ದೇಶ

ಕೋವಿಡ್-19: ತಮಿಳುನಾಡಿನಲ್ಲಿ ಜೂನ್ 14ರವರೆಗೆ ಲಾಕ್ಡೌನ್ ವಿಸ್ತರಣೆ

Manjula VN

ಚೆನ್ನೈ: ಕೋವಿಡ್-19 ಸೋಂಕು ಇಳಿದಿರುವ  ಜಿಲ್ಲೆಗಳಲ್ಲಿ ಕೆಲ ಸಡಿಲತೆಯೊಂದಿಗೆ ಮತ್ತು ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಜಿಲ್ಲೆಗಳಲ್ಲಿ ಹೆಚ್ಚಿನ ನಿರ್ಬಂಧಗಳೊಂದಿಗೆ ತಮಿಳುನಾಡಿನಲ್ಲಿ ಮತ್ತೆ ಒಂದು ವಾರ ಲಾಕ್ ಡೌನ್ ವಿಸ್ತರಣೆ ಮಾಡಲಾಗಿದೆ. 

ತಮಿಳುನಾಡು ಮುಖ್ಯಮಂತ್ರಿ ಎಂಕೆ ಸ್ಟಾಲಿನ್ ಅವರು ಜೂನ್ 14 ರವರೆಗೆ ಲಾಕ್ಡೌನ್ ವಿಸ್ತರಣೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. 

ಕೊವೈ, ನೀಲಗಿರಿ, ತಿರುಪ್ಪೂರ್, ಇರೋಡೆ, ಸೇಲಂ, ಕರೂರು, ನಮಕ್ಕಲ್, ತಂಜಾವೂರು, ತಿರುವರೂರ್, ನಾಗಪಟ್ಟಿನಾಮ್ ಮತ್ತು ಮೈಲಾಡುತುರೈ ನಲ್ಲಿ ಕೊರೋನಾ ಸೋಂಕು ಹೆಚ್ಚಾಗಿದೆ. ಈ ಪ್ರದೇಶಗಳಲ್ಲಿ ಬಿಗಿ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಕೆಲವು ಚಟುವಟಿಕೆಗಳಿಗಷ್ಟೇ ಅನುಮತಿ ನೀಡಲಾಗಿದೆ. 

SCROLL FOR NEXT