ದೇಶ

ಜನಸಂಖ್ಯಾ ನಿಯಂತ್ರಣ ಕ್ರಮಕ್ಕೆ ಶರದ್ ಪವಾರ್ ಬೆಂಬಲ

Nagaraja AB

ಮುಂಬೈ: ಜನಸಂಖ್ಯಾ ನಿಯಂತ್ರಣ ಮಸೂದೆಯ ಕರಡನ್ನು ಉತ್ತರ ಪ್ರದೇಶ ಸರ್ಕಾರ ಬಿಡುಗಡೆ ಮಾಡಿದ ಬೆನ್ನಲ್ಲೇ, ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡಾ ಜನಸಂಖ್ಯೆ ನಿಯಂತ್ರಣ ಕ್ರಮವನ್ನು ಭಾನುವಾರ ಬೆಂಬಲಿಸಿದ್ದಾರೆ.

ದೇಶದ ಆರ್ಥಿಕತೆ, ಆರೋಗ್ಯಕರ ಜೀವನ ಮಟ್ಟ ಮತ್ತು ಸಮತೋಲಿತ ವಾತಾವರಣವನ್ನು ಉಳಿಸಿಕೊಳ್ಳಲು ಜನಸಂಖ್ಯೆಯನ್ನು ನಿಯಂತ್ರಿಸಬೇಕಾಗಿದೆ ಎಂದು ಅವರು ಹೇಳಿದ್ದಾರೆ. ಜನಸಂಖ್ಯಾ ನಿಯಂತ್ರಣದ ಪರವಾಗಿ ಅವರು ನೀಡಿದ ಹೇಳಿಕೆಯು ಇತರ ಪಕ್ಷಗಳಲ್ಲೂ ಈ ವಿಷಯ ಪ್ರತಿಧ್ವನಿಸುತ್ತಿದೆ ಎಂಬುದನ್ನು ತೋರಿಸುತ್ತದೆ.

ವಿಶ್ವ ಜನಸಂಖ್ಯಾ ದಿನದ ಸಂದರ್ಭದಲ್ಲಿ ಮಾತನಾಡಿದ ಶರದ್ ಪವಾರ್, ರಾಷ್ಟ್ರದ ಆರ್ಥಿಕತೆ, ಒಟ್ಟು ರಾಷ್ಟ್ರೀಯ ಆದಾಯ, ಆರೋಗ್ಯಕರ ಜೀವನ ಮಟ್ಟ ಮತ್ತು ಸಮತೋಲಿತ ವಾತಾವರಣವನ್ನು ಉಳಿಸಿಕೊಳ್ಳಲು ಜನಸಂಖ್ಯಾ ನಿಯಂತ್ರಣದ ಸಂದೇಶ ಎಲ್ಲರಿಗೂ ತಲುಪಬೇಕಾಗಿದೆ. ಪ್ರಜ್ಞಾಪೂರ್ವಕ ಪ್ರತಿಯೊಬ್ಬ ನಾಗರಿಕನು ವಿಶ್ವ ಜನಸಂಖ್ಯಾ ದಿನದಂದು ಜನಸಂಖ್ಯಾ ನಿಯಂತ್ರಣಕ್ಕೆ ಕೊಡುಗೆ ನೀಡುವ ಬದ್ಧತೆಯನ್ನು ಮಾಡಬೇಕು ಎಂದು ಹೇಳಿದರು.

SCROLL FOR NEXT