ದೇಶ

50 ಹಾಸಿಗೆಗಳ ಆಸ್ಪತ್ರೆಗೆ ಆಕ್ಸಿಜನ್ ಪ್ಲಾಂಟ್ ಕಡ್ಡಾಯಪಡಿಸಿ ರಾಷ್ಟ್ರೀಯ ಸಮಿತಿ ಶಿಫಾರಸು

Nagaraja AB

ನವದೆಹಲಿ: 50 ಅಥವಾ ಅದಕ್ಕೂ ಹೆಚ್ಚಿನ ಹಾಸಿಗೆ ಹೊಂದಿರುವ ಎಲ್ಲಾ ಖಾಸಗಿ ಆಸ್ಪತ್ರೆಗಳು ಕನಿಷ್ಠ ಮಟ್ಟದ ಮಿನಿ ಆಕ್ಸಿಜನ್ ಪ್ಲಾಂಟ್ ನ್ನು ಕಡ್ಡಾಯವಾಗಿ ಹೊಂದಿರಬೇಕು ಎಂದು ಆಸ್ಪತ್ರೆಗಳಲ್ಲಿ ಕನಿಷ್ಠ ಮಾನದಂಡಗಳ ಅನುಷ್ಠಾನಕ್ಕಾಗಿ ರಾಷ್ಟ್ರೀಯ ಸಮಿತಿಯ ಅಡಿಯಲ್ಲಿರುವ ಸರ್ಕಾರಿ ಸಮಿತಿ ಶಿಫಾರಸು ಮಾಡಿದೆ.

ಕ್ಲಿನಿಕಲ್ ಸ್ಥಾಪನೆಗಾಗಿ ರಾಷ್ಟ್ರೀಯ ಸಮಿತಿಯಲ್ಲಿ ಇತ್ತೀಚಿಗೆ ತನ್ನ ಸಲಹೆಗಳನ್ನು ಮಂಡಿಸಿದ ಸಮಿತಿ,  ಎಲ್ಲಾ ಆಸ್ಪತ್ರೆಯ ಹಾಸಿಗೆಗಳಲ್ಲಿ ಮೂರನೇ ಒಂದು ಭಾಗವನ್ನು ಆಮ್ಲಜನಕ ಬೆಂಬಲಿತ ಹಾಸಿಗೆಗಳಾಗಿ ಪರಿವರ್ತಿಸಲು ಶಿಫಾರಸು ಮಾಡಿದೆ. ಕೇಂದ್ರೀಯ ಕ್ಲಿನಿಕಲ್ ಸ್ಥಾಪನೆ ಕಾಯಿದೆ, 2011, ಭಾರತದಾದ್ಯಂತ ಖಾಸಗಿ ಆಸ್ಪತ್ರೆಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ, ಇದುವರೆಗೆ 11 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳು ಅಳವಡಿಸಿಕೊಂಡಿವೆ, ಆದರೆ ವಿವಿಧ ರಾಜ್ಯಗಳು ತಮ್ಮದೇ ಆದ ಕಾಯ್ದೆಯ ವ್ಯತ್ಯಾಸಗಳನ್ನು ಹೊಂದಿವೆ.

ಕೋವಿಡ್ ಎರಡನೇ ಅಲೆ ವೇಳೆಯಲ್ಲಿ ದೇಶದಲ್ಲಿ ಆಕ್ಸಿಜನ್ ಬಿಕ್ಕಟ್ಟು ಉಂಟಾಗಿತ್ತು.  ಪ್ರತಿದಿನ ಸುಮಾರು 10 ಸಾವಿರ ಮೆಟ್ರಿಕ್ ಟನ್ ನಷ್ಟು ವೈದ್ಯಕೀಯ ಆಕ್ಸಿಜನ್ ಗೆ ಬೇಡಿಕೆ ಎದುರಾಗಿತ್ತು. ಈ ಬಿಕ್ಕಟ್ಟಿನಿಂದ ಪಾಠ ಕಲಿತಿದ್ದು, ಮುಂಬರುವ ಅಲೆಯ ವೇಳೆ ಇಂತಹ ಸಮಸ್ಯೆ ಎದುರಾಗದ ನಿಟ್ಟಿನಲ್ಲಿ  ಆಕ್ಸಿಜನ್ ಪ್ಲಾಂಟ್ ಗಳನ್ನು ಕಡ್ಡಾಯಪಡಿಸಿ ಸಲಹೆ ನೀಡಲಾಗಿದೆ. ದೇಶದಲ್ಲಿನ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲಿ ಪಿಎಸ್ ಎ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆಗಾಗಿ ರಾಜ್ಯಗಳಿಗೆ ಕೇಂದ್ರ ಸರ್ಕಾರ ಈಗಾಗಲೇ ಬೆಂಬಲ ನೀಡುತ್ತಿದೆ. 

50ಕ್ಕಿಂತ ಹೆಚ್ಚು ಹಾಸಿಗೆ ಹೊಂದಿರುವ ಹೊಸ ಆಸ್ಪತ್ರೆಗಳು ಕಡ್ಡಾಯವಾಗಿ ಮಿನಿ ಆಕ್ಸಿಜನ್ ಪ್ಲಾಂಟ್ ಹೊಂದಿರಬೇಕು,  ಆರರಿಂದ ಒಂದು ವರ್ಷದೊಳಗೆ ಆಕ್ಸಿಜನ್ ಪ್ಲಾಂಟ್ ಸ್ಥಾಪನೆಗೆ ಅವಕಾಶ ನೀಡುವ ಸಾಧ್ಯತೆಯಿದೆ ಎಂದು ಎನ್ ಸಿಸಿಇ ಉಪ ಸಮಿತಿ ಹೇಳಿದೆ.  ಈ ವರ್ಷ ಏಪ್ರಿಲ್-ಮೇನಲ್ಲಿ ದೇಶ ಎದುರಿಸಿದ ಬೃಹತ್ ಬಿಕ್ಕಟ್ಟಿನ ನಂತರ, ಸಾಂಕ್ರಾಮಿಕ ಹೊರತಾಗಿಯೂ ಆಮ್ಲಜನಕ ಪೂರೈಕೆ ಸಮಸ್ಯೆಯನ್ನು ರಾಜ್ಯಗಳು ಗಂಭೀರವಾಗಿ ಪರಿಗಣಿಸಿದರೆ ಒಳ್ಳೆಯದು ಎಂದು ಎನ್ ಸಿಸಿಇ ಸದಸ್ಯೆ ಮೀರಾ ಶಿವಾ ಹೇಳಿದ್ದಾರೆ. 

SCROLL FOR NEXT