ಸ್ಪುಟ್ನಿಕ್ ವಿ 
ದೇಶ

ಸ್ಪುಟ್ನಿಕ್ ವಿ ಲಸಿಕೆಯಿಂದ ಓಮಿಕ್ರಾನ್ ರೂಪಾಂತರವನ್ನೇ ತಟಸ್ಥಗೊಳಿಸುವ ದೃಢವಾದ ಪ್ರತಿಕಾಯ ಉತ್ಪತ್ತಿ: ಅಧ್ಯಯನ

ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯಿಂದ  ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಸ್ ನ ಹೊಸ ರೂಪಾಂತರ ಓಮಿಕ್ರಾನ್ ಅನ್ನೇ ತಟಸ್ಥಗೊಳಿಸುವ ದೃಢವಾದ ಪ್ರತಿಕಾಯ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ನವದೆಹಲಿ: ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯಿಂದ  ಇಡೀ ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್-19 ವೈರಸ್ ನ ಹೊಸ ರೂಪಾಂತರ ಓಮಿಕ್ರಾನ್ ಅನ್ನೇ ತಟಸ್ಥಗೊಳಿಸುವ ದೃಢವಾದ ಪ್ರತಿಕಾಯ ಉತ್ಪತ್ತಿಯಾಗುತ್ತದೆ ಎಂದು ಅಧ್ಯಯನವೊಂದು ತಿಳಿಸಿದೆ.

ರಷ್ಯಾದ ಕೋವಿಡ್-19 ಲಸಿಕೆ ಸ್ಪುಟ್ನಿಕ್ ವಿ ಕೊರೊನಾವೈರಸ್‌ನ ಹೆಚ್ಚು ಸಾಂಕ್ರಾಮಿಕ ರೂಪಾಂತರ ಓಮಿಕ್ರಾನ್ ರೂಪಾಂತರದ ವಿರುದ್ಧ ಹೆಚ್ಚಿನ ವೈರಸ್-ತಟಸ್ಥಗೊಳಿಸುವ ಚಟುವಟಿಕೆಯನ್ನು (ವಿಎನ್‌ಎ) ಪ್ರದರ್ಶಿಸುತ್ತದೆ ಎಂದು ಅಧ್ಯಯನವೊಂದರಿಂದ ತಿಳಿದುಬಂದಿದೆ. MedRxiv ಪ್ರಿಪ್ರಿಂಟ್ ಸರ್ವರ್‌ನಲ್ಲಿ ಪ್ರಕಟವಾದ ಗಮಲೇಯಾ ಕೇಂದ್ರದ ಪ್ರಾಥಮಿಕ ಪ್ರಯೋಗಾಲಯದ ಅಧ್ಯಯನವು ರಷ್ಯಾ ನಿರ್ಮಿತ ಸ್ಪುಟ್ನಿಕ್ ವಿ ಲಸಿಕೆಯು ತೀವ್ರವಾದ ಕಾಯಿಲೆ ಮತ್ತು ಆಸ್ಪತ್ರೆಗೆ ದಾಖಲಾಗುವ ವಿರುದ್ಧ ಪ್ರಬಲವಾದ ರಕ್ಷಣೆಯನ್ನು ಒದಗಿಸುತ್ತದೆ ಎಂದು ಹೇಳಲಾಗಿದೆ.

ಚುಚ್ಚುಮದ್ದಿನ ನಂತರ (ಲಸಿಕೆ ಹಾಕಿದ ಆರು ತಿಂಗಳಿಗಿಂತ ಹೆಚ್ಚು) ಸ್ಪುಟ್ನಿಕ್ V ನ ದೀರ್ಘಕಾಲೀನ ರಕ್ಷಣೆಯ ಸೂಚಕವಾಗಿ ಸೆರಾ ಸರ್ವೆಯನ್ನು ಬಳಸಿಕೊಂಡು ಈ ಅಧ್ಯಯನವನ್ನು ನಡೆಸಲಾಗಿತ್ತು. 

"ಸ್ಪುಟ್ನಿಕ್ ವಿ ಬಲವಾದ ಮತ್ತು ದೀರ್ಘಕಾಲೀನ ಟಿ-ಸೆಲ್ ಪ್ರತಿಕ್ರಿಯೆಯನ್ನು ಹೊರಹೊಮ್ಮಿಸುತ್ತದೆ ಮತ್ತು ಸ್ಪೈಕ್ ಪ್ರೊಟೀನ್‌ನಲ್ಲಿನ ಶೇ.80ರಷ್ಟು ಎಪಿಟೋಪ್‌ಗಳು ಓಮಿಕ್ರಾನ್ ರೂಪಾಂತರದಲ್ಲಿನ ರೂಪಾಂತರಗಳಿಂದ ಪ್ರಭಾವಿತವಾಗುವುದಿಲ್ಲ, ಓಮಿಕ್ರಾನ್‌ನಿಂದ ತೀವ್ರವಾದ ಕಾಯಿಲೆಯ ವಿರುದ್ಧ ಸ್ಪುಟ್ನಿಕ್ ವಿ ದೀರ್ಘಕಾಲೀನ ರಕ್ಷಣೆಯನ್ನು ನೀಡುತ್ತದೆ. 6-8 ತಿಂಗಳುಗಳಲ್ಲಿ ಸ್ಫುಟ್ನಿಕ್ ವಿ ನ ದೀರ್ಘಕಾಲೀನ ಟಿ-ಕೋಶದ ಪ್ರತಿರಕ್ಷೆಯು ಡೆಲ್ಟಾ ವಿರುದ್ಧ ಶೇ.80 ರಷ್ಟು ಪರಿಣಾಮಕಾರಿತ್ವ ಎಂದು ಅಧ್ಯಯನದ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಲಸಿಕೆ ಹಾಕಿಸಿಕೊಂಡ 2-3 ತಿಂಗಳ ನಂತರ ಸೆರಾ ಸರ್ವೆ ಆಧರಿಸಿ ಓಮಿಕ್ರಾನ್ ವಿರುದ್ಧ ಸ್ಪುಟ್ನಿಕ್ ಲೈಟ್ ಬೂಸ್ಟರ್ ಆಗಿ ವೈರಸ್-ತಟಸ್ಥಗೊಳಿಸುವ ಚಟುವಟಿಕೆಯನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ ಎಂದೂ ಹೇಳಲಾಗಿದೆ. 

"ಈ ಪ್ರಾಥಮಿಕ ಪ್ರಯೋಗಾಲಯದ ಅಧ್ಯಯನದಲ್ಲಿ ಸ್ಪುಟ್ನಿಕ್ ಲೈಟ್ ಬೂಸ್ಟರ್ ನಂತರ 2-3 ತಿಂಗಳ ನಂತರ ಓಮಿಕ್ರಾನ್ ವಿರುದ್ಧ ವೈರಸ್ ತಟಸ್ಥಗೊಳಿಸುವ ಚಟುವಟಿಕೆಯು ವೈಲ್ಡ್-ಟೈಪ್ ವೈರಸ್ ವಿರುದ್ಧ VNA ಗಿಂತ ಸ್ಪುಟ್ನಿಕ್ ವಿ ವ್ಯಾಕ್ಸಿನೇಷನ್ 6 ತಿಂಗಳ ನಂತರ ಹೆಚ್ಚಾಗಿದೆ. ಈ ಡೇಟಾದ ಆಧಾರದ ಮೇಲೆ ಸ್ಪುಟ್ನಿಕ್ ಲೈಟ್ ಜೊತೆಗೆ ಸ್ಪುಟ್ನಿಕ್ ವಿ ಯ ನಿರೀಕ್ಷಿತ ಪರಿಣಾಮಕಾರಿತ್ವ ಓಮಿಕ್ರಾನ್ ಸೋಂಕಿನ ವಿರುದ್ಧ ಬೂಸ್ಟರ್ ಡೋಸ್ ಶೇ.80ಕ್ಕಿಂತ ಹೆಚ್ಚಿರಬಹುದು. ಏಕೆಂದರೆ ವ್ಯಾಕ್ಸಿನೇಷನ್ ಮಾಡಿದ 6 ತಿಂಗಳ ನಂತರ ವೈಲ್ಡ್-ಟೈಪ್ ವೈರಸ್ ವಿರುದ್ಧ ಸ್ಪುಟ್ನಿಕ್ ವಿ ಶೇ.80ಕ್ಕಿಂತ ಹೆಚ್ಚು ಪರಿಣಾಮಕಾರಿತ್ವವನ್ನು ತೋರಿಸಿದೆ" ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT