ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ದಕ್ಷಿಣ ಭಾರತದಲ್ಲಿ ಟೊಮೆಟೊ ಬೆಲೆ ಕೆ.ಜಿ.ಗೆ 140 ರೂ.: ಅತಿವೃಷ್ಟಿ ಕಾರಣ

ಕರ್ನಾಟಕ ರಾಜ್ಯದಲ್ಲಿ ಮಂಗಳೂರು ಮತ್ತು ತುಮಕೂರಿನಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ 100 ರೂ. ಆದರೆ ಧಾರವಾಡದಲ್ಲಿ 75 ರೂ., ಮೈಸೂರಿನಲ್ಲಿ 74 ರೂ., ಶಿವಮೊಗ್ಗದಲ್ಲಿ 67 ರೂ.,

ಸಾಂದರ್ಭಿಕ ಚಿತ್ರ
Harshavardhan M
Updated On : 6 Dec 2021, 6:32 pm

ನವದೆಹಲಿ: ದೇಶದಲ್ಲಿ ಟೊಮೆಟೊ ಬೆಲೆ ಗಗನಕ್ಕೇರುತ್ತಿರುವುದು ಎಲ್ಲರಿಗೂ ತಿಳಿದೇ ಇರುತ್ತದೆ. ದಕ್ಷಿಣಭಾರತದ ಹಲವು ರಾಜ್ಯಗಳಲ್ಲಿ ಟೊಮೆಟೊ ಬೆಲೆ ಪ್ರತಿ ಕೆ.ಜಿ.ಗೆ 140 ರೂ.ಗಳಿಗೆ ಮಾರಾಟವಾಗುತ್ತಿದೆ. 

ಇದನ್ನೂ ಓದಿ: ಟೊಮ್ಯಾಟೋ ದರ ಈಗಲೇ ಇಳಿಯಲ್ಲ, ಇನ್ನೂ 2 ತಿಂಗಳು ಹೀಗೆಯೇ ಇರಲಿದೆ: Crisil ಸಂಶೋಧನೆ

ಸೆಪ್ಟೆಂಬರ್ ಅಂತ್ಯದಿಂದಲೂ ಟೊಮೆಟೊ ಬೆಲೆ ಏರಿಕೆಯತ್ತ ಮುಖ ಮಾಡಿತ್ತು. ಸುರಿಯುತ್ತಿರುವ ಭಾರೀ ಮಳೆ ಇದಕ್ಕೆ ಕಾರಣ ಎನ್ನಲಾಗುತ್ತಿದೆ. ಉತ್ತರ ಭಾರತದಲ್ಲಿ  ಟೊಮೆಟೊ ಬೆಲೆ 30-83 ರೂ. ಗಳಿಗೆ ಮಾರಾಟವಾಗುತ್ತಿದೆ.

Advertisement

Advertisement

ಇದನ್ನೂ ಓದಿ: ಟೊಮೆಟೊ ಬೆಲೆ ಏರಿಕೆ: ತಮಾಷೆಯ ಮೀಮ್​ ಟ್ವೀಟ್​ ಮಾಡಿ ನಟ ಪ್ರಕಾಶ್​ ರಾಜ್ ಕಾಲೆಳೆದಿದ್ದು ಯಾರನ್ನ?

ಪೂರ್ವದಲ್ಲಿ 30- 80 ರೂ.ಗಳಿಗೆ ಮಾರಾಟವಾಗುತ್ತಿದೆ ಅಂಡಮಾನ್ ನಿಕೋಬಾರ್ ನ ಮಾಯಾಬಂದರಿನಲ್ಲಿ ಟೊಮೆಟೊ ಬೆಲೆ 140 ರೂ.ಗಳಿಗೆ ಮಾರಾಟವಾಗುತ್ತಿದ್ದರೆ, ಕೇರಳದ ತಿರುವನಂತಪುರದಲ್ಲಿ ಕೆ.ಜಿಗೆ 125 ರೂ.ಗಳಿಗೆ ಮಾರಾಟವಾಗುತ್ತಿದೆ. 

ಇದನ್ನೂ ಓದಿ: ಮದನಪಲ್ಲಿ ಮಾರುಕಟ್ಟೆಯಲ್ಲಿ ಕೆಜಿ ಟೊಮೆಟೋ ಬೆಲೆ 130 ರೂ.ಗೆ ಏರಿಕೆ!

ಕರ್ನಾಟಕ ರಾಜ್ಯದಲ್ಲಿ ಮಂಗಳೂರು ಮತ್ತು ತುಮಕೂರಿನಲ್ಲಿ ಟೊಮೆಟೊ ಪ್ರತಿ ಕೆ.ಜಿ.ಗೆ 100 ರೂ. ಆದರೆ ಧಾರವಾಡದಲ್ಲಿ 75 ರೂ., ಮೈಸೂರಿನಲ್ಲಿ 74 ರೂ., ಶಿವಮೊಗ್ಗದಲ್ಲಿ 67 ರೂ., ಬೆಂಗಳೂರಿನಲ್ಲಿ 57 ರೂ.ಗಳಿಗೆ ಮಾರಾಟವಾಗುತ್ತಿದೆ. ತಮಿಳುನಾಡಿನಲ್ಲಿ ಟೊಮೆಟೊ ಬೆಲೆ ಗರಿಷ್ಟ 102 ರೂ. ಬೆಲೆಗೆ ಮಾರಾಟವಾಗುತ್ತಿದೆ.

ಇದನ್ನೂ ಓದಿ: ಪೆಟ್ರೋಲ್ ನಂತರ ಬೆಂಗಳೂರಿನಲ್ಲಿ ಸೆಂಚುರಿ ಬಾರಿಸಿದ ಟೊಮೊಟೊ: ರೇಟ್ ನೋಡಿ ಗ್ರಾಹಕರು ಸುಸ್ತೋ ಸುಸ್ತು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement