ದೇಶ

10 ರಾಜ್ಯಗಳಲ್ಲಿ ಶೇ. 85 ರಷ್ಟು ಕೋವಿಡ್ ಪ್ರಕರಣಗಳು: ಕೇಂದ್ರ ಆರೋಗ್ಯ ಸಚಿವಾಲಯ

Lingaraj Badiger

ನವದೆಹಲಿ: ದೇಶದ ಒಟ್ಟು ಕೊರೋನಾ ವೈರಸ್ ಪ್ರಕರಣಗಳಲ್ಲಿ ಹತ್ತು ರಾಜ್ಯಗಳು ಶೇ. 85 ರಷ್ಟು ಪ್ರಕರಣಗಳನ್ನು ಹೊಂದಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ.

11 ರಾಜ್ಯಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಎಂಟು ರಾಜ್ಯಗಳು 50,000 ದಿಂದ ಒಂದು ಲಕ್ಷದವರೆಗೆ ಸಕ್ರಿಯ ಪ್ರಕರಣಗಳನ್ನು ಹೊಂದಿವೆ ಎಂದು ಸಚಿವಾಲಯ ಹೇಳಿದೆ.

24 ರಾಜ್ಯಗಳಲ್ಲಿ ಕೋವಿಡ್-19 ಪಾಸಿಟಿವ್ ಪ್ರಮಾಣ ಶೇಕಡಾ 15ಕ್ಕಿಂತ ಹೆಚ್ಚು ಇದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ದೇಶದಲ್ಲಿ ಕಳೆದ 24 ಗಂಟೆಯಲ್ಲಿ 3,26,098 ಕೊರೋನಾ ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 2,43,72,907ಕ್ಕೆ ತಲುಪಿದೆ. ಅಲ್ಲದೆ ಶುಕ್ರವಾರ 3,890 ಸೋಂಕಿತರು ಮೃತಪಟ್ಟಿದ್ದು, ಸಾವಿನ ಸಂಖ್ಯೆ 2,66,207 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಂಕಿ ಅಂಶಗಳು ತಿಳಿಸಿವೆ.

SCROLL FOR NEXT