ದೇಶ

ನಾನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಲ್ಲ: ಶರದ್ ಪವಾರ್

Srinivasamurthy VN

ಮುಂಬೈ: ರಾಷ್ಟ್ರಪತಿ ಆಯ್ಕೆಗಾಗಿ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ನಾನು ಸ್ಪರ್ಧಿಸುವುದಿಲ್ಲ ಎಂದು ಎನ್‌ಸಿಪಿ ವರಿಷ್ಠ ಶರದ್‌ ಪವಾರ್ ಹೇಳಿದ್ದಾರೆ.

ಈ ಕುರಿತಂತೆ ಮುಂಬೈನಲ್ಲಿ ಮಾತನಾಡಿದ ಅವರು, ನಾನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿಯಲ್ಲ. ಅಲ್ಲದೆ 2024ರ ಲೋಕಸಭಾ ಚುನಾವಣೆಯ ಪ್ರಧಾನಿ ಅಭ್ಯರ್ಥಿಯೂ ಅಲ್ಲ ಎಂದು ಬುಧವಾರ ಸ್ಪಷ್ಟಪಡಿಸಿದ್ದಾರೆ.

300ಕ್ಕೂ ಅಧಿಕ ಸಂಸದರನ್ನು ಹೊಂದಿರುವ ಪಕ್ಷ ಆಡಳಿತ ನಡೆಸುತ್ತಿದೆ. ಹೀಗಾಗಿ ರಾಷ್ಟ್ರಪತಿ ಚುನಾವಣೆಯ ಫಲಿತಾಂಶ ಏನಾಗಲಿದೆ ಎಂಬುದು ನನಗೆ ತಿಳಿದಿದೆ. ನಾನು ರಾಷ್ಟ್ರಪತಿ ಚುನಾವಣೆಯ ಅಭ್ಯರ್ಥಿ ಆಗಲಾರೆ. ಅಂತೆಯೇ 2024ರಲ್ಲಿ ನಡೆಯುವ ಲೋಕಸಭಾ ಚುನಾವಣೆ ಅಥವಾ ಮಹಾರಾಷ್ಟ್ರದ  ವಿಧಾನಸಭಾ ಚುನಾವಣೆಗಳ ಬಗ್ಗೆ ಈಗ ಯಾವ ನಿರ್ಧಾರ ಕೈಗೊಂಡಿಲ್ಲ. ಚುನಾವಣೆಗಳು ಇನ್ನೂ ದೂರ ಇವೆ. ರಾಜಕೀಯ ಸನ್ನಿವೇಶಗಳೂ ಬದಲಾಗುತ್ತಲೇ ಇರುತ್ತವೆ ಎಂದೂ ಅವರು ಹೇಳಿದ್ದಾರೆ.

ಇನ್ನು ಚುನಾವಣಾ ತಂತ್ರಗಾರ ಪ್ರಶಾಂತ್‌ ಕಿಶೋರ್‌ ಅವರು ರಾಹುಲ್‌ ಗಾಂಧಿ ಹಾಗೂ ಶಿವಸೇನಾ ಮುಖ್ಯ ವಕ್ತಾರ ಸಂಜತ್‌ ರಾವತ್‌ ಅವರ ಭೇಟಿ ಬೆನ್ನಲ್ಲೇ ಮಾತನಾಡಿದ್ದ ಸಂಜಯ್ ರಾವತ್, ಪ್ರಧಾನಿ ಹುದ್ದೆಗೆ ಶರದ್‌ ಪವಾರ್ ಅವರಿಗಿಂತ ಉತ್ತಮ ನಾಯಕ ತಮಗೆ ಕಾಣಿಸುತ್ತಿಲ್ಲ ಎಂಬ ಹೇಳಿಕೆ ವ್ಯಾಪಕ ಸುದ್ದಿಗೆ ಗ್ರಾಸವಾದ ಬೆನ್ನಲ್ಲೇ ಶರದ್ ಪವಾರ್ ಈ ಸ್ಪಷ್ಟನೆ ನೀಡಿದ್ದಾರೆ.

SCROLL FOR NEXT