ದೇಶ

ಜಾತಿ ಗಣತಿಗೆ ಒತ್ತಾಯಿಸಿ ಪ್ರಧಾನಿ ಮೋದಿಗೆ ಬಿಜೆಪಿ ನಾಯಕ ಆನಂದ ಭಾಸ್ಕರ್ ಪತ್ರ

Lingaraj Badiger

ಹೈದರಾಬಾದ್: ಭಾರತೀಯ ಜನತಾ ಪಕ್ಷದಲ್ಲೂ ಜಾತಿ ಆಧಾರಿತ ಜನಗಣತಿಗೆ ಬೇಡಿಕೆ ಹೆಚ್ಚಾಗತೊಡಗಿದ್ದು, ಪಕ್ಷದ ಮಾಜಿ ರಾಜ್ಯಸಭಾ ಸಂಸದರು ಈ ಸಂಬಂಧ ಮಂಗಳವಾರ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು, ಜಾತಿ ಗಣತಿ ನಡೆಸುವಂತೆ ಒತ್ತಾಯಿಸಿದ್ದಾರೆ.

ಬಿಜೆಪಿ ಮುಖಂಡ ಆನಂದ ಭಾಸ್ಕರ್ ರಾಪೋಲು ಅವರು ಜಾತಿ ಆಧಾರಿತ ಜನಗಣತಿಗಾಗಿ ಪ್ರಧಾನಿಗೆ ಪತ್ರ ಬರೆದಿದ್ದು, "ಭಾರತೀಯ ಸಮಾಜವನ್ನು ಹೆಚ್ಚು ಪಾರದರ್ಶಕವಾಗಿಸಲು ಮತ್ತು ಜಾತಿ ಆಧಾರಿತ ಜನಗಣತಿಯ ಪ್ರಕಾರ ಕಲ್ಯಾಣ ಕಾರ್ಯಕ್ರಮಗಳ ವಿತರಣೆಗೆ ಪ್ರಾಯೋಗಿಕ ವಾತಾವರಣವನ್ನು ಸೃಷ್ಟಿಸಲು ನಿಮ್ಮ ತ್ವರಿತ ಗಮನವನ್ನು ನಾನು ಬಯಸುತ್ತೇನೆ" ಎಂದು ಹೇಳಿದ್ದಾರೆ.

ಜಾತಿ ಆಧಾರಿತ ಜನಗಣತಿಯು ರಿಯಲ್ ಟೈಮ್ ಡೇಟಾವನ್ನು ಹೊಂದಲು ಸಹಾಯ ಮಾಡುತ್ತದೆ, ಇದು ಸಾರ್ವಜನಿಕ ನೀತಿ ಯೋಜಕರಿಗೆ ಸಹಾಯ ಮಾಡುತ್ತದೆ ಎಂದು ಅವರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

"ರಾಷ್ಟ್ರೀಯ ಏಕೀಕರಣ ಮತ್ತು ಪ್ರಾದೇಶಿಕ ಸೇರ್ಪಡೆಗಾಗಿ ನೀವು ಹಲವಾರು ಐತಿಹಾಸಿಕ ತಿದ್ದುಪಡಿಗಳನ್ನು ಮಾಡಿದ್ದೀರಿ. ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ನಿಮ್ಮ ಬದ್ಧತೆಗಳನ್ನು ಸ್ಥಾಪಿಸುತ್ತದೆ ಎಂದಿದ್ದಾರೆ.

SCROLL FOR NEXT