ದೇಶ

ಅರುಣಾಚಲ ಪ್ರದೇಶದ ಐಪಿಎಸ್ ಆಕಾಂಕ್ಷಿಗಳಿಗೆ ಕನಿಷ್ಠ ಎತ್ತರ ನಿಯಮಾವಳಿಯಲ್ಲಿ ವಿನಾಯಿತಿ ಕೊಡಿ: ಕೇಂದ್ರಕ್ಕೆ ಬಿಜೆಪಿ ಸಂಸದ ಮನವಿ

Raghavendra Adiga

ಇಟಾನಗರ: ಅರುಣಾಚಲ ಪ್ರದೇಶದ ಅಭ್ಯರ್ಥಿಗಳಿಗೆ ಭಾರತೀಯ ಪೊಲೀಸ್ ಸೇವೆ (ಐಪಿಎಸ್) ಗೆ ಸೇರಲು ಅನುಕೂಲವಾಗುವಂತೆ ಕನಿಷ್ಠ ಎತ್ತರ ಮಿತಿಯನ್ನು ಸಡಿಲಿಸುವಂತೆ ಬಿಜೆಪಿ ಲೋಕಸಭಾ ಸಂಸದ ತಪೀರ್ ಗಾವೋ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ಅರುಣಾಚಲ ಪ್ರದೇಶದ ಅಭ್ಯರ್ಥಿಗಳಿಗೆ ಎತ್ತರದ ನಿಯಮಾವಳಿಯಲ್ಲಿ ವಿನಾಯಿತಿ ನೀಡಿದರೆ ಅರ್ಹರಾಗಿರುವ ಸಮುದಾಯಗಳಿಗೆ ಸೇರಿದವರಿಗೆ ಅನುಕೂಲವಾಗಲಿದೆ ಎಂದು ಅವರು ಹೇಳಿದರು.

ಕೇಂದ್ರ ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆ ಮತ್ತು ಪಿಂಚಣಿ ರಾಜ್ಯ ಸಚಿವ ಜಿತೇಂದ್ರ ಸಿಂಗ್ ಅವರಿಗೆ ಬರೆದ ಪತ್ರದಲ್ಲಿ, ಅರುಣಾಚಲ ಪ್ರದೇಶದ ಪೂರ್ವ ಕ್ಷೇತ್ರದ ಸಂಸದ ಗಾವೊ ಅವರು ಐಪಿಎಸ್ ಅಧಿಕಾರಿಯಾಗುವ ಕನಸು ಕಂಡಿದ್ದ ಅರುಣಾಚಲ ಪ್ರದೇಶದ ವೈದ್ಯರೊಬ್ಬರು 2.5 ಸೆಂ.ಮೀ. ಎತ್ತರದಲ್ಲಿನ ವ್ಯತ್ಯಾಸದಿಂದ ಕನಸನ್ನು ಕೈಬಿಟ್ಟರೆಂದಿದ್ದಾರೆ.

ಅರುಣಾಚಲ ಪ್ರದೇಶದ ಅಪ್ಪರ್ ಸಿಯಾಂಗ್ ಜಿಲ್ಲೆಯ ಓಜಿಂಗ್ ದಮೆಂಗ್ ಅವರು ಕೇಂದ್ರ ನಾಗರಿಕ ಸೇವೆಗಳ ಪರೀಕ್ಷೆಯಲ್ಲಿ ಪರಿಶಿಷ್ಟ ಪಂಗಡ ವಿಭಾಗದಲ್ಲಿ ಐಪಿಎಸ್ ಅಧಿಕಾರಿಗಳ ತಾತ್ಕಾಲಿಕ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದರು. ಆದರೆ ವೈದ್ಯಕೀಯ ಪರೀಕ್ಷೆಯಲ್ಲಿ ಅವರು ಐಪಿಎಸ್‌ಗೆ ಅನರ್ಹನೆಂದು ತಿಳಿದುಬಂದಿದೆ ಏಕೆಂದರೆ ಅವರ ಎತ್ತರ 162.5 ಸೆಂ.ಮೀ ಇದು ಐಪಿಎಸ್‌ಗಾಗಿ ಪುರುಷ ಅಭ್ಯರ್ಥಿಗಳಿಗೆ ಅಗತ್ಯವಿರುವ ಕನಿಷ್ಠ ಎತ್ತರ 165 ಸೆಂ.ಮೀ ಗಿಂತ 2.5 ಸೆಂ.ಮೀ ಕಡಿಮೆ.    

ಕನಿಷ್ಠ 165 ಸೆಂ.ಮೀ ಎತ್ತರವು ಅರುಣಾಚಲ ಪ್ರದೇಶದ ಆಕಾಂಕ್ಷಿಗಳ ಐಪಿಎಸ್ ಕನಸನ್ನು ಮುರಿಯುತ್ತಿದೆ ಎಂದು ಗಾವೊ ಹೇಳಿದ್ದಾರೆ.

ಅರುಣಾಚಲ ಪ್ರದೇಶದ ರಾಜ್ಯ ಪೊಲೀಸ್ ಅಧಿಕಾರಿಗಳ ನೇಮಕದಲ್ಲಿ ಕನಿಷ್ಠ 160 ಸೆಂ.ಮೀ ಎತ್ತರ(ಪುರುಷರಿಗೆ) ಪರಿಗಣಿಸಲಾಗುವುದು. ಎಂದು ಅವರು ಹೇಳಿದರು. ಈ ಅಧಿಕಾರಿಗಳನ್ನು ನಂತರ ಐಪಿಎಸ್‌ಗೆ ಬಡ್ತಿ ನೀಡಲಾಗುತ್ತದೆ. "ಇದನ್ನು ಗಮನದಲ್ಲಿಟ್ಟುಕೊಂಡು, ಅರುಣಾಚಲ ಪ್ರದೇಶದ ಸಾವಿರಾರು ನಾಗರಿಕ ಸೇವಾ ಆಕಾಂಕ್ಷಿಗಳು ಪ್ರತಿವರ್ಷ ಯುಪಿಎಸ್ಸಿ ಪರೀಕ್ಷೆಯಲ್ಲಿ ಸ್ಪರ್ಧಿಸುತ್ತಿದ್ದಾರೆ ಮತ್ತು ದೇಶಕ್ಕೆ ಸೇವೆ ಸಲ್ಲಿಸುವ ಅವಕಾಶಗಳನ್ನು ಕಸಿದುಕೊಳ್ಳುವಂತಾಗಬಾರದು ಎಂಬ ಅಂಶವನ್ನು ಪರಿಗಣಿಸಿ. ಈ ವಿಷಯವನ್ನು ಗಮನಿಸಲು ನಾನು ವಿನಂತಿಸುತ್ತೇನೆ ಮತ್ತು ಅರುಣಾಚಲ ಪ್ರದೇಶದ ಜನರ ಹಿತದೃಷ್ಟಿಯಿಂದ ಅಗತ್ಯ ನಿರ್ದೇಶನಗಳು ಮತ್ತು ಕ್ರಮಗಳನ್ನು ತೆಗೆದುಕೊಳ್ಳುವುದು" ಬಿಜೆಪಿ ಸಂಸದ ಹೇಳಿದರು.

SCROLL FOR NEXT