ಸಂಗ್ರಹ ಚಿತ್ರ 
ದೇಶ

ದೇಶದಲ್ಲಿ ಒಮಿಕ್ರಾನ್ ಶೇ.20ರಷ್ಟು ಹೆಚ್ಚಳ; ಸೋಂಕಿತರ ಸಂಖ್ಯೆ 53ಕ್ಕೇರಿಕೆ

ಭಾರತದಲ್ಲಿ ಕೊರೊನಾದ ಹೊಸ ರೂಪಾಂತರ ಓಮೈಕ್ರಾನ್‌ ವೇಗ ತೀವ್ರಗೊಳ್ಳುತ್ತಿದ್ದು, ಕಳೆದ ಒಂದು ದಿನದಲ್ಲಿ, ಓಮೈಕ್ರಾನ್ ಪ್ರಕರಣ ಸುಮಾರು ಶೇ.20ರಷ್ಟು ಹೆಚ್ಚಳ ಕಂಡು ದೇಶದಲ್ಲಿನ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

ನವದೆಹಲಿ: ಭಾರತದಲ್ಲಿ ಕೊರೊನಾದ ಹೊಸ ರೂಪಾಂತರ ಓಮೈಕ್ರಾನ್‌ ವೇಗ ತೀವ್ರಗೊಳ್ಳುತ್ತಿದ್ದು, ಕಳೆದ ಒಂದು ದಿನದಲ್ಲಿ, ಓಮೈಕ್ರಾನ್ ಪ್ರಕರಣ ಸುಮಾರು ಶೇ.20ರಷ್ಟು ಹೆಚ್ಚಳ ಕಂಡು ದೇಶದಲ್ಲಿನ ಒಟ್ಟಾರೆ ಓಮಿಕ್ರಾನ್ ಸೋಂಕಿತರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

ಕಳೆದ ಸೋಮವಾರದವರೆಗೆ, ದೇಶದಲ್ಲಿ 40 ಪ್ರಕರಣಗಳಿದ್ದರೆ, ಮಂಗಳವಾರ ಬೆಳಗಿನಷ್ಟೊತ್ತಿಗೆ ಸಂಖ್ಯೆ 53 ಕ್ಕೆ ಏರಿದೆ. ಮಂಗಳವಾರ, ದೆಹಲಿ ಮತ್ತು ರಾಜಸ್ಥಾನ ಎರಡೂ ರಾಜ್ಯಗಳಲ್ಲಿ 4-4 ಹೊಸ ಪ್ರಕರಣಗಳು ದಾಖಲಾಗಿವೆ. ಅಂತೆಯೇ ಮಹಾರಾಷ್ಟ್ರದಲ್ಲಿ ಮತ್ತೆ 8ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದೆ. ಇಲ್ಲಿಯವರೆಗೆ, ದೆಹಲಿಯಲ್ಲಿ ಒಮಿಕ್ರಾನ್‌ನ ಒಟ್ಟು 6 ಪ್ರಕರಣಗಳು ವರದಿಯಾಗಿದ್ದು, ಅದರಲ್ಲಿ ಒಬ್ಬರು ಗುಣಮುಖರಾಗಿದ್ದಾರೆ, ಅವರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದ ಐವರು ರೋಗಿಗಳ ಸ್ಥಿತಿ ಸಾಮಾನ್ಯವಾಗಿದೆ ಎನ್ನಲಾಗಿದೆ.

ಇನ್ನು ನಾಲ್ಕು ಪ್ರಕರಣಗಳು ಬೆಳಕಿಗೆ ಬಂದಿದ್ದು, ಈ ರೋಗಿಗಳ ಆರೋಗ್ಯ ಸ್ಥಿರವಾಗಿದೆ ಎಂದು ರಾಜಸ್ಥಾನದ ಆರೋಗ್ಯ ಸಚಿವ ಪ್ರಸಾದಿ ಲಾಲ್ ಮೀನಾ ಹೇಳಿದ್ದಾರೆ. ರಾಜ್ಯದಲ್ಲಿ ಹಿಂದಿನ ಎಲ್ಲಾ ಓಮೈಕ್ರಾನ್ ರೋಗಿಗಳಿಗೆ ಕರೋನಾ ನೆಗೆಟಿವ್ ಪರೀಕ್ಷೆ ಮಾಡಲಾಗಿದೆ.

ಇತ್ತ ದೆಹಲಿಯಲ್ಲಿ ವಿಮಾನ ನಿಲ್ದಾಣದ ಮೂಲಕ ವಿದೇಶದಿಂದ ಬಂದ ಒಟ್ಟು 74 ಜನರನ್ನು ಇದುವರೆಗೆ ಎಲ್‌ಎನ್‌ಜೆಪಿಗೆ ದಾಖಲಿಸಲಾಗಿದೆ ಎಂದು ದೆಹಲಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ತಿಳಿಸಿದ್ದಾರೆ. ಇವರಲ್ಲಿ 36 ಮಂದಿ ಡಿಸ್ಚಾರ್ಜ್ ಆಗಿದ್ದು, 38 ರೋಗಿಗಳು ಈಗ ದಾಖಲಾಗಿದ್ದಾರೆ. ಇವರಲ್ಲಿ 35 ಮಂದಿ ಕೊರೊನಾ ರೋಗಿಗಳಾಗಿದ್ದು, 5 ಮಂದಿ ಒಮೈಕ್ರಾನ್ ಪಾಸಿಟಿವ್ ಮತ್ತು 3 ಮಂದಿ ಶಂಕಿತರಾಗಿದ್ದಾರೆ. ಇಲ್ಲಿಯವರೆಗೆ, ಎಲ್‌ಎನ್‌ಜೆಪಿಯಲ್ಲಿ ಒಟ್ಟು 6 ರೋಗಿಗಳು ಓಮೈಕ್ರಾನ್ ದೃಢಪಟ್ಟಿರುವುದು ವರದಿಯಾಗಿದ್ದು, ಅದರಲ್ಲಿ ಒಬ್ಬ ರೋಗಿ ಗುಣಮುಖ ಒಬ್ಬರನ್ನು ಆಸ್ಪತ್ರೆಯಿಂದ ಬಿಡುಗಡೆಯಾಗಿದೆ.ದ್ಯಕ್ಕೆ ಓಮೈಕ್ರಾನ್ ನಿಯಂತ್ರಣದಲ್ಲಿದೆ. ಸಮುದಾಯದಿಂದ ಹರಡಿದ ಬಗ್ಗೆ ಇದುವರೆಗೆ ಯಾವುದೇ ಪ್ರಕರಣ ಬಂದಿಲ್ಲ, ಎಲ್ಲಾ ಪ್ರಕರಣಗಳು ವಿಮಾನ ನಿಲ್ದಾಣದಿಂದ ಬಂದಿವೆ. ವಿದೇಶದಿಂದ ಯಾರೇ ಬಂದರೂ ಎಲ್ಲರನ್ನೂ ಪರೀಕ್ಷಿಸುತ್ತಿದ್ದೇವೆ. ಯಾರೂ ಗಂಭೀರವಾಗಿಲ್ಲ ಎಂದಿದ್ದಾರೆ.

ಈ ಹಿಂದೆ ಗುಜರಾತ್‌ನ 42 ವರ್ಷದ ವ್ಯಕ್ತಿಯೊಬ್ಬರು ಕೋವಿಡ್‌ನ ಓಮಿಕ್ರಾನ್ ರೂಪಾಂತರದಿಂದ ಸೋಂಕಿಗೆ ಒಳಗಾಗಿದ್ದರು. ಈ ವ್ಯಕ್ತಿ ಇತ್ತೀಚೆಗೆ ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ್ದು, ಅವರನ್ನು ಮನೆಯಲ್ಲಿ ಪ್ರತ್ಯೇಕವಾಗಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.ಅವರ ಎಲ್ಲಾ ಸಂಬಂಧಿಕರು ಮತ್ತು ನಾಲ್ವರು ಸಹ-ಪ್ರಯಾಣಿಕರ ಕೋವಿಡ್ ಪರೀಕ್ಷೆ ನಡೆಸಿದ್ದು ಅವರ ವರದಿಗಳು ನಕಾರಾತ್ಮಕವಾಗಿವೆ.

ಮಹಾರಾಷ್ಟ್ರದಲ್ಲಿ 8 ಹೊಸ ಓಮಿಕ್ರಾನ್ ಪ್ರಕರಣ ಪತ್ತೆ
ಇಂದು ಮಹಾರಾಷ್ಟ್ರದಲ್ಲಿ ಮತ್ತೆ 8 ಹೊಸ ಓಮಿಕ್ರಾನ್ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಆ ಮೂಲಕ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 28ಕ್ಕೆ ಏರಿದೆ. ಇಂದು ಹೊಸದಾಗಿ ಪತ್ತೆಯಾದ 8 ಪ್ರಕರಣಗಳ ಪೈಕಿ 7 ಪ್ರಕರಣಗಳು ಮುಂಬೈನಲ್ಲೇ ಪತ್ತೆಯಾಗಿದೆ. ಒಂದು ಪ್ರಕರಣ ವಸೈ ವಿರಾರ್ ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ವರದಿಯಾಗಿದೆ. ಮುಂಬೈ ಪ್ರಕರಣಗಳು ಲಂಡನ್‌ನಿಂದ ಹಿಂತಿರುಗಿದ ಸಕಾರಾತ್ಮಕ ವ್ಯಕ್ತಿಯ ಸಂಪರ್ಕಗಳಾಗಿವೆ ಎಂದು ಬಿಎಂಸಿ ಅಧಿಕಾರಿಗಳು ಹೇಳಿದ್ದಾರೆ. 8 ರೋಗಿಗಳಲ್ಲಿ ಮೂವರು ಮಹಿಳೆಯರು ಮತ್ತು ಐದು ಪುರುಷರಾಗಿದ್ದು, ಎಲ್ಲಾ ಸೋಂಕಿತರು 24 ವರ್ಷದಿಂದ 41 ವರ್ಷ ವಯಸ್ಸಿನವರಾಗಿದ್ದಾರೆ ಎಂದು ರಾಜ್ಯ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ.  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!