ದೇಶ

ಟೆರರ್ ಫಂಡಿಂಗ್ ಕೇಸ್: ಕಾಶ್ಮೀರದಲ್ಲಿ ಮತ್ತೆ ಎನ್ಐಎ ದಾಳಿ, 45 ಶಂಕಿತರ ಮನೆಗಳಲ್ಲಿ ತೀವ್ರ ಶೋಧ

Srinivasamurthy VN

ಶ್ರೀನಗರ: ಉಗ್ರ ಸಂಘಟನೆಗಳಿಗೆ ಹಣಕಾಸಿನ ನೆರವು ನೀಡುತ್ತಿದ್ದ ಆರೋಪಡಿ ಜಮ್ಮು ಕಾಶ್ಮೀರದಲ್ಲಿ ಮತ್ತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ 45 ಕಡೆಗಳಲ್ಲಿ ರಾಷ್ಟ್ರೀಯ ತನಿಖಾ ದಳ (ಎನ್ ಐಎ) ದಾಳಿ ನಡೆಸಿದ್ದು. ತೀವ್ರ ಶೋಧ ನಡೆಸಿದೆ.

ಸೇನಾ ಮೂಲಗಳ ಪ್ರಕಾರ ಅನಂತ್ ನಾಗ್ ಜಿಲ್ಲೆಯ ದೋಡಾ, ಕಿಶ್ತ್ ವಾರ್, ರಂಬನ್, ಅನಂತನಾಗ್, ಬುಡ್ಗಾಮ್, ರಜೌರಿ ಮತ್ತು ಶೋಪಿಯಾನ್ ಸೇರಿದಂತೆ ಇತರೆಡೆಗಳಲ್ಲಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದಾರೆ. ಪ್ರಮುಖವಾಗಿ ಜಮಾತ್-ಎ-ಇಸ್ಲಾಮಿ (ಜೆಐಐ) ಸದಸ್ಯರ ಮನೆ, ಗುಲ್ ಮೊಹಮ್ಮದ್ ವಾರ್ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ಜುಲೈ 10 ರಂದು ಭಯೋತ್ಪಾದಕ ನಿಧಿಯ ಪ್ರಕರಣಕ್ಕೆ ಸಂಬಂಧಿಸಿದಂತೆ ಜಮ್ಮು ಮತ್ತು ಕಾಶ್ಮೀರದಾದ್ಯಂತ ಆರು ಜನರನ್ನು ಎನ್ ಐಎ ಬಂಧಿಸಿತ್ತು. ಭಯೋತ್ಪಾದಕ ಸಂಪರ್ಕ ಹೊಂದಿದ್ದಕ್ಕಾಗಿ ಜಮ್ಮು ಕಾಶ್ಮೀರ ಸರ್ಕಾರದ ಹನ್ನೊಂದು ಉದ್ಯೋಗಿಗಳನ್ನು ವಜಾ ಮಾಡಿದ ಒಂದು ದಿನದ ನಂತರ ದಾಳಿಗಳು ನಡೆದಿದ್ದವು.
 

SCROLL FOR NEXT