ಡಾ ಕೆ ಎಸ್ ರಾಧಾಕೃಷ್ಣನ್‍ 
ದೇಶ

ಕೇರಳ ಬಿಜೆಪಿ ಉಪಾಧ್ಯಕ್ಷರಿಗೆ ಇಸ್ಲಾಮಿಕ್‍ ಸ್ಟೇಟ್ ಸಂಘಟನೆಯಿಂದ ಜೀವ ಬೆದರಿಕೆ ಕರೆ

ಕೇರಳ ಬಿಜೆಪಿ ಉಪಾಧ್ಯಕ್ಷ ಡಾ ಕೆ ಎಸ್ ರಾಧಾಕೃಷ್ಣನ್‍ ಅವರಿಗೆ ಇಸ್ಲಾಮಿಕ್‍ ಸ್ಟೇಟ್‍ (ಐಎಸ್ ಐಎಸ್‍ ) ಭಯೋತ್ಪಾದಕ ಸಂಘಟನೆಯಿಂದ ಜೀವ ಬೆದರಿಕೆ ಕರೆ ಬಂದಿದೆ.

ಕೊಚ್ಚಿ: ಕೇರಳ ಬಿಜೆಪಿ ಉಪಾಧ್ಯಕ್ಷ ಡಾ ಕೆ ಎಸ್ ರಾಧಾಕೃಷ್ಣನ್‍ ಅವರಿಗೆ ಇಸ್ಲಾಮಿಕ್‍ ಸ್ಟೇಟ್‍ (ಐಎಸ್ ಐಎಸ್‍ ) ಭಯೋತ್ಪಾದಕ ಸಂಘಟನೆಯಿಂದ ಜೀವ ಬೆದರಿಕೆ ಕರೆ ಬಂದಿದೆ.

971556443094 ಸಂಖ್ಯೆಯಿಂದ ರಾಧಾಕೃಷ್ಣನ್‍ ಅವರಿಗೆ ಕೊಲ್ಲುವ ಬೆದರಿಕೆ ಕರೆ ಬಂದಿದೆ.  ಕರೆ ಸ್ವೀಕರಿಸಿದಾಗ ಅತ್ತ ಕಡೆಯ ವ್ಯಕ್ತಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಐಎಸ್ ಐಎಸ್‍ ಭಯೋತ್ಪಾದಕ ಎಂದು ಹೇಳಿಕೊಳ್ಳುತ್ತಿರುವ ಅಪರಿಚಿತ ವ್ಯಕ್ತಿ 11:32 ಗಂಟೆಗೆ ಕರೆ ಮಾಡಿದ್ದಾನೆ ಎಂದು ಬಿಜೆಪಿ ಮುಖಂಡ ಶನಿವಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಯುಎಇ ಮೂಲದ ಸಂಖ್ಯೆಯಿಂದ ಬಿಜೆಪಿ ನಾಯಕನನ್ನು ಸಂಪರ್ಕಿಸಲು ಇನ್ನೂ ಎರಡು ಪ್ರಯತ್ನಗಳು ನಡೆದವು. ಅದರ ನಂತರ ರಾಜ್ಯ ಬಿಜೆಪಿ ಉಪಾಧ್ಯಕ್ಷರು ಎರ್ನಾಕುಳಂನಗರ ಪೊಲೀಸ್ ಆಯುಕ್ತರಿಗೆ ಇ-ಮೇಲ್ ಮೂಲಕ ದೂರು ನೀಡಿದ್ದರು.

ಕಳೆದ ಕೆಲವು ವರ್ಷಗಳಲ್ಲಿ ರಾಧಾಕೃಷ್ಣನ್ ಅವರು ಐಎಸ್ ಐಎಸ್‍ ನಿಂದ ಪಡೆದ ಮೂರನೇ ಬೆದರಿಕೆ ಕರೆ ಇದಾಗಿದೆ. ಇದಕ್ಕೂ ಮೊದಲು ಕೇರಳದ ಗೃಹ ಸಚಿವರಾಗಿರುವ ಕೊಡಿಯೇರಿ ಬಾಲಕೃಷ್ಣನ್ ಅವರ ಅಧಿಕಾರಾವಧಿಯಲ್ಲಿ ಇಂತಹ ಬೆದರಿಕೆ ಬಂದಾಗ ಅವರಿಗೆ ಪೊಲೀಸ್ ರಕ್ಷಣೆ ನೀಡಲಾಗಿತ್ತು.

ಅವರು ಕೇರಳ ಸಾರ್ವಜನಿಕ ಸೇವಾ ಆಯೋಗದ ಮಾಜಿ ಅಧ್ಯಕ್ಷರೂ ಆಗಿದ್ದರು.

ಎಡಿಜಿಪಿ ಮನೋಜ್ ಅಬ್ರಹಾಂ ಅವರ ಮುಂದೆ ಸಲ್ಲಿಸಲಾದ ದೂರಿನಲ್ಲಿ ಬೆದರಿಕೆ ಬಗ್ಗೆ ಬಿಜೆಪಿ ಮುಖಂಡರಿಂದ ಈ ಹಿಂದೆ ದಾಖಲಾದ ದೂರಿನಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಮೂಲಗಳು ತಿಳಿಸಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ.ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

ಚಿಂತಾಮಣಿಯ Dictator, ನಿನ್ನ ವಿರುದ್ಧ ಸಮರ ನಿರಂತರ: ಎಂಸಿ ಸುಧಾಕರ್ ವಿರುದ್ಧ ಪ್ರದೀಪ್ ಈಶ್ವರ್ ಮತ್ತೆ ಕಿಡಿ

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video