ದೇಶ

ಬೆಂಗಳೂರು ಮೂಲಕ ಭಾರತದಲ್ಲಿ ಒಮಿಕ್ರಾನ್ ಪತ್ತೆ: ಆಶ್ಚರ್ಯವೇನಿಲ್ಲ- ಡಬ್ಲ್ಯೂಹೆಚ್ ಒ ನಿರ್ದೇಶಕಿ

Nagaraja AB

ನವದೆಹಲಿ: ಕೊರೋನಾವೈರಸ್ ರೂಪಾಂತರಿ ತಳಿ ಒಮಿಕ್ರಾನ್ ಭಾರತದಲ್ಲಿ ಪತ್ತೆಯಾಗಿರುವುದರಲ್ಲಿ ಆಶ್ಚರ್ಯವೇನಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಆಗ್ನೇಯ ಏಷ್ಯಾದ ಪ್ರಾದೇಶಿಕ ನಿರ್ದೇಶಕಿ ಡಾ ಪೂನಂ ಖೇತ್ರಪಾಲ್ ಸಿಂಗ್ ಹೇಳಿದ್ದಾರೆ.

ಅಂತರ್ ಸಂಪರ್ಕಿತ ಜಗತ್ತಿನಲ್ಲಿ ನಾವು ವಾಸಿಸುತ್ತಿರುವುದರಿಂದ ಒಮಿಕ್ರಾನ್ ಪತ್ತೆಯಾಗಿರುವುದು ಅನಿರೀಕ್ಷಿತವೇನಲ್ಲಾ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. 

ಒಮಿಕ್ರಾನ್ ರೂಪಾಂತರಿ ಹೆಚ್ಚಿನ ಸಂಖ್ಯೆಯ ರೂಪಾಂತರಿಗಳನ್ನು ಹೊಂದಿದ್ದು, ತ್ವರಿತಗತಿಯಲ್ಲಿ ಹರಡಬಲ್ಲದ ಎಂಬ ಆತಂಕ ಮನೆ ಮಾಡಿದ್ದು, ಇದರ ಪ್ರಸರಣ, ತೀವ್ರತೆ ಮತ್ತು ರೋಗ ನಿರೋಧಕ ಶಕ್ತಿ ಕ್ಷೀಣತೆ ಸುತ್ತ ವಿಶ್ವದಾದ್ಯಂತ ಸಂಶೋಧಕರು ಅಧ್ಯಯನ ನಡೆಸುತ್ತಿದ್ದಾರೆ. 

ದಕ್ಷಿಣ ಆಫ್ರಿಕಾದಿಂದ ಬೆಂಗಳೂರಿಗೆ ಆಗಮಿಸಿದ್ದ 66 ಮತ್ತು 46 ವರ್ಷದ ವ್ಯಕ್ತಿಗಳಲ್ಲಿ ಈ ಸೋಂಕು ಪತ್ತೆಯಾಗಿದೆ. ಅಲ್ಲದೇ ಇವರಿಬ್ಬರೂ ಬೆಂಗಳೂರಿನವರೇ ಎಂದು ಹೇಳಲಾಗುತ್ತಿದೆ. ಇದರಲ್ಲಿ ಓರ್ವ ವ್ಯಕ್ತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದ್ದು, ಮತ್ತೋರ್ವ ವ್ಯಕ್ತಿ ವಿದೇಶಕ್ಕೆ ಹೋಗಿದ್ದಾರೆ ಎಂಬ ಶಂಕೆ ಇದೆ.

SCROLL FOR NEXT