ಸಾಂದರ್ಭಿಕ ಚಿತ್ರ 
ದೇಶ

ಮಕ್ಕಳಿಗೆ ಕೊರೊನಾ ಲಸಿಕೆ ಸದ್ಯಕ್ಕಿಲ್ಲ: ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾ ಸಮಿತಿ

ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಜೈಡಸ್ ಕ್ಯಾಡಿಲ್ಲ ಮಕ್ಕಳ(12- 17) ಲಸಿಕೆ ಬಳಕೆಗೆ ಅನುಮತಿ ದೊರೆತಿದ್ದರೂ, ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ಸದ್ಯಕ್ಕೆ ಶುರುವಾಗುವುದಿಲ್ಲ. ವಯಸ್ಕರಿಗೆ ಲಸಿಕೆ ಹಂಚಿಕೆ ಪೂರ್ತಿಯಾದ ಬಳಿಕವಷ್ಟೇ ಮಕ್ಕಳಿಗೆ ಲಸಿಕಾ ಹಂಚಿಕೆ ನಡೆಯಲಿದೆ

ನವದೆಹಲಿ: ಭಾರತೀಯ ಔಷಧ ನಿಯಂತ್ರಣ ಸಂಸ್ಥೆಯಿಂದ ಜೈಡಸ್ ಕ್ಯಾಡಿಲ್ಲ ಮಕ್ಕಳ(12- 17) ಲಸಿಕೆ ಬಳಕೆಗೆ ಅನುಮತಿ ದೊರೆತಿದ್ದರೂ, ಮಕ್ಕಳಿಗೆ ಲಸಿಕಾ ಹಂಚಿಕೆ ಕಾರ್ಯಕ್ರಮ ಸದ್ಯಕ್ಕೆ ಶುರುವಾಗುವುದಿಲ್ಲ. ವಯಸ್ಕರಿಗೆ ಲಸಿಕೆ ಹಂಚಿಕೆ ಪೂರ್ತಿಯಾದ ಬಳಿಕವಷ್ಟೇ ಮಕ್ಕಳಿಗೆ ಲಸಿಕಾ ಹಂಚಿಕೆ ನಡೆಯಲಿದೆ ಎಂದು ರಾಷ್ಟ್ರೀಯ ಲಸಿಕಾ ಹಂಚಿಕೆ ಸಲಹಾಸಮಿತಿಯ ಅಧ್ಯಕ್ಷರು ತಿಳಿಸಿದ್ದಾರೆ. 

ಕೊರೊನಾಗೆ ತುತ್ತಾಗುವ ಸಾಧ್ಯತೆ ಹೆಚ್ಚಾಗಿರುವ, ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಕ್ಟೋಬರ್ ನಿಂದ ಜೈಡಸ್ ಕೊರೊನಾ ಲಸಿಕೆ ನೀಡಲಾಗುವುದು. 

ವಯಸ್ಕರಿಗೆ ಕೊರೊನಾ ಭೀತಿ ಹೆಚ್ಚಿರುವುದರಿಂದ ಮೊದಲ ಪ್ರಾಶಸ್ತ್ಯ ಅವರಿಗೆ ನೀಡಲಾಗುತ್ತಿದೆ. ನಂತರ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಮಕ್ಕಳಿಗೆ ಲಸಿಕೆ ನೀಡಲಾಗುವುದು. ಮಕ್ಕಳಿಗೆ ಸಾರ್ವತ್ರಿಕ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಬೇಕು ಎನ್ನುವುದು ನಮ್ಮ ಉದ್ದೇಶ ಎಂದು ಲಸಿಕಾಕರಣದ ಸಲಹಾ ಸಮಿತಿಯ ಅಧ್ಯಕ್ಷ ಎನ್.ಕೆ ಅರೋರಾ ತಿಳಿಸಿದ್ದಾರೆ.

ಕೊರೊನಾದಿಂದ ಮಕ್ಕಳಿಗೆ ಇರುವ ಅಪಾಯದ ಮಟ್ಟ ಅತ್ಯಲ್ಪ. ಹೀಗಾಗಿ ಕೊರೊನಾ ಹರಡುವಿಕೆಯನ್ನು ತಡೆಗಟ್ಟುವ ಲಸಿಕೆ ಅಭಿವೃದ್ಧಿಗೊಂಡಾಗ ಅವರಿಗೆ ಲಸಿಕೆ ನೀದಬಹುದು. ಸದ್ಯ ಮಾರುಕಟ್ಟೆಯಲ್ಲಿರುವ ಕೊರೊನಾ ಲಸಿಕೆಗಳು ಯಾವುವೂ ಕೊರೊನಾ ಹರಡುವಿಕೆಯನ್ನು ತಡೆಯುವುದಿಲ್ಲ. ಕೊರೊನಾ ತಗುಲಿದ ನಂತರ ಆಸ್ಪತ್ರೆಗೆ ದಾಖಲಾಗದಂತೆ, ಸೋಂಕಿತ ಹೆಚ್ಚಿನ ಆರೋಗ್ಯ ಸಮಸ್ಯೆಗೆ ತುತ್ತಾಗದಂತೆ ತಡೆಯುತ್ತದೆ ಎಂದು ಅವರು ಇದೇ ವೇಳೆ ಹೇಳಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಶ್ವೇತಭವನದಲ್ಲಿ ಚೀನಾ ಅಧ್ಯಕ್ಷರಿಗೆ ಅದ್ಧೂರಿ ಸ್ವಾಗತ: ಕ್ಸಿ ಜಿನ್‌ಪಿಂಗ್‌ ಜೊತೆಗಿನ ಹಳೆಯ ನಂಟು ಸ್ಮರಿಸಿ, ‘ನಮ್ಮದು ನಿಜಕ್ಕೂ ಅದ್ಭುತ ಸ್ನೇಹ’ ಎಂದ ಟ್ರಂಪ್‌..!

'ಮೋದಿ, ಶಾ, ಜ್ಞಾನೇಶ್ ಕುಮಾರ್ ದೇಶದ್ರೋಹಿಗಳು'; ನೂರಕ್ಕೆ ನೂರರಷ್ಟು ಎಲ್ಲಾ ಚುನಾವಣೆಗಳಲ್ಲೂ ಅಕ್ರಮ; ಸಂಚುಕೋರರಿಗೆ ಶಿಕ್ಷೆಯಾಗಬೇಕು: ರಾಹುಲ್ ಗಾಂಧಿ

ಶ್ವೇತ ಭವನದಲ್ಲಿ ಕ್ಸಿ ಜಿನ್ ಪಿಂಗ್- ಟ್ರಂಪ್ ಮಹತ್ವದ ಸಭೆ: AI ಮಾನವನ ನಿಯಂತ್ರಣದಲ್ಲಿರಬೇಕು; ಅಮೆರಿಕಕ್ಕೆ ಚೀನಾ ಆಗ್ರಹ!

'ಎನ್‌ಕೌಂಟರ್'ನಲ್ಲಿ ನನ್ನನ್ನು ಕೊಲ್ಲಬಹುದು: ಜೀವ ಭಯದಲ್ಲಿ ಸೋನಂ ವಾಂಗ್‌ಚುಕ್!

'ಹಿಂದುತ್ವ ಯಾರ ವಿರುದ್ಧವೂ ಅಲ್ಲ; ಅದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುತ್ತದೆ': ಉಪರಾಷ್ಟ್ರಪತಿ ರಾಧಾಕೃಷ್ಣನ್