ದೇಶ

ಅಫ್ಘಾನಿಸ್ತಾನ ತಾಲಿಬಾನ್ ವಶವಾಗುವುದೆಂದು ಮುಂಚೆಯೇ ತಿಳಿದಿತ್ತು: ಸೇನಾ ಮುಖ್ಯಸ್ಥ ಬಿಪಿನ್ ರಾವತ್

Harshavardhan M

ನವದೆಹಲಿ: ಭಾರತದ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ತಾಲಿಬಾನ್ ಅಫ್ಘಾನಿಸ್ತಾನವನ್ನು ವಶಪಡಿಸಿಕೊಳ್ಳಲಿದೆ ಎನ್ನುವ ಸಂಗತಿ ಮುಂಚೆಯೇ ತಿಳಿದಿತ್ತು ಎಂದು ಹೇಳಿದ್ದಾರೆ. ಆದರೆ ಇಷ್ಟು ಬೇಗನೆ ತಾಲಿಬಾನಿಗಳ ತೆಕ್ಕೆಗೆ ದೇಶ ಜಾರುವುದೆಂದು ಅಂದುಕೊಂಡಿರಲಿಲ್ಲ ಎಂದರು ರಾವತ್. 

ಅಫ್ಘಾನಿಸ್ತಾನ ಬಿಕ್ಕಟ್ಟಿನಿಂದಾಗಿ ಅಲ್ಲಿನ ಉಗ್ರ ಚಟುವಟಿಕೆಗಳು ಭಾರತಕ್ಕೆ ಪ್ರವೇಶಿಸುವ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಅವರು ಈ ಹೇಳಿಕೆ ನೀಡಿದ್ದಾರೆ. ಅಂಥಾ ಯಾವುದೇ ಉಗ್ರಚಟುವಟಿಕೆಗಳು ಭಾರತ ಪ್ರವೇಶಿಸದಂತೆ ತಡೆಹಿಡಿಯಲಾಗುವುದು ಎಂದು ಅವರು ಭರವಸೆ ನೀಡಿದರು. 

ಇದೇ ಸಂದರ್ಭದಲ್ಲಿ ಅವರು ಕ್ವಾಡ್ ರಾಷ್ಟ್ರಗಳು ಭಯೋತ್ಪಾದನೆ ಮಟ್ಟ ಹಾಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು ಎಂದು ಕರೆ ನೀಡಿದ್ದಾರೆ.  

ಕಳೆದ 20 ವರ್ಷಗಳಲ್ಲಿ ತಾಲಿಬಾನ್ ಒಂಚೂರೂ ಬದಲಾಗಿಲ್ಲ, ಅವರ ಸಹವರ್ತಿಗಳು ಬದಲಾಗಿದ್ದಾರಷ್ಟೇ ಎಂದ ರಾವತ್, ಈ ಪ್ರಾಂತ್ಯದಲ್ಲಿ ಭಯೋತ್ಪಾದನಾ ಮುಕ್ತ ವಾತಾವರಣ ನಿರ್ಮಾಣಕ್ಕೆ ಭಾರತ ಬದ್ಧವಾಗಿದೆ ಎಂದರು. 

SCROLL FOR NEXT