ದೇಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 2.1 ತೀವ್ರತೆಯ ಲಘು ಭೂಕಂಪ: ಆತಂಕದಲ್ಲಿ ಜನತೆ

Manjula VN

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾನುವಾರ ಭೂಕಂಪನ ಸಂಭವಿಸಿದ್ದು, ಕಂಪನದ ತೀವ್ರತೆ, ರಿಕ್ಟರ್ ಮಾಪಕನದಲ್ಲಿ 2.1 ಎಂದು ದಾಖಲಾಗಿರುವುದಾಗಿ ನ್ಯಾಷನಲ್ ಸೆಂಟರ್ ಫಾರ್ ಸೀಸ್ಮಾಲಜಿ ತಿಳಿಸಿದೆ.

ರಿಕ್ಟರ್ ಮಾಪಕದಲ್ಲಿ 2.1 ತೀವ್ರತೆಯ ಭೂಕಂಪ ದೆಹಲಿಯ ಪಂಜಾಬಿ ಬಾಗ್ ಬಳಿ ಸಂಭವಿಸಿದೆ ಎಂದು ರಾಷ್ಟ್ರಿಯ ಭೂಕಂಪನದ ಕೇಂದ್ರ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಭೂಕಂಪನದಿಂದ ಜೀವ ಅಥವಾ ಆಸ್ತಿಗೆ ಯಾವುದೇ ಹಾನಿ ಸಂಭವಿಸಿರುವ ಬಗ್ಗೆ ಯಾವುದೇ ವರದಿಗಳಾಗಿಲ್ಲ. 

ದೆಹಲಿ ಜೊತೆಗೆ ಈಶಾನ್ಯ ರಾಜ್ಯಗಳಾದ ಅರುಣಾಚಲ ಪ್ರದೇಶ ಮತ್ತು ಮಣಿಪುರದಲ್ಲಿಯೂ ಇಂದು ಬೆಳಗಿನ ಜಾವ ಒಂದರ ಹಿಂದೆ ಇನ್ನೊಂದರಂತೆ ಭೂಕಂಪ ಸಂಭವಿಸಿದ್ದು, ಜನರಲ್ಲಿ ಭೀತಿ ಉಂಟು ಮಾಡಿದೆ.

3.1-3.6 ತೀವ್ರತೆ ಭೂಕಂಪಗಳು ಸಂಭವಿಸಿವೆ ಎಂದು ರಾಷ್ಟ್ರೀಯ ಭೂಕಂಪ ಮಾಪನ ಸಂಸ್ಥೆ ಹೇಳಿದೆ. ಆದರೆ ಭೂಕಂಪದಿಂದ ಯಾವುದೇ ಜೀವಹಾನಿ ಅಥವಾ ಆಸ್ತಿಪಾಸ್ತಿ ಹಾನಿಯಾದ ಬಗ್ಗೆ ತಕ್ಷಣಕ್ಕೆ ವರದಿಯಾಗಿಲ್ಲ.

ಎನ್‌ಸಿಎಸ್ ಪ್ರಕಾರ ಮೊದಲ ಭೂಕಂಪ ಅರುಣಾಚಲ ಪ್ರದೇಶದ ಪಂಗಿನ್‌ನಲ್ಲಿ ಮಧ್ಯರಾತ್ರಿ ಬಳಿಕ 1:02 ಗಂಟೆಗೆ ಸಂಭವಿಸಿದೆ. ಬಳಿಕ ಮಣಿಪುರದ ಉಕ್ರುಲ್ ಜಿಲ್ಲೆಯ ಶಿರೂಯಿ ಗ್ರಾಮದಲ್ಲಿ 3.6 ತೀವ್ರತೆಯ ಭೂಕಂಪ ಸಂಭವಿಸಿತು. ಮೊದಲ ಭೂಕಂಪ 20 ಕಿಲೋಮೀಟರ್ ಆಳದಲ್ಲಿ ಮತ್ತು ಎರಡನೇ ಭೂಕಂಪ 30 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಸಂಸ್ಥೆ ಹೇಳಿದೆ.

ಮುಂಜಾನೆ 5:41ರ ಸುಮಾರಿಗೆ ಮತ್ತೊಂದು ಲಘು ಭೂಕಂಪ ಸಂಭವಿಸಿದ್ದು, ಇದರ ತೀವ್ರತೆ ರಿಕ್ಟರ್ ಮಾಪಕದಲ್ಲಿ 3.1ರಷ್ಟಿತ್ತು. ಉತ್ತರಾಖಂಡದ ಉತ್ತರಕಾಶಿಯಿಂದ ಉತ್ತರಕ್ಕೆ 62 ಕಿಲೋಮೀಟರ್ ದೂರದಲ್ಲಿ ಈ ಭೂಕಂಪ ಸುಮಾರು 15 ಕಿಲೋಮೀಟರ್ ಆಳದಲ್ಲಿ ಸಂಭವಿಸಿದೆ ಎಂದು ಎನ್‌ಸಿಎಸ್ ವರದಿ ಮಾಡಿದೆ.

SCROLL FOR NEXT