ಸಾಂದರ್ಭಿಕ ಚಿತ್ರ 
ದೇಶ

ಭಾರತದ ಅತಿವೃಷ್ಟಿಯ ಮೂಲ 9,000 ಕಿ.ಮೀ ದೂರದ ಆರ್ಕ್ ಟಿಕ್ ಪ್ರದೇಶದಲ್ಲಿದೆ: ಬಟರ್ ಫ್ಲೈ ಎಫೆಕ್ಟ್ ಅಧ್ಯಯನ ವರದಿ

ಭೂಮಂಡಲದ ಯಾವುದೋ ದೂರದಲ್ಲಿ, ಖಂಡಗಳಾಚೆಗೆ ಉಂಟಾಗುವ ಬೆಳವಣಿಗೆಯಿಂದಾಗಿ ಇನ್ನೆಲ್ಲೋ ಅದರ ಪರಿಣಾಮ ಉಂಟಾಗುವುದನ್ನು ಬಟರ್ ಫ್ಲೈ ಎಫೆಕ್ಟ್ ಎನ್ನಲಾಗುತ್ತದೆ. 

ನವದೆಹಲಿ:  ಕರ್ನಾಟಕ, ಕೇರಳ, ತಮಿಳುನಾಡು ಸೇರಿದಂತೆ ಭಾರತದ ಹಲವೆಡೆ ಬೀಳುತ್ತಿರುವ ಭಾರೀ ಮಳೆಗೆ ಆರ್ಕ್ ಟಿಕ್ ಪ್ರದೇಶದ ಬೆಳವಣಿಗೆ ಕಾರಣವಿರಬಹುದು ಎಂದು ವಿಜ್ಞಾನಿಗಳು ಸಂಶಯ ವ್ಯಕ್ತಪಡಿಸಿದ್ದಾರೆ.

ಸಂಶೋಧನಾ ನಿಯತಕಾಲಿಕೆಯಲ್ಲಿ ಪ್ರಕಟಗೊಂಡ ಅಧ್ಯಯನ ವರದಿ ಈ ಬಗ್ಗೆ ಬೆಳಕು ಚೆಲ್ಲಿದೆ. ನೇಚರ್ ಎಂಬ ನಿಯತಕಾಲಿಕೆಯಲ್ಲಿ ಪ್ರಕಟವಾಗಿರುವ ಈ ಅಧ್ಯಯನದಲ್ಲಿ ಭಾರತೀಯ ಹಾಗೂ ನಾರ್ವೆ ವಿಜ್ಞಾನಿಗಳು ಭಾಗವಹಿಸಿದ್ದರು. 

ಉತ್ತರ ಧ್ರುವ ಪ್ರದೇಶವಾದ ಆರ್ಕ್ ಟಿಕ್ ನಲ್ಲಿ ಮಂಜುಗಡ್ಡೆ ಅತಿ ವೇಗವಾಗಿ ಕರಗುತ್ತಿರುವುದೇ ಭಾರತದಲ್ಲಿನ ಅತಿವೃಷ್ಟಿಗೆ ಕಾರಣ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಇದನ್ನು ಬಟರ್ ಫ್ಲೈ ಎಫೆಕ್ಟ್ ಎಂದು ಕರೆಯಲಾಗುತ್ತದೆ. ಭೂಮಂಡಲದ ಯಾವುದೋ ದೂರದಲ್ಲಿ, ಖಂಡಗಳಾಚೆಗೆ ಉಂಟಾಗುವ ಬೆಳವಣಿಗೆಯಿಂದಾಗಿ ಇನ್ನೆಲ್ಲೋ ಅದರ ಪರಿಣಾಮ ಉಂಟಾಗುವುದನ್ನು ಬಟರ್ ಫ್ಲೈ ಎಫೆಕ್ಟ್ ಎನ್ನಲಾಗುತ್ತದೆ. 

ಈ ಬಾರಿ ಅತ್ಯಧಿಕ ಪ್ರಮಾನದಲ್ಲಿ ಮಂಜುಗಡ್ಡೆ ಕರಗಿ ಸಮುದ್ರ ಸೇರಿದ್ದರಿಂದಾಗಿ ಅರೇಬಿಯನ್ ಸಮುದ್ರ ಪ್ರದೇಶದಲ್ಲಿ ತೇವಾಂಶ ಹೆಚ್ಚಿ ಸೆಪ್ಟೆಂಬರ್, ಅಕ್ಟೋಬರ್ ತಿಂಗಳಲ್ಲಿಯೂ ಮಳೆಗಾಲದ ವಾತಾವರಣ ನಿರ್ಮಾಣವಾಗಿದೆ ಎನ್ನುವುದು ವಿಜ್ಞಾನಿಗಳ ಅಭಿಪ್ರಾಯ. 

ಮುಂದಿನ ದಿನಗಳ ಸಮುದ್ರ ಮತ್ತು ಮಂಜುಗಡ್ಡೆಯ ಪ್ರಮಾಣದ ನಡುವಿನ ಅನುಪಾತವನ್ನು ಹೆಚ್ಚಿನ ಅಧ್ಯಯನಕ್ಕೆ ಒಳಪಡಿಸುವ ಅಗತ್ಯವನ್ನು ವಿಜ್ಞಾನಿಗಳು ಒತ್ತಿ ಹೇಳಿದ್ದಾರೆ. 

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನನ್ನ-ಕಾಂಗ್ರೆಸ್ ಮಧ್ಯೆ ಭಕ್ತ- ಭಗವಂತನ ಸಂಬಂಧ ಇದೆ, RSS ಗೀತೆ ಹಾಡಿದ್ದಕ್ಕೆ ನೋವಾಗಿದ್ದರೆ ಕ್ಷಮೆ ಕೇಳುತ್ತೇನೆ: ಡಿಕೆ ಶಿವಕುಮಾರ್

ಭಾರತದ ಮೇಲೆ ಶೇ.50 ರಷ್ಟು ಸುಂಕ ನಾಳೆ ಜಾರಿ: ಕರಡು ಸೂಚನೆ ಹೊರಡಿಸಿದ ಅಮೆರಿಕ

ಪದಕ ಹಾಕಿಸಿಕೊಳ್ಳಲು ನಿರಾಕರಿಸಿದ DMK ಸಚಿವನ ಪುತ್ರ, BJP ನಾಯಕ Annamalai ಹೇಳಿದ್ದೇನು? Video

ಧರ್ಮಸ್ಥಳ ಬುರುಡೆ ಕೇಸು: ಮಹೇಶ್ ತಿಮರೋಡಿ ನಿವಾಸದಲ್ಲಿ ಆರೋಪಿ ಚಿನ್ನಯ್ಯನ ಮೊಬೈಲ್ ಪತ್ತೆ

Gaza Hospital Strike: ಹಮಾಸ್ ಸೋಲಿಸುವುದಷ್ಟೇ ನಮ್ಮ ಗುರಿ, ನಾಗರೀಕರನ್ನು ಗೌರವಿಸುತ್ತೇವೆ; ದಾಳಿ ಕುರಿತು ಮೊದಲ ಬಾರಿಗೆ ಇಸ್ರೇಲ್ ವಿಷಾದ

SCROLL FOR NEXT