ಗಂಟೆಗೆ 175 ಕಿ.ಮೀ ವೇಗದೊಂದಿಗೆ ಅತ್ಯಂತ ತೀವ್ರವಾಗಿರಲಿದೆ ಟೌಕ್ಟೇ ಚಂಡಮಾರುತ: ಐಎಂಡಿ
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇ.17 ರಂದು ಗುಜರಾತ್ ಗೆ ಟೌಕ್ಟೇ ಚಂಡಮಾರುತ ಅಪ್ಪಳಿಸಲಿದೆ, ಈ ಬಳಿಕ ಒಂದು ದಿನದ ನಂತರ ಗುಜರಾತ್ ನ ಕಡಲ ತೀರವನ್ನು ದಾಟಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ನವದೆಹಲಿ: ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದ ಮೇ.17 ರಂದು ಗುಜರಾತ್ ಗೆ ಟೌಕ್ಟೇ ಚಂಡಮಾರುತ ಅಪ್ಪಳಿಸಲಿದೆ, ಈ ಬಳಿಕ ಒಂದು ದಿನದ ನಂತರ ಗುಜರಾತ್ ನ ಕಡಲ ತೀರವನ್ನು ದಾಟಲಿದೆ ಎಂದು ಹವಾಮಾನ ಇಲಾಖೆ (ಐಎಂಡಿ) ಮಾಹಿತಿ ನೀಡಿದೆ.
ಹವಾಮಾನ ಸ್ಥಿತಿಯಿಂದ ವಾಯುಭಾರ ಕುಸಿತ ಕಂಡಿದ್ದು, ಶನಿವಾರ ಮೇ.15 ರಂದು ಬೆಳಿಗ್ಗೆಯಿಂದ ಟೌಕ್ಟೇ ಚಂಡಮಾರುತ ತೀವ್ರಗೊಳ್ಳಲಿದೆ. ಮೇ.16-19 ವರೆಗೆ ಪ್ರತಿ ಗಂಟೆಗೆ 150-160 ರಿಂದ ಪ್ರಾರಂಭಿಸಿ 175 ಕಿ.ವೇಗದಲ್ಲಿ ಈ ಚಂಡಮಾರುತ ಸಂಚರಿಸಲಿದೆ.
ಗುಜರಾತ್ ನ ಕಡಲ ತೀರವನ್ನು ಮೇ.18 ಕ್ಕೆ ತಲುಪಲಿದ್ದು, ಐಎಂಡಿ ಎಚ್ಚರಿಕೆ ನೀಡಿದೆ. ಮೇ.15 ರಂದು ಲಕ್ಷದ್ವೀಪದಲ್ಲಿ ಹೆಚ್ಚಿನ ಮಳೆಯಾಗಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ. ಮೇ.15 ರಂದು ತಮಿಳುನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದ್ದು, ಕೆಲವು ಪ್ರದೇಶಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದೆ ಎಂದು ಐಎಂಡಿ ಮಾಹಿತಿ ನೀಡಿದೆ.
ಇನ್ನು ಕರ್ನಾಟಕದ ಕಡಲ ತೀರದ ಜಿಲ್ಲೆಗಳು ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಮೇ.15-16 ರಂದು ಮಧ್ಯಮ, ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದ್ದು ಕೊಂಕಣ, ಗೋವಾ, ಗುಜರಾತ್ ನ ಸೌರಾಷ್ಟ್ರ ಜಿಲ್ಲೆಗಳಲ್ಲೂ ಮಳೆಯಾಗಲಿವೆ. ಈ ಚಂಡಮಾರುತಕ್ಕೆ ಟೌಕ್ಟೇ ಎಂಬ ಹೆಸರನ್ನು ಮ್ಯಾನ್ಮಾರ್ ನೀಡುದ್ದು ಇದಕ್ಕೆ ಗೆಕ್ಕೊ (ಹಲ್ಲಿ ಎಂಬ ಅರ್ಥ) ಭಾರತದಲ್ಲಿ ಇದು ಈ ವರ್ಷದ ಮೊದಲ ಚಂಡಮಾರುತವಾಗಿರಲಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.