ದೇಶ

ಸಂಕಟದ ನಡುವೆ ಭರವಸೆಯ ಕಥೆಗಳು: ಕೊರೋನಾ ಜಯಿಸಿದ 103 ವರ್ಷದ ವೃದ್ದ, ಪಂಜಾಬ್ ಮೂಲದ ನವಜಾತ ಶಿಶು!

Raghavendra Adiga

ಪಲ್ಗ್ಹರ್: ಮಹಾರಾಷ್ಟ್ರದ ಪಲ್ಗ್ಹರ್ ಮೂಲದ 103 ವರ್ಷದ ವ್ಯಕ್ತಿಯೊಬ್ಬರು ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.

ಇಲ್ಲಿನ ವೀರೇಂದ್ರ ನಗರ ಪ್ರದೇಶದ ಮೂಲದವರಾದ ಶಮರಾವ್ ಇಂಗಳೆ ಅವರನ್ನು ಸೋಂಕಿನ ಕಾರಣ ಪಲ್ಗ್ಹರ್ ನ ಗ್ರಾಮೀಣ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿತ್ತು. ರೋಗದಿಂದ ಚೇತರಿಸಿಕೊಂಡ ನಂತರ ಅವರನ್ನು ಶನಿವಾರ ಡಿಸ್ಚಾರ್ಜ್ ಮಾಡಲಾಗಿದೆ. 

ಆಸ್ಪತ್ರೆಯ ವೈದ್ಯರ ಪ್ರಕಾರ, ವೃದ್ಧರು ತನಗೆ ಒದಗಿಸಿದ ವೈದ್ಯಕೀಯ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸಿದರು. ಅಲ್ಲದೆ ಆಸ್ಪತ್ರೆ ಸಿಬ್ಬಂದಿಗಳೊಂದಿಗೆ ಸಹಕರಿಸಿದರು. ಅವರು ಶನಿವಾರ ನಗುಮುಖದೊಡನೆ ಆಸ್ಪತ್ರೆಯಿಂದ ಹೊರ ನಡೆದರು. 

ಪಲ್ಗ್ಹರ್  ಕಲೆಕ್ಟರ್ ಡಾ.ಮಣಿಕ್ ಗುರ್ಶಾರ್ ಮತ್ತು ಆಸ್ಪತ್ರೆಯ ಸಿಬ್ಬಂದಿ ಅವರ ಡಿಸ್ಚಾರ್ಜ್ ಸಮಯದಲ್ಲಿ ಹೂವುಗಳನ್ನು ನೀಡಿ ಬೀಳ್ಕೊಟ್ಟರು. ಅಧಿಕೃತ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 95,682 ಕೊರೋನಾ ಪ್ರಕರಣಗಳು ಹಾಗೂ ಅಧಿಕೃತ ಅಂಕಿಅಂಶಗಳ ಪ್ರಕಾರ ಜಿಲ್ಲೆಯಲ್ಲಿ ಈವರೆಗೆ ಒಟ್ಟು 95,682

ವೈರಸ್‌ನಿಂದ ಚೇತರಿಸಿಕೊಂಡ ಪಂಜಾಬ್‌ನ ನವಜಾತ ಶಿಶು

ಏಪ್ರಿಲ್ ಆರಂಭದಲ್ಲಿ, ಗುರ್ದೀಪ್ ಸಿಂಗ್ ಮತ್ತು ಅವರ ಪತ್ನಿ ಸಂದೀಪ್ ಕೌರ್ ಗಂಡು ಮಗುವಿಗೆ ಪೋಷಕರೆನಿಸಿಕೊಂಡರು. ಆದರೆ ಮಗು ಜನಿಸಿ ಕೇವಲ  20 ದಿನಗಳ ನಂತರ ಅವರ ಸಂತೋಷಕ್ಕೆಲ್ಲಾ ಅಂತ್ಯ ಹಾಡುವಂತೆ ಮಗುವಿಗೆ ಹೆಚ್ಚಿನ ಜ್ವರ ಮತ್ತು ರೋಗಗ್ರಸ್ತ ಸ್ಥಿತಿ ಕಾಣಿಸಿಕೊಂಡು ಆಸ್ಪತ್ರೆಗೆ ದಾಖಲಿಸಬೇಕಾಗಿ ಬಂತು.

ಆ ವೇಳೆ ಮಗುವಿಗೆ ಕೊರೋನಾ ಸೋಂಕು ಕಾಣಿಸಿಕೊಂಡ ಪರಿಣಾಮ ಗುರ್ದೀಪ್ ತನ್ನ ಮಗುವನ್ನು ನೋಡಲೂ ಆಗಲಿಲ್ಲ. 

ಹತ್ತು ದಿನಗಳ ನಂತರ, ಶುಕ್ರವಾರ ಜಲಂಧರ್‌ನ ಪಂಜಾಬ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಪಿಮ್ಸ್) ನಿಂದ ಶಿಶುವನ್ನು ಡಿಸ್ಚಾರ್ಜ್ ಮಾಡಲಾಗಿದ್ದು  ಆ ಸಮಯದಲ್ಲಿ ಮಗುವಿನ ತಂದೆ ಗುರ್ದೀಪ್, "ದೇವರು ನಮ್ಮ ಪ್ರಾರ್ಥನೆಯನ್ನು ಕೇಳಿದನೆಂದು ತೋರುತ್ತದೆ" ಎಂದು ಹೇಳಿದರು.

ಮಗುವಿಗೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿದಾಗ ಕುಟುಂಬ ಆಘಾತವನ್ನು ಅನುಭವಿಸಿದೆ. ಆರ್‌ಟಿ-ಪಿಸಿಆರ್ ಸೇರಿದಂತೆ ಎಲ್ಲಾ ವೈದ್ಯಕೀಯ ಪರೀಕ್ಷೆಗಳ ಮೂಲಕ ಪರೀಕ್ಷಿಸಿದ ನಂತರ ಶಿಶುವನ್ನು ಜಲಂಧರ್‌ನ ಪಿಮ್ಸ್ ನಿಂದ ಬಿಡುಗಡೆ ಮಾಡಲಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ. ಮಗನನ್ನು ಮತ್ತೊಮ್ಮೆ ತನ್ನ ಮಡಿಲಲ್ಲಿ ಮಲಗಿಸಿಕೊಂಡ ತಾಯಿಯ ಸಂತಸಕ್ಕೆ ಮಿತಿ ಇಲ್ಲ.

"ದೇವರ ಅನುಗ್ರಹದಿಂದ, ನನ್ನ ಮೊಮ್ಮಗ ಮನೆಗೆ ಮರಳಿದ್ದಾನೆ. ವೈದ್ಯರು ಅವನನ್ನು ಚೆನ್ನಾಗಿ ನೋಡಿಕೊಂಡರು" ಎಂದು ಶಿಶುವಿನ ಅಜ್ಜಿ ಕುಲ್ವಿಂದರ್ ಕೌರ್ ಹೇಳಿದರು. "ನಾವು ಮಗುವನ್ನು ಅತ್ಯಂತ ಕಾಳಜಿಯಿಂದ ನೋಡಿಕೊಳ್ಳುತ್ತಿದ್ದೆವು. ಶಿಶುವೊಂದು ತುಂಬಾ ದೊಡ್ಡ ನೋವಿನಿಂದ ಬಳಲುತ್ತಿದ್ದದ್ದು ಕಾಣುವುದುಕಷ್ಟಕರವಾಗಿತ್ತು" ಎಂದು ಪಿಮ್ಸ್ ನರ್ಸ್ ನರ್ಬಿ ಹೇಳಿದ್ದಾರೆ.

SCROLL FOR NEXT