ದೇಶ

ದೆಹಲಿಯಲ್ಲಿ ಸೋಮವಾರದಿಂದ ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಸಿನಿಮಾ ಥಿಯೇಟರ್ ಓಪನ್

Nagaraja AB

ನವದೆಹಲಿ: ಏಪ್ರಿಲ್ ಮತ್ತು ಮೇ ನಲ್ಲಿ ಕೋವಿಡ್-19 ಸಾಂಕ್ರಾಮಿಕದ ಎರಡನೇ ಹಂತದ ವೇಳೆಯಲ್ಲಿ ಅಭೂತಪೂರ್ವ ರೀತಿಯಲ್ಲಿ ಸೋಂಕು ಹೆಚ್ಚಳಕ್ಕೆ ಸಾಕ್ಷಿಯಾಗಿದ್ದ ದೆಹಲಿಯಲ್ಲಿ ಕಳೆದ ಕೆಲವು ವಾರಗಳಿಂದ ಪರಿಸ್ಥಿತಿ ಸುಧಾರಣೆಯಾಗಿದ್ದು, ಹಂತ ಹಂತವಾಗಿ ಸರ್ಕಾರ ನಗರದಲ್ಲಿ ಪುನರಾರಂಭ ಮಾಡುತ್ತಿದೆ.

ಡಿಡಿಎಂಎ ನೂತನ ಅನ್ ಲಾಕ್ ಮಾರ್ಗಸೂಚಿಯಂತೆ, ದೆಹಲಿ ನಗರ ಜೀವನಾಡಿಯಾಗಿರುವ ಮೆಟ್ರೋ ರೈಲು ಸೋಮವಾರದಿಂದ ಶೇ.100 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಆದರೆ, ಪ್ರಯಾಣಿಕರು ನಿಂತು ಪ್ರಯಾಣಿಸಲು ಅವಕಾಶವಿಲ್ಲ.

ಸಿನಿಮಾ ಹಾಲ್ ಗಳು, ಥಿಯೇಟರ್ ಗಳು ಮತ್ತು ಮಲ್ಟಿಪ್ಲಿಕ್ಸ್ ಗಳು ಜುಲೈ 26 ರಿಂದ ಶೇಕಡಾ 50 ರಷ್ಟು ಆಸನ ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಲು ಅವಕಾಶ ನೀಡಲಾಗಿದೆ. ಬಿ2ಬಿ ಪ್ರದರ್ಶನಕೂ ಅವಕಾಶ ನೀಡಲಾಗಿದೆ. ಆದರೆ, ಕೇವಲ ವಾಣಿಜ್ಯ ಸಂದರ್ಶಕರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ.

ಮದುವೆ ಹಾಗೂ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು 100 ಜನರಿಗೆ ಅವಕಾಶ ಮಾಡಿಕೊಡಲಾಗಿದೆ. ಸ್ಪಾಗಳು ಕೂಡಾ ತೆರಯಬಹುದು ಆದರೆ, ಎಲ್ಲಾ ಸಿಬ್ಬಂದಿಗಳು ಸಂಪೂರ್ಣವಾಗಿ ಲಸಿಕೆ ಹಾಕಿಸಿಕೊಂಡಿರಬೇಕು ಅಥವಾ ಆರ್ ಟಿ- ಪಿಸಿಆರ್ ಪರೀಕ್ಷೆ ಮಾಡಿಸಿಕೊಳ್ಳಬೇಕು ಎಂದು ಡಿಡಿಎಂಎ ಹೇಳಿದೆ.

SCROLL FOR NEXT