ದೇಶ

ಕಿನ್ನೌರ್ ಭೂ ಕುಸಿತ: ಇನ್ನೂ ಆರು ಮೃತದೇಹ ಪತ್ತೆ, ಸಾವಿನ ಸಂಖ್ಯೆ 23ಕ್ಕೆ ಏರಿಕೆ

Nagaraja AB

ಶಿಮ್ಲಾ: ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯಲ್ಲಿ ಭೂ ಕುಸಿತ ಸಂಭವಿಸಿದ್ದ ಸ್ಥಳದಿಂದ ಇಂದು ಮತ್ತೆ ಆರು ಮೃತದೇಹಗಳು ಪತ್ತೆಯಾಗಿವೆ. ಇದರೊಂದಿಗೆ ಒಟ್ಟಾರೇ ಮೃತರ ಸಂಖ್ಯೆ 23ಕ್ಕೆ ಏರಿಕೆಯಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ಹೇಳಿದ್ದಾರೆ.

 ನಿಚಾರ್ ತೆಹಸಿಲ್ ನ ರಾಷ್ಟ್ರೀಯ ಹೆದ್ದಾರಿ 5ರಲ್ಲಿನ ಚೌರ ಗ್ರಾಮದಲ್ಲಿ ಇಂದು ಆರು ಮೃತದೇಹಗಳು ಪತ್ತೆಯಾಗಿವೆ, ನಾಪತ್ತೆಯಾಗಿರುವ ಉಳಿದ 9 ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ನಿರ್ದೇಶಕ ಸುದೇಶ್ ಕುಮಾರ್ ಮೊಕ್ತಾ ಹೇಳಿದ್ದಾರೆ.

ಈ ಮಧ್ಯೆ ಭೂ ಕುಸಿತ ಸಂಭವಿಸಿದ ಪ್ರದೇಶದಲ್ಲಿ ಭಾರೀ ಗಾತ್ರದ ಬಂಡೆಗಳು ಬೀಳುತ್ತಿರುವುದು ನಿರಂತರವಾಗಿ ಮುಂದುವರೆದಿದ್ದು, ಸಾರ್ವಜನಿಕರ ಸುರಕ್ಷತೆಗಾಗಿ ರಾತ್ರಿ 9 ಗಂಟೆಯಿಂದ ಬೆಳಗ್ಗೆ 9 ಗಂಟೆಯವರೆಗೂ ಎಲ್ಲಾ ವಿಧದ ವಾಹನಗಳನ್ನು ನಿರ್ಬಂಧಿಸಿ ನಿಚಾರ್ ಉಪ- ವಿಭಾಗೀಯ ಮ್ಯಾಜಿಸ್ಟ್ರೇಟ್ ಮನ್ ಮೋಹನ್ ಸಿಂಗ್ ಆದೇಶಿಸಿದ್ದಾರೆ.  

ಶುಕ್ರವಾರ ಸಂಜೆ ಕಲ್ಲುಗಳು ಬಿದ್ದ ಬಳಿಕ ಇಬ್ಬರು ಗಾಯಗೊಂಡಿದ್ದಾರೆ.  ಇಂದು ಬೆಳಗ್ಗೆ ಆರು ಗಂಟೆಯಿಂದಲೂ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದ್ದು, ಅವಶೇಷಗಳಡಿ ಸಿಲುಕಿರುವ ಎಸ್ ಯುವಿ ಕಾರು ಮತ್ತು ಅದರೊಳಗಿದ್ದ ಪ್ರಯಾಣಿಕರು ಈವರೆಗೂ ಪತ್ತೆಯಾಗಿಲ್ಲ, ಎನ್ ಡಿಆರ್ ಎಫ್ ಮತ್ತು ಐಟಿಬಿಪಿ ಸಿಬ್ಬಂದಿ ಹಾಗೂ ಸ್ಥಳೀಯ ಪೊಲೀಸ್, ಗೃಹ ರಕ್ಷಕದಳದಿಂದ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಮುಕ್ತಾ ತಿಳಿಸಿದ್ದಾರೆ.

ಭೂ ಕುಸಿತ ಸಂಭವಿಸಿದ್ದ ಸ್ಥಳ 10 ಮೃತದೇಹಗಳು ಪತ್ತೆಯಾಗಿತ್ತು, 13 ಜನರನ್ನು ರಕ್ಷಿಸಲಾಗಿತ್ತು. ಬುಧವಾರ  ರಕ್ಷಣಾ ಕಾರ್ಯಾಚರಣೆ ವೇಳೆ 8 ಮೃತದೇಹ ಪತ್ತೆಯಾಗಿತ್ತು.

SCROLL FOR NEXT