ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ 
ದೇಶ

ಕೋವಿಡ್ ವ್ಯಾಕ್ಸಿನ್ ಪಾಸ್ ಪೋರ್ಟ್ ವಿಚಾರದಲ್ಲಿ ಡಬ್ಲ್ಯೂಹೆಚ್ ಒ ಮಟ್ಟದಲ್ಲಿ ಇನ್ನೂ ಒಮ್ಮತ ಮೂಡಿಲ್ಲ: ಕೇಂದ್ರ ಸರ್ಕಾರ

ಕೊರೋನಾವೈರಸ್ ಸೋಂಕಿನ ವಿರುದ್ಧ ಸಂಪೂರ್ಣ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ವ್ಯಾಕ್ಸಿನ್ ಪಾಸ್ ಪೋರ್ಟ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಟ್ಟದಲ್ಲಿ ಒಮ್ಮತ ಮೂಡಿಲ್ಲ. ಇನ್ನೂ ಚರ್ಚೆ ನಡೆಯುತ್ತಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ನವದೆಹಲಿ: ಕೊರೋನಾವೈರಸ್ ಸೋಂಕಿನ ವಿರುದ್ಧ ಸಂಪೂರ್ಣ ಲಸಿಕೆ ಹಾಕಿಸಿಕೊಂಡ ಪ್ರಯಾಣಿಕರ ಅಂತಾರಾಷ್ಟ್ರೀಯ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ವ್ಯಾಕ್ಸಿನ್ ಪಾಸ್ ಪೋರ್ಟ್ ವಿಚಾರದಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಮಟ್ಟದಲ್ಲಿ ಒಮ್ಮತ ಮೂಡಿಲ್ಲ. ಇನ್ನೂ ಚರ್ಚೆ ನಡೆಯುತ್ತಿರುವುದಾಗಿ ಕೇಂದ್ರ ಸರ್ಕಾರ ಶನಿವಾರ ತಿಳಿಸಿದೆ.

ಈ ವಿಚಾರದಲ್ಲಿ ಈವರೆಗೂ ಡಬ್ಲ್ಯೂಹೆಚ್ ಒ ಮಟ್ಟದಲ್ಲಿ ಒಮ್ಮತ ಮೂಡಿಲ್ಲ ಎಂದು ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅರ್ಗವಾಲ್  ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದರು. ಲಸಿಕೆ ಹಾಕಿಸಿಕೊಂಡಂತಹ ಜನರಿಗೆ ಪ್ರಯಾಣಕ್ಕೆ ಅವಕಾಶ ಕಲ್ಪಿಸಲು ಬಗ್ಗೆ ಈಗಲೂ ಚರ್ಚೆ ನಡೆಯುತ್ತಿದೆ. ಸದ್ಯ, ಡಬ್ಲ್ಯೂಹೆಚ್ ಒ ಹಾಗೂ ಇತರ ರಾಷ್ಟ್ರಗಳ ಮಾರ್ಗಸೂಚಿಗಳ ಪ್ರಕಾರ, ನೆಗೆಟಿವ್ ಕೋವಿಡ್-19  ಪರೀಕ್ಷೆ ವರದಿ ಹೊಂದಿರುವ ಜನರ ಪ್ರಯಾಣಕ್ಕೆ ಅವಕಾಶ ನೀಡಲಾಗುತ್ತಿದೆ ಎಂದರು.

ಕೋವಾಕ್ಸಿನ್ ಲಸಿಕೆಯನ್ನು ಲಸಿಕೆ ಪಟ್ಟಿಯಲ್ಲಿ ಡಬ್ಲ್ಯೂಹೆಚ್ ಒ ಸೇರಿದ ಕಾರಣ ಆ ಲಸಿಕೆ ತೆಗೆದುಕೊಂಡ ಜನರ ವಿದೇಶ
ಪ್ರಯಾಣಕ್ಕೆ ಅವಕಾಶ ಕಲ್ಪಿಸದಿರುವ ಸಾಧ್ಯತೆಯ ವರದಿ ಉಲ್ಲೇಖಿಸಿ ಕೇಳಲಾದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಲವ್ ಅಗರ್ವಾಲ್, ವ್ಯಾಕ್ಸಿನ್ ಪಾಸ್ ಪೋರ್ಟ್ ವಿಚಾರದಲ್ಲಿ ಡಬ್ಲ್ಯೂಹೆಚ್ ಒ ಮಟ್ಟದಲ್ಲಿ ಒಮ್ಮತ ಮೂಡಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದರು. ಇಂತಹ ದಾರಿತಪ್ಪುವ, ಊಹಾತ್ಮಕ ವರದಿಯನ್ನು ಆರೋಗ್ಯ ಸಚಿವಾಲಯದ ಟ್ವಿಟರ್ ಖಾತೆಯಲ್ಲೂ ತಳ್ಳಿ ಹಾಕಲಾಗಿದೆ. 

ಮಾರ್ಚ್ 1 ರಲ್ಲಿ ಶೇ.8 ರಷ್ಟಿದ್ದ  ಕೋವಿಶೀಲ್ಡ್ ಲಸಿಕೆ ವ್ಯರ್ಥ ಈಗ  ಶೇ.1ಕ್ಕೆ ಇಳಿದಿದೆ. ಇದೇ ಅವಧಿಯಲ್ಲಿ ಕೋವಾಕ್ಸಿನ್ ಲಸಿಕೆ ವ್ಯರ್ಥ ಶೇ.17ರಿಂದ ಶೇ.4ಕ್ಕೆ  ಕಡಿಮೆಯಾಗಿದೆ. ಮಕ್ಕಳಲ್ಲಿಯೂ ಕೊರೋನಾವೈರಸ್ ಸೋಂಕು ಹರಡಬಹುದು ಆದರೆ, ಬಹುತೇಕವಾಗಿ ಲಘು ಸೋಂಕು ಕಾಣಿಸಿಕೊಳ್ಳಲಿದ್ದು,  ಮರಣ ಪ್ರಮಾಣ ಕಡಿಮೆ ಇರಲಿದೆ ಎಂದು ನೀತಿ ಆಯೋಗದ ಸದಸ್ಯ ಪೌಲ್ ಹೇಳಿದರು.

ಲಸಿಕೆ ಪಡೆದ ತಾಯಂದಿರು ಮಕ್ಕಳಿಗೆ ಎದೆಹಾಲುಣಿಸಬಾರದು ಎಂಬ ವರದಿಗಳ ಬಗ್ಗೆ ಸ್ಪಷ್ಟನೆ ನೀಡಿದ ಪೌಲ್, ಎದೆಹಾಲುಣಿಸುವುದನ್ನು ನಿಲ್ಲಿಸಬಾರದು. ಅದನ್ನು ಮುಂದುವರೆಸಬೇಕು, ಮಕ್ಕಳಿಗೂ ಕೂಡಾ ಸೋಂಕು ತಗಲಬಹುದು. ಮಕ್ಕಳಿಗೆ ಸೋಂಕು ತಗುಲಿದಾಗ ಬಹುತೇಕವಾಗಿ ಲಕ್ಷಣಗಳು ಅಲ್ಪವಾಗಿರುತ್ತದೆ. ಲಕ್ಷಣರಹಿತವಾಗಿರುತ್ತದೆ. ಮರಣ ಪ್ರಮಾಣ ಕೂಡಾ ಅತ್ಯಂತ ಕಡಿಮೆ ಇರಲಿದೆ ಎಂದು ಹೇಳಿದರು.

ಬ್ಲ್ಯಾಕ್ ಫಂಗಸ್ ಔಷದ ಹೆಚ್ಚಾಗಿ ಸಿಗುವಂತೆ ಮಾಡಲಾಗುತ್ತಿದೆ. ಮಧುಮೇಹಿಗಳು , ಧೀರ್ಘಕಾಲ ಆಸ್ಪತ್ರೆಗಳಲ್ಲಿ ವಾಸ, ಕೋವಿಡ್-19 ರೋಗಿಗಳಿಗೆ ಸ್ಟೆರಾಯ್ಡ್ ಬಳಕೆಯಿಂದ  ರೋಗ ನಿರೋಧಕ ಶಕ್ತಿ ಕುಗ್ಗಿ, ಮ್ಯೂಕಾರ್ಮೈಕೋಸಿಸ್ ಸೋಂಕು ಹೆಚ್ಚಾಗಬಹುದು. ಸ್ಟೆರಾಯ್ಡ್ ಜೀವ ರಕ್ಷಕವಾಗಿದೆ. ಆದರೆ,  ಅದು ಮ್ಯೂಕಾರ್ಮೈಕೋಸಿಸ್ ಗೆ ಕಾರಣವಾಗುತ್ತಿದೆ ಆದ್ದರಿಂದ ಸೋಂಕಿನ ಹೆಚ್ಚಳ ಮುಂದುವರೆಯುವುದಿಲ್ಲ, ಮತ್ತಷ್ಟು ಹಾನಿ ಸಂಭವಿಸುವುದಿಲ್ಲ, ಅದು ನಮ್ಮ ಜವಾಬ್ದಾರಿಯಾಗಿದೆ ಎಂದು ಪೌಲ್ ಹೇಳಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT