ದೇಶ

ಕೇಂದ್ರದಲ್ಲಿ 'ರಾವಣ' ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಗುಂಪು ಹತ್ಯೆ ತಡೆ ಕಾನೂನು ತರಬೇಕಾಗಿದೆ: ಜಾರ್ಖಂಡ್ ಸಿಎಂ

Lingaraj Badiger

ರಾಂಚಿ: ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು, ಕೇಂದ್ರದಲ್ಲಿ "ರಾವಣ" ಪಕ್ಷ ಅಧಿಕಾರಕ್ಕೆ ಬಂದ ನಂತರ ನಮ್ಮ ಸರ್ಕಾರವು ಗುಂಪು ಹತ್ಯೆ ತಡೆ ಕಾನೂನನ್ನು ಜಾರಿಗೆ ತರಬೇಕಾಯಿತು ಎಂದು ಸೋಮವಾರ ಹೇಳಿದ್ದಾರೆ.

ಬಿಜೆಪಿ ಒಂದು ಕಡೆ ದೇಶದಲ್ಲಿ ರಾಮರಾಜ್ಯ ತರಲು ಪ್ರಯತ್ನಿಸುತ್ತಿರುವುದಾಗಿ ಹೇಳುತ್ತಿದೆ. ಮತ್ತೊಂದು ಕಡೆ ಭ್ರಷ್ಟಚಾರ  ಮತ್ತು "ಅಸಂವಿಧಾನಿಕ" ಗುಂಪು ಹತ್ಯೆ ನಡೆಸುತ್ತಿದೆ ಎಂದು ಜಾರ್ಖಂಡ್ ಸಿಎಂ ಆರೋಪಿಸಿದ್ದಾರೆ.

ಕೇಂದ್ರ ಸರ್ಕಾರ ದೇಶದಲ್ಲಿ ಗುಂಪು ಹತ್ಯೆ ತಡೆ ಕಾನೂನು ತರಬೇಕಿದೆ. ಇದು ಸರ್ಕಾರದ ಪ್ರಮುಖ ಆದ್ಯತೆಯಾಗಬೇಕು. ಆದರೆ ಸಮಾಜದ ಸಾಮರಸ್ಯ ಹಾಳು ಮಾಡುವುದು ಹಾಗೂ ಜನರ ಮಧ್ಯೆ ತಾರತಮ್ಯ ಉಂಟು ಮಾಡುವುದು ಬಿಜೆಪಿಯ ಆದ್ಯತೆಯಾಗಿದೆ. ದೇಶದಲ್ಲಿ ಗುಂಪು ಹತ್ಯೆ ತಂಡೆ ಕಾನೂನು ಅಗತ್ಯವಾಗಿದೆ ಎಂದು ಪುನರುಚ್ಛರಿಸಿದರು.

ಜಾರ್ಖಂಡ್ ಸರ್ಕಾರ ಇತ್ತೀಚೆಗೆ ಮುಕ್ತಾಯಗೊಂಡ ಚಳಿಗಾಲದ ಅಧಿವೇಶನದಲ್ಲಿ ಗುಂಪು ಹಿಂಸಾಚಾರ ಮತ್ತು ಗುಂಪು ಹತ್ಯೆ ತಡೆ ಮಸೂದೆ 2021 ಅನ್ನು ಅಂಗೀಕರಿಸಿದೆ. ಇದು ಸಮಾಜ ವಿರೋಧಿ ಶಕ್ತಿಗಳು ಕಾನೂನನ್ನು ತಮ್ಮ ಕೈಗೆ ತೆಗೆದುಕೊಳ್ಳುವುದನ್ನು ತಡೆಯುತ್ತದೆ ಎಂದು ಸೊರೆನ್ ಪ್ರತಿಪಾದಿಸಿದ್ದಾರೆ.

SCROLL FOR NEXT