ಸಾಂದರ್ಭಿಕ ಚಿತ್ರ 
ದೇಶ

ವಿಮಾನದಲ್ಲಿ, ವಿಮಾನ ನಿಲ್ದಾಣಗಳಲ್ಲಿ ಭಾರತೀಯ ಸಂಗೀತ ಹಾಕಿ: ವಿಮಾನಯಾನ ಸಚಿವಾಲಯ ಸೂಚನೆ

ವಿಮಾನಗಳು ಮತ್ತು ಟರ್ಮಿನಲ್ ಆವರಣದಲ್ಲಿ ಭಾರತೀಯ ಸಂಗೀತ ಬಿತ್ತರವನ್ನು ಪರಿಗಣಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೇಳಿದೆ.

ನವದೆಹಲಿ: ವಿಮಾನಗಳು ಮತ್ತು ಟರ್ಮಿನಲ್ ಆವರಣದಲ್ಲಿ ಭಾರತೀಯ ಸಂಗೀತ ಬಿತ್ತರವನ್ನು ಪರಿಗಣಿಸುವಂತೆ ನಾಗರಿಕ ವಿಮಾನಯಾನ ಸಚಿವಾಲಯ ಮಂಗಳವಾರ ಎಲ್ಲಾ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಹೇಳಿದೆ.

ದೇಶಿಯ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಭಾರತೀಯ ಸಂಗೀತ ಪ್ರಚಾರ ಮಾಡಬೇಕು ಎಂದು ಡಿಸೆಂಬರ್ 23 ರಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂದಿಯಾ ಅವರಿಗೆ ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಮಂಡಳಿ (ಐಸಿಸಿಆರ್ ) ಮನವಿ ಮಾಡಿತ್ತು.

ಈ ಸಂಬಂಧ ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣಗಳಿಗೆ ಪತ್ರ ಬರೆದಿರುವ ಸಚಿವಾಲಯ, ಜಗತ್ತಿನಾದ್ಯಂತ ವಿವಿಧ ವಿಮಾನಯಾನ ಸಂಸ್ಥೆಗಳು ತಮ್ಮ ದೇಶಕ್ಕೆ ಸೇರಿದ ಸಂಗೀತವನ್ನು ತಮ್ಮ ವಿಮಾನಗಳಲ್ಲಿ ಬಿತ್ತರಿಸುತ್ತಿವೆ. ಉದಾಹರಣೆಗೆ ಅಮೆರಿಕದ ವಿಮಾನಯಾನ ಸಂಸ್ಥೆಗಳು ತಮ್ಮ ವಿಮಾನಗಳಲ್ಲಿ ಜ್ಯಾಸ್ ಸಂಗೀತವನ್ನು ,ಆಸ್ಟ್ರೇಲಿಯಾದ ವಿಮಾನಗಳಲ್ಲಿ ಮೊಜ್ರಾತ್ ಸಂಗೀತವನ್ನು ಪ್ರಸಾರ ಮಾಡಿದರೆ ಮಧ್ಯ ಪೂರ್ವ ದೇಶಗಳ ವಿಮಾನಯಾನ ಸಂಸ್ಥೆಗಳು ಅರಬ್ ಸಂಗೀತವನ್ನು ಬಿತ್ತರಿಸುತ್ತದೆ ಎಂದು ಹೇಳಿದೆ. 

"ಆದರೆ, ಇಂಡಿಯನ್ ಏರ್‌ಲೈನ್ಸ್ ವಿಮಾನದಲ್ಲಿ ಭಾರತೀಯ ಸಂಗೀತವನ್ನು ಅಪರೂಪವಾಗಿ ಬಿತ್ತರಿಸಲಾಗುತ್ತಿದೆ. ನಮ್ಮ ಸಂಗೀತವು ಶ್ರೀಮಂತ ಪರಂಪರೆ ಮತ್ತು ಸಂಸ್ಕೃತಿಯನ್ನು ಹೊಂದಿದೆ ಮತ್ತು ಪ್ರತಿಯೊಬ್ಬ ಭಾರತೀಯನು ಅದರ ಬಗ್ಗೆ ನಿಜವಾಗಿಯೂ ಹೆಮ್ಮೆಪಡುವ ಅನೇಕ ವಿಷಯಗಳಲ್ಲಿ ಒಂದನ್ನು ಹೊಂದಿದೆ. ಭಾರತವು ಸಾಂಪ್ರದಾಯಿಕ ಸಂಗೀತದ ಶ್ರೀಮಂತ ವೈವಿಧ್ಯತೆಯನ್ನು ಹೊಂದಿದೆ ಎಂದು ಅದು ಸಚಿವಾಲಯ ಗಮನಿಸಿದೆ. 

"ಭಾರತದ ಅಗಾಧತೆ ಮತ್ತು ವೈವಿಧ್ಯತೆಯಿಂದಾಗಿ, ಭಾರತೀಯ ಸಂಗೀತವು ಹಲವಾರು ಪ್ರಕಾರಗಳನ್ನು ಒಳಗೊಂಡಿದೆ, ಇದರಲ್ಲಿ ಶಾಸ್ತ್ರೀಯ ಸಂಗೀತ, ಜಾನಪದ, ಲಘು ಗಾಯನ, ವಾದ್ಯ ಸಂಗೀತ ಇತ್ಯಾದಿಗಳು ಸೇರಿವೆ ಎಂದು ಅದು ಉಲ್ಲೇಖಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಜಮ್ಮುವಿನಾದ್ಯಂತ ಭಾರೀ ಮಳೆ: ಪ್ರವಾಹ, ಭೂಕುಸಿತದಿಂದ ಐವರು ಸಾವು; ಕೊಚ್ಚಿ ಹೋದ ಸೇತುವೆ; Video

Indian Navyಗೆ ಮತ್ತಷ್ಟು ಬಲ: INS Udaygiri, INS Himgiri ಯುದ್ಧನೌಕೆಗಳು ಸೇರ್ಪಡೆ!

Indre Nemdiyag Irbek: ಯೂ ಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿರುವಂತೆ ವಿವಾದಕ್ಕೆ ಗುರಿಯಾದ Devil ಸಾಂಗ್! ಟ್ಯೂನ್ ಕದ್ದ ಆರೋಪ!

ಬಿಹಾರ: ಇನ್ನು 40-50 ವರ್ಷ ಅಧಿಕಾರದಲ್ಲಿ ಇರ್ತೀವಿ ಅಂತಾ ಅಮಿತ್ ಶಾ ಗೆ ಹೇಗೆ ಗೊತ್ತು? ರಾಹುಲ್ ಗಾಂಧಿ

ಭ್ರಷ್ಟಾಚಾರ ಪ್ರಕರಣ: ಬಂಧಿತ ಶ್ರೀಲಂಕಾ ಮಾಜಿ ಅಧ್ಯಕ್ಷ ವಿಕ್ರಮಸಿಂಘೆಗೆ ಜಾಮೀನು

SCROLL FOR NEXT