್ನು ಚರ್ಚೆ ಇಲ್ಲದೇ ಅಂಗೀಕರಿಸಲಾಗಿದೆ. ಆದರೆ ಸಂಸತ್ ನ ಹೊರಭಾಗದಲ್ಲಿ ಸ್ವದೆಶಿ ಜಾಗರಣ ಮಂಚ್ (ಎಸ್ ಜೆಎಂ) ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ ಎಸ್ಎಸ್) ನ ಅಂಗ ಸಂಸ್ಥೆ ಟಿಪ್ಪಣಿಯೊಂದನ್ನು ಪ್ರದರ್ಶಿಸಿದ್ದು ಬಿಜೆಪಿ ನಾಯಕ ವಿಜಯ್ ಚೌಥೈವಾಲೆ ಅವರನ್ನು ಚರ್ಚೆಗೆ ಆಹ್ವಾನಿಸಿದ್ದು, ಸಾಮಾಜಿಕ ಜಾಲತಾಣದಲ್ಲಿ ಹೊಸ ಮಸೂದೆಯ ಯೋಗ್ಯತೆಗಳ ಬಗ್ಗೆ ಬಿಜೆಪಿ-ಸಂಘಪರಿವಾರದ ಅಂಗ ಸಂಸ್ಥೆಯ ನಡುವೆ ಸಾಮಾಜಿಕ ಜಾಲತಾಣದಲ್ಲಿ ವಾಗ್ವಾದ ನಡೆದಿದೆ. 

ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ವಿತ್ತ ಸಚಿವರಾಗಿದ್ದಾಗ ಸಂಸತ್ ಗೆ ಪರಿಚಯಿಸಿದ್ದ ಮಸೂದೆಯಲ್ಲಿನ ವಿವಾದಾತ್ಮಕ ನಿಬಂಧನೆ ರೆಟ್ರೋ-ಟ್ಯಾಕ್ಸ್ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಸಂಸತ್ತಿನ ಕಠಿಣ ಪರಿಶೀಲನೆಯನ್ನು ತಪ್ಪಿಸಿಕೊಂಡು ಕೆಳಮನೆಗೆ (ಲೋಕಸಭೆಯಲ್ಲಿ) ಮಂಡನೆಯಾಗಿದೆ. ಈ ಮಸೂದೆಯ ವಿವಾದಾತ್ಮಕ ಅಂಶವನ್ನು ತೆಗೆದುಹಾಕುವಂತೆ ಸಂಘದ ಅಂಗಪರಿವಾರ ಆಗ್ರಹಿಸಿದೆ. 

ಚರ್ಚೆಯೇ ಇಲ್ಲದೇ ಸಂಸತ್ ನಲ್ಲಿ ಹಲವು ಮಸೂದೆಗಳನ್ನು ಅಂಗೀಕರಿಸುತ್ತಿರುವುದಕ್ಕೆ ಆರ್ ಎಸ್ ಎಸ್ ನ ನಾಯಕರಲ್ಲಿ ಅಸಮಾಧಾನ ಉಂಟಾಗಿರುವುದನ್ನು ಎಸ್ ಜೆಎಂ ನ ಸಂಚಾಲಕ ಅಶ್ವನಿ ಮಹಾಜನ್ ಬಹಿರಂಗಪಡಿಸಿದ್ದಾರೆ. 

ಮಹಾಜನ್ ಅವರನ್ನು ಪ್ರಶ್ನಿಸಿರುವ ವಿಜಯ್ ಚೌಥೈವಾಲೆ ಪ್ರಶ್ನಿಸಿದ್ದು, ನೀವು ಎಫ್ ಡಿಐ ಮೇಲೆ ಸಂಪೂರ್ಣ ನಿರ್ಬಂಧಕ್ಕೆ ಆಗ್ರಹಿಸುತ್ತಿದ್ದೀರಾ? ಎಂದು ಕೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಮಹಾಜನ್, ನೀತಿಯೊಂದರ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಚರ್ಚಿಸುವುದು ಅಪರಾಧವೇ? ಎಂದು ಮರುಪ್ರಶ್ನೆ ಹಾಕಿದ್ದಾರೆ. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಚೌಥೈವಾಲೆ, ಅಪರಾಧವಲ್ಲದೇ ಇರುವುದು ಎಲ್ಲವೂ ರಾಷ್ಟ್ರೀಯ ಹಿತಾಸಕ್ತಿಯಲ್ಲಿರುವುದಿಲ್ಲ ಎಂದು ತೀಕ್ಷ್ಣವಾಗಿ ಹೇಳಿದ್ದಾರೆ. 

ಮಹಾಜನ್ ಈ ಬಳಿಕ ಚೌಥೈವಾಲೆ ಅವರನ್ನು ಚರ್ಚೆಗೆ ಆಹ್ವಾನಿಸಿದ್ದಾರೆ. ಆದರೆ ಈ ಬಗ್ಗೆ ಮಾಧ್ಯಮದವರು ಹೆಚ್ಚಿನ ಪ್ರಶ್ನೆ ಕೇಳಿದಾಗ ಹೆಚ್ಚು ಮಾಹಿತಿ ನೀಡಲು ನಿರಾಕರಿಸಿದ್ದಾರೆ. "ನಾನು ಏನನ್ನು ಹೇಳಬೇಕೋ ಅದನ್ನು ಟ್ವಿಟರ್ ನಲ್ಲಿ ಹೇಳಿದ್ದೇನೆ, ಎಫ್ ಡಿಐ ಬಗ್ಗೆ ತಮ್ಮ ನಿಲುವು ಸ್ಥಿರವಾಗಿದೆ" ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಅಮೆರಿಕ ನಿಯೋಜಿತ ರಾಯಭಾರಿ ಸೆರ್ಗಿಯೊ ಗೋರ್- ಮೋದಿ, ಜೈಶಂಕರ್ ಭೇಟಿ; Tariff ಒತ್ತಡದ ನಡುವೆ ಭಾರತ-ಅಮೆರಿಕ ಸಂಬಂಧ ಸುಧಾರಣೆಯ ಸೂಚನೆ?

ಅಫ್ಘಾನಿಸ್ತಾನ ನಮ್ಮೊಂದಿಗೆ ಗಡಿ ಹಂಚಿಕೊಂಡಿರುವ ನೆರೆ ರಾಷ್ಟ್ರ- S Jaishankar; ಭಾರತದೊಂದಿಗೆ POK ವಿಲೀನದ ಸುಳಿವು; ಚೀನಾಗೂ ಶಾಕ್!

ಅಬ್ಬಬ್ಬಾ ರೋಮಾಂಚನ: ಅದ್ಭುತ ಸೃಷ್ಟಿಸಿದ ರಿಷಬ್ ಶೆಟ್ಟಿಗೆ ರಾಷ್ಟ್ರಪ್ರಶಸ್ತಿ ಕೊಡಲೇಬೇಕು - ತಮಿಳು ನಿರ್ದೇಶಕ ಅಟ್ಲೀ

Pakistan: ಇಸ್ರೇಲ್ ವಿರೋಧಿ ಪ್ರತಿಭಟನಾ ಜಾಥಾ, ಪೋಲೀಸರ ಗುಂಡೇಟಿಗೆ 11 ಮಂದಿ ಬಲಿ! Video

ಉತ್ತರ ಪ್ರದೇಶಕ್ಕೆ ಭೇಟಿ ನೀಡಿದ ತಾಲಿಬಾನ್ ಸಚಿವನಿಗೆ ಅದ್ಧೂರಿ ಸ್ವಾಗತ, ಸರ್ಕಾರದ ಭದ್ರತೆ; ಯೋಗಿಗೆ ನಾಚಿಕೆಯಾಗಬೇಕು- SP ಸಂಸದ ಶಫೀಕರ್

SCROLL FOR NEXT