ದೇಶ

ಹಿಂದುತ್ವದ ಪ್ರತಿಪಾದಕ ವೀರ ಸಾವರ್ಕರ್ ಜಯಂತಿ: ಪ್ರಧಾನಿ ಸೇರಿ ಗಣ್ಯರಿಂದ ಸ್ಮರಣೆ

Sumana Upadhyaya

ನವದೆಹಲಿ/ಬೆಂಗಳೂರು: ಭಾರತದ ಸ್ವಾತಂತ್ರ್ಯ ಸೇನಾನಿ, ಬರಹಗಾರ, ಕವಿ, ಕ್ರಾಂತಿಕಾರಿಗಳ ಕಮಾಂಡರ್, ಹಿಂದೂ ರಾಷ್ಟ್ರೀಯವಾದಿ, ಉತ್ಸಾಹಭರಿತ ದಾರ್ಶನಿಕ ಮತ್ತು ಸಕ್ರಿಯ ಸುಧಾರಣಾವಾದಿ ಎಂದು ಹೆಸರು ಗಳಿಸಿರುವ ವಿನಾಯಕ್ ದಾಮೋದರ್ ಸಾವರ್ಕರ್ ಜಯಂತಿ ಇಂದು.

ಅವರ ದೇಶಪ್ರೇಮಕ್ಕಾಗಿ ಅವರು ಪ್ರತಿಯೊಬ್ಬ ರಾಷ್ಟ್ರೀಯವಾದಿಗಳ ಹೃದಯ ಮತ್ತು ಮನಸ್ಸಿನಲ್ಲಿ ವೀರ ಸಾವರ್ಕರ್ ಸ್ಥಾನ ಪಡೆದಿದ್ದಾರೆ.

1883ರ  ಮೇ 28ರಂದು ಇಂದಿನ ಮಹಾರಾಷ್ಟ್ರ ಅಂದಿನ ಬ್ರಿಟಿಷ್ ಇಂಡಿಯಾದ ಮುಂಬೈ ರಾಜ್ಯದ ನಾಶಿಕ್ ಜಿಲ್ಲೆಯಲ್ಲಿ ಹುಟ್ಟಿದ ವಿ.ಡಿ.ಸಾವರ್ಕರ್ ಸ್ವಾತಂತ್ರ್ಯವೀರ ಸಾವರ್ಕರ್ ಅಥವಾ ಸಾವರ್ಕರ್ ಎಂದೇ ಭಾರತದಾದ್ಯಂತ ಜನಪ್ರಿಯ. ಹಿಂದೂ ಮಹಾಸಭಾವನ್ನು ಮುನ್ನಡೆಸಿಕೊಂಡು ಹೋಗಿ ಹಿಂದುತ್ವವನ್ನು ಜನಪ್ರಿಯಗೊಳಿಸಿದರು. 1966ರ ಫೆಬ್ರವರಿ 26ರಂದು ತಮ್ಮ 82ನೇ ವಯಸ್ಸಿನಲ್ಲಿ ನಿಧನರಾದರು.

ಇವರ ಜಯಂತಿ ಸಂದರ್ಭದಲ್ಲಿ ಇಂದು ಅವರನ್ನು ಅನೇಕ ರಾಜಕೀಯ ನಾಯಕರು ಸ್ಮರಿಸಿಕೊಂಡಿದ್ದಾರೆ. 

SCROLL FOR NEXT