ಉಗ್ರರು ( ಸಾಂಕೇತಿಕ ಚಿತ್ರ) 
ದೇಶ

ಅಸ್ಸಾಂ: ಭದ್ರತಾ ಪಡೆಗಳ ಎನ್ ಕೌಂಟರ್ ಗೆ 6 ಉಗ್ರರ ಸಾವು

ಅಸ್ಸಾಂ ನಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಡಿಎನ್ಎಲ್ಎ ಉಗ್ರ ಸಂಘಟನೆಯ 6 ಉಗ್ರರು ಸಾವನ್ನಪ್ಪಿದ್ದಾರೆ.

ಅಸ್ಸಾಂ: ಅಸ್ಸಾಂ ನಲ್ಲಿ ಭದ್ರತಾ ಪಡೆಗಳ ಎನ್ ಕೌಂಟರ್ ಗೆ ಡಿಎನ್ಎಲ್ಎ ಉಗ್ರ ಸಂಘಟನೆಯ 6 ಉಗ್ರರು ಸಾವನ್ನಪ್ಪಿದ್ದಾರೆ. ಅಸ್ಸಾಂ-ನಾಗಲ್ಯಾಂಡ್ ನ ಗಡಿ ಭಾಗದಲ್ಲಿರುವ ವೆಸ್ಟ್ ಕರ್ಬಿ ಆಂಗ್ಲಾಂಗ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. 

ಉಗ್ರರು ಸಕ್ರಿಯರಾಗಿದ್ದ  ಬಗ್ಗೆ ಮಾಹಿತಿ ಪಡೆದ ಅಸ್ಸಾಂ ಪೊಲೀಸ್ ತಂಡ ಹಾಗೂ ಅಸ್ಸಾಂ ರೈಫಲ್ಸ್ ಸಿಬ್ಬಂದಿಗಳು ವೆಸ್ಟ್ ಕರ್ಬಿ ಆಂಗ್ಲಾಂಗ್ ನ ಎಎಸ್ ಪಿ ಪ್ರಕಾಶ್ ಸೋನೋವಾಲ್ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಲಾಗಿಯಿತು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಕಾರ್ಯಾಚರಣೆ ವೇಳೆ ಭದ್ರತಾ ಸಿಬ್ಬಂದಿಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಮಿಚಿಬೈಲಂಗ್ ಪ್ರದೇಶದಲ್ಲಿ 6 ಮಂದಿ ಉಗ್ರರು ಹತರಾಗಿದ್ದಾರೆ. ಮೃತ ಉಗ್ರರಿಂದ ಎಕೆ-47 ರೈಫಲ್ಸ್ ಹಾಗೂ ಹಲವು ಸುತ್ತುಗಳ ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಇನ್ನೂ ಮುಂದುವರೆದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಬಂಗಾಳದಲ್ಲಿ ಬದಲಾವಣೆಯ ಪರ್ವ: ಗಡಿ ಸುರಕ್ಷತೆಗೆ ಆದ್ಯತೆ: BSFಗೆ ಭೂಮಿ ಹಸ್ತಾಂತರಿಸಲು ಸುವೇಂದು ಸರ್ಕಾರ ಅಸ್ತು, ಮೊದಲ ಸಂಪುಟ ಸಭೆಯಲ್ಲೇ ಮಹತ್ವದ ನಿರ್ಧಾರ..!

ಪ್ರಧಾನಿ ಮೋದಿ ತೆರಳುವ ಮಾರ್ಗದಲ್ಲಿ ಜಿಲೆಟಿನ್ ಕಡ್ಡಿ ಪತ್ತೆ: ಬೆಂಗಳೂರಿಗೆ ದೌಡಾಯಿಸಿದ NIA, ಓರ್ವ ಆರೋಪಿಯ ಬಂಧನ!

ನೇಪಾಳದಿಂದ ಭಾರತಕ್ಕೆ ಅಪಮಾನ?; ಹುದ್ದೆ ಅಂತರದ ಕಾರಣ ನೀಡಿ ವಿದೇಶಾಂಗ ಕಾರ್ಯದರ್ಶಿ ಭೇಟಿಗೆ ನಿರಾಕರಿಸಿದ ಪ್ರಧಾನಿ ಬಾಲೇನ್ ಶಾ: ವರದಿ

ಗೆಲುವಿನ ಅಂತರದ ಬಗ್ಗೆ ಹೊಸದಾಗಿ ಅರ್ಜಿ ಸಲ್ಲಿಸಿ: ಮಮತಾಗೆ ಸುಪ್ರೀಂ ಕೋರ್ಟ್ ಸೂಚನೆ

'ರಾಷ್ಟ್ರದ ಹಿತದೃಷ್ಟಿಯಿಂದ': 'ಭಾಷಣ ಮಾಡೋದಲ್ಲ.. ಮೊದಲು ನೀವು ಮಾಡಿ ತೋರಿಸಿ': ಪ್ರಧಾನಿ ಮೋದಿಗೆ ಕಾಂಗ್ರೆಸ್ ತಿರುಗೇಟು!

SCROLL FOR NEXT