ಝೈಡಸ್ ಕ್ಯಾಡಿಲಾ 
ದೇಶ

ಜಗತ್ತಿನ ಮೊದಲ ಡಿಎನ್ಎ ಲಸಿಕೆ: ಝೈಡಸ್ ಕ್ಯಾಡಿಲಾ 3 ಡೋಸ್ ಲಸಿಕೆಯ ತುರ್ತು ಬಳಕೆಗೆ ಅನುಮೋದನೆ

ಝೈಡಸ್ ಕ್ಯಾಡಿಲಾ ಸಂಸ್ಥೆಯ 3 ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನವದೆಹಲಿ: ಝೈಡಸ್ ಕ್ಯಾಡಿಲಾ ಸಂಸ್ಥೆಯ 3 ಡೋಸ್ ಕೋವಿಡ್ ಲಸಿಕೆಯ ತುರ್ತು ಬಳಕೆಗೆ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.

ನೀಡಲ್ ಲೆಸ್ (ಸೂಜಿ ರಹಿತ) ಲಸಿಕೆಯಾಗಿರುವ ಮೂರು ಡೋಸ್ ಪ್ರಮಾಣದ ZyCov-D ಲಸಿಕೆಯನ್ನು ತುರ್ತುಬಳಕೆಗೆ ಅನುಮೋದನೆ ನೀಡುವಂತೆ ಕೇಂದ್ರ ಆರೋಗ್ಯ ತಜ್ಞರು ಶಿಫಾರಸ್ಸು ಮಾಡಿದ ಬೆನ್ನಲ್ಲೇ ಕೇಂದ್ರ ಸರ್ಕಾರ ತುರ್ತು ಬಳಕೆಗೆ ಅನುಮೋದನೆ ನೀಡಿದೆ. ಅದರಂತೆ ಕೊರೋನಾ ಸಾಂಕ್ರಾಮಿಕ  (Covid-19 Pandemic) ವಿರುದ್ಧ ದೇಶಾದ್ಯಂತ ನಡೆಯುತ್ತಿರುವ ಲಸಿಕಾಕರಣ ಕಾರ್ಯಕ್ರಮಕ್ಕೆ ಇದೀಗ ಮತ್ತೊಂದು ಲಸಿಕೆ ಸೇರ್ಪಡೆಯಾಗಿದ್ದು, ಕೇಂದ್ರ ಸರ್ಕಾರವು ಫಾರ್ಮ ಕಂಪನಿ ಝೈಡಸ್ ಕ್ಯಾಡಿಲಾದ (Zydus Cadila) 3 ಡೋಸ್ ಕೊರೊನಾ ಲಸಿಕೆ ZyCov-Dನ ತುರ್ತುಬಳಕೆಗೆ  ಅನುಮೋದನೆ ನೀಡಿದೆ. 

ಮೂಲಗಳ ಪ್ರಕಾರ ಭಾರತದ ಔಷಧ ನಿಯಂತ್ರಕ ಜನರಲ್‌ನ (DCGI) ತಜ್ಞರ ಸಮಿತಿಯು ಈ ಲಸಿಕೆಯ ತುರ್ತು ಬಳಕೆಯನ್ನು ಅನುಮೋದಿಸಿದೆ. ಈ ಲಸಿಕೆಯ 2 ಡೋಸ್‌ಗಳ ಪರಿಣಾಮದ ಕುರಿತು ಸಮಿತಿಯು ಫಾರ್ಮಾ ಕಂಪನಿಯಿಂದ ಹೆಚ್ಚುವರಿ ದತ್ತಾಂಶವನ್ನು ಕೋರಿದೆ ಎನ್ನಲಾಗಿದೆ.

ಇನ್ನು ಜೆನೆರಿಕ್ ಫಾರ್ಮಾಸ್ಯುಟಿಕಲ್ ಕಂಪನಿಯಾಗಿರುವ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್ (Cadila Health Care Limited) ಜುಲೈ 1 ರಂದು ZyCoV-D ಯ ತುರ್ತು ಬಳಕೆಗೆ ಅನುಮತಿಗಾಗಿ ಅರ್ಜಿ ಸಲ್ಲಿಸಿತ್ತು. 28 ಸಾವಿರ ಸ್ವಯಂಸೇವಕರ ಮೇಲೆ ನಡೆಸಿದ ಕೊನೆಯ ಹಂತದ  ಪ್ರಯೋಗದ ಆಧಾರದ ಮೇಲೆ ಈ ಅರ್ಜಿಯನ್ನು ಸಲ್ಲಿಸಲಾಗಿತ್ತು. ಲಸಿಕೆಯ ಪರಿಣಾಮಕಾರಿತ್ವವು ಶೇ. 66.6 ರಷ್ಟಿದೆ ಎಂದು ಈ ವರದಿಯಿಂದ ತಿಳಿದುಬಂದಿತ್ತು. ಈ ಲಸಿಕೆ 12 ರಿಂದ 18 ವಯೋಮಾನದವರಿಗೂ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಎಂದು ಹೇಳಲಾಗಿದೆ. ಆದಾಗ್ಯೂ, ಅದರ ಪ್ರಾಯೋಗಿಕ ಡೇಟಾವನ್ನು  ಇನ್ನೂ ಪ್ಯಾರ್ ರಿವ್ಯೂ ಮಾಡಲಾಗಿಲ್ಲ ಎನ್ನಲಾಗಿದೆ.

ತುರ್ತು ಬಳಕೆಗೆ ಅನುಮೋದನೆ ಪಡೆದ ಜಗತ್ತಿನ ಮೊದಲ ಡಿಎನ್ಎ ಲಸಿಕೆ
ಕೇಂದ್ರ ಸರ್ಕಾರದ ಅನುಮೋದನೆಯೊಂದಿಗೆ ZyCoV-D (ಝೈಕೋವ್-ಡಿ) ವಿಶ್ವದ ಮೊದಲ ಡಿಎನ್ಎ ಲಸಿಕೆಯಾಗಿದ್ದು, ಈಗಾಗಲೇ ದೇಶದಲ್ಲಿ ಸೆರಂ ಇನ್ಸ್ಟಿಟ್ಯೂಟ್ ನ ಕೋವಿಶೀಲ್ಡ್, ಭಾರತ್ ಬಯೋಟೆಕ್ ನ ಕೊವಾಕ್ಸಿನ್, ರಷ್ಯಾದ ಸ್ಪುಟ್ನಿಕ್ ವಿ ಬಳಕೆಯಲ್ಲಿದ್ದು, ಇದಲ್ಲದೆ ಒಟ್ಟು 2 ಲಸಿಕೆಗಳು ಅಂದರೆ  ಅಮೆರಿಕದ ಮಾಡರ್ನಾ ಮತ್ತು ಜಾನ್ಸನ್ ಮತ್ತು ಜಾನ್ಸನ್ ಲಸಿಕೆಗಳಉ ತುರ್ತು ಬಳಕೆ ಅನುಮೋದನೆ ಪಡೆದಿವೆ. ಆ ಮೂಲಕ ದೇಶದಲ್ಲಿ ತುರ್ತು ಬಳಕೆಗೆ ಅನುಮೋದನೆ ಪಡೆದ 6ನೇ ಲಸಿಕೆ ಎಂಬ ಕೀರ್ತಿಗೆ  ZyCoV-D ಪಾತ್ರವಾಗಿದೆ.  
 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಆಗ ಸಿದ್ಧಾರ್ಥ್, ಈಗ CJ Roy': 'ತೆರಿಗೆ ಭಯೋತ್ಪಾದನೆ'; ಐಟಿ ದಾಳಿ ಕುರಿತು ಕೇಂದ್ರಕ್ಕೆ ಉದ್ಯಮಿ Mohandas Pai ಪತ್ರ! Video

CCL 2026: ಬೆಂಗಾಲ್ ಟೈಗರ್ಸ್ ವಿರುದ್ಧ ಕರ್ನಾಟಕಕ್ಕೆ ಭರ್ಜರಿ ಗೆಲುವು

T20 World Cup 2026: 'ಟೂರ್ನಿ ಆಡ್ತೇವೆ.. ಆದ್ರೆ ಭಾರತದ ವಿರುದ್ಧ ಆಡಲ್ಲ'.. ಫೆ.15ರ ಪಂದ್ಯ ನಿಷೇಧ, ಐಸಿಸಿಗೆ PCB ಹೊಸ ತಲೆನೋವು!

U19 World Cup: ಪಾಕಿಸ್ತಾನವನ್ನು ಬಗ್ಗು ಬಡಿದು ಭಾರತ ಸೆಮಿಫೈನಲ್‌ಗೆ ಲಗ್ಗೆ; ಅಫ್ಘಾನ್ ಜೊತೆ ಗುದ್ದಾಟ!

ಇನ್ಮುಂದೆ ಷೇರು ಮರುಖರೀದಿ ಲಾಭಕ್ಕೂ ತೆರಿಗೆ! capital gain tax ಎಂದು ಪರಿಗಣಿಸುವ ಘೋಷಣೆ

SCROLL FOR NEXT