ದೇಶ

ರಮೇಶ್ ಕುಮಾರ್ ಹೇಳಿರುವುದು ಸಮರ್ಥನೀಯವಲ್ಲ: ಪ್ರಿಯಾಂಕಾ ವಾದ್ರಾ ಸೇರಿದಂತೆ ಕಾಂಗ್ರೆಸ್ ನಾಯಕರ ಖಂಡನೆ

Sumana Upadhyaya

ನವದೆಹಲಿ/ಬೆಂಗಳೂರು: ಮಾಜಿ ಸ್ಪೀಕರ್, ಕಾಂಗ್ರೆಸ್ ಹಿರಿಯ ನಾಯಕ ಕೆ ಆರ್ ರಮೇಶ್ ಕುಮಾರ್ ಮಹಿಳೆಯರ ಮೇಲೆ ಅತ್ಯಾಚಾರ ಹೇಳಿಕೆ ನೀಡಿ ತೀವ್ರ ವಿವಾದ, ಟೀಕೆಗೆ ಗುರಿಯಾಗಿ ಸದನದಲ್ಲಿಯೇ ನಿನ್ನೆ ಕಲಾಪ ವೇಳೆ ಕ್ಷಮೆ ಕೋರಿದ್ದಾಯಿತು.

ರಮೇಶ್ ಕುಮಾರ್ ಅವರ ಹೇಳಿಕೆಗೆ ದೇಶ ಮತ್ತು ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ನಾಯಕರೇ ವಿರೋಧ ವ್ಯಕ್ತಪಡಿಸಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿ, ರಮೇಶ್ ಕುಮಾರ್ ಅವರು ಬಹಿರಂಗವಾಗಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದರು. 

ವಿಧಾನ ಸಭೆಯಲ್ಲಿ ನಮ್ಮ ಪಕ್ಷದ ಸದಸ್ಯರು ಆಡಿರುವ ಮಾತುಗಳನ್ನು ನಾವು ಖಂಡಿಸುತ್ತೇವೆ. ಕಾಂಗ್ರೆಸ್ ಪಕ್ಷದ ಲಿಂಗ ಸಮಾನತೆ ಮೌಲ್ಯಗಳಿಗೆ ವಿರುದ್ಧವಾಗಿ ರಮೇಶ್ ಕುಮಾರ್ ಅವರು ಸಂವೇದನಾರಹಿತರಾಗಿ ಹೇಳಿಕೆ ನೀಡಿದ್ದಾರೆ. ಶಾಸಕರು ಕ್ಷಮೆಯಾಚಿಸಿರುವುದನ್ನು ನಾವು ಗಮನಿಸಿದರೆ, ವಿಧಾನಸಭೆಯಲ್ಲಿ ನಡೆದ ಘಟನೆಯು ಮಹಿಳೆಯರ ಬಗ್ಗೆ ನಮ್ಮ ಅಂತರ್ಗತ ಹಿಂಜರಿತ ಧೋರಣೆಗಳನ್ನು ಹೊರಹಾಕಲು ರಾಜಕೀಯದಲ್ಲಿರುವ ನಾವೆಲ್ಲರೂ ಉತ್ತಮ ಕೆಲಸ ಮಾಡಬೇಕಾಗಿದೆ ಎಂಬುದರ ಸಂಕೇತವಾಗಿದೆ ಎಂದು ಡಿ ಕೆ ಶಿವಕುಮಾರ್ ಹೇಳಿದರು.

ಕಾಂಗ್ರೆಸ್ ಉತ್ತರ ಪ್ರದೇಶದಲ್ಲಿ ಹೆಣ್ಣು ಮಕ್ಕಳು, ಯುದ್ಧಕ್ಕೆ ಕೂಡ ಸಿದ್ಧ ಎಂಬ ಅಭಿಯಾನವನ್ನು ಆರಂಭಿಸಿದೆ. ಚುನಾವಣಾ ಹೊಸ್ತಿಲಿನಲ್ಲಿರುವ ಉತ್ತರ ಪ್ರದೇಶ ಚುನಾವಣೆಗೆ ಪ್ರಿಯಾಂಕಾ ಗಾಂಧಿ ವಾದ್ರಾ ಅವರೇ ಕಾಂಗ್ರೆಸ್ ಪಕ್ಷದ ಅಭಿಯಾನದ ಮುಖವಾಣಿಯಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಿಯಾಂಕಾ ವಾದ್ರಾ ಕೂಡ ಟ್ವೀಟ್ ಮಾಡಿ, ಕೆ ಆರ್ ರಮೇಶ್ ಕುಮಾರ್ ಅವರ ಹೇಳಿಕೆಯನ್ನು ನಾನು ಮುಕ್ತವಾಗಿ ಖಂಡಿಸುತ್ತೇನೆ,ಅಂತಹ ಪದಗಳನ್ನು ಯಾರಾದರೂ ಹೇಗೆ ಹೇಳಬಹುದು ಎಂಬುದು ವಿವರಿಸಲಾಗದಂತಿದೆ, ಅವು ಅಸಮರ್ಥನೀಯವಾಗಿವೆ. ಅತ್ಯಾಚಾರ ಒಂದು ಘೋರ ಅಪರಾಧ. ಇದಕ್ಕೆ ಪೂರ್ಣ ವಿರಾಮ ಹಾಕಬೇಕು ಎಂದಿದ್ದಾರೆ.

SCROLL FOR NEXT