ದೇಶ

ಕಾವೇರಿ-ವಗೈ-ಗುಂಡಾರ ಜೋಡಣಾ ಕಾಲುವೆಯ ವಿಚಾರಣೆ ಮುಂದೂಡಿದ ಸುಪ್ರೀಂ ಕೋರ್ಟ್

Vishwanath S

ನವದೆಹಲಿ: ತಮಿಳುನಾಡು ಸರ್ಕಾರ ತಮಿಳುನಾಡಿನ ಪುದುಕೋಟ್ಟಯಿ ಜಿಲ್ಲೆಯ ಕುಣತ್ತೂರುವಿನಲ್ಲಿ ನಿರ್ಮಿಸುತ್ತಿರುವ ಕಾವೇರಿ-ವಗೈ-ಗುಂಡಾರ ಜೋಡಣಾ ಕಾಲುವೆ ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ದಾಖಲಿಸಿರುವ ಮೂಲದಾವೆ ವಿಚಾರಣೆಗೆ ಕೈಗೆತ್ತಿಕೊಂಡು ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳ ಮನವಿ ಮೇರೆಗೆ 6 ವಾರ ಮುಂದೂಡಿತು. 

ಕರ್ನಾಟಕದ ಮೂಲ ದಾವೆಯ ಕುರಿತು ಈ ರಾಜ್ಯಗಳು ತಮ್ಮ ಪ್ರತಿಕ್ರಿಯೆಯನ್ನು 6 ವಾರಗಳಲ್ಲಿ ತಮ್ಮ ಪ್ರತಿಕ್ರಿಯೆಗಳನ್ನು ಸಲ್ಲಿಸಬೇಕೆಂದು ಸೂಚಿಸಿತು. ತಮಿಳುನಾಡಿನ ಕರೂರ ಜಿಲ್ಲೆಯಲ್ಲಿ ಕಟ್ಟಲಾಗಿರುವ ಮಾಯನೂರು ಜಲಾಶಯದಿಂದ ಕಾವೇರಿಯ ಹೆಚ್ಚುವರಿ ನೀರನ್ನು ಗುಂಡಾರಕ್ಕೆ ಕಾಲುವೆಗಳ ಮೂಲಕ ವರ್ಗಾಯಿಸಲು ತಮಿಳುನಾಡು ಯೋಜಿಸಿದೆ. 262 ಕಿ.ಮಿ. ಉದ್ದದ ಈ ಕಾಲುವೆ  ನಿರ್ಮಾಣವನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಸರ್ವೋಚ್ಚ ನ್ಯಾಯಾಲಯದಲ್ಲಿ ಕಳೆದ  ಫೆಬ್ರವರಿಯಲ್ಲಿ ಅರ್ಜಿ ಸಲ್ಲಿಸಿತ್ತು.

ಕಾವೇರಿ ನ್ಯಾಯಾಧೀಕರಣವು ತಮಿಳನಾಡಿಗೆ ಹಂಚಿಕೆ ಮಾಡಿರುವ 177.25 ಟಿ.ಎಮ್.ಸಿ ಅಡಿ ನೀರನ್ನು ಬಿಳಿ ಗುಂಡ್ಲುವಿನ ಅಂತರ ರಾಜ್ಯ ಮಾಪನ ಕೇಂದ್ರದಲ್ಲಿ ಸುನಿಶ್ಚಿತಗೊಳಿಸಿದ ಮೇಲೆ ಒಂದು ಸರಾಸರಿ ವರ್ಷದಲ್ಲಿ ಬಾಕಿ ಉಳಿದ ನೀರು ಕರ್ನಾಟಕಕ್ಕೆ ಸೇರಿದ್ದು, ಅದರಲ್ಲಿ ಕರ್ನಾಟಕದ ಪಾಲಿನ 284.75 ಟಿ.ಎಮ್.ಸಿ ಅಡಿ ನೀರು ಮತ್ತು ಕಾವೇರಿಯಲ್ಲಿ ಲಭ್ಯವಾಗಬಹುದಾದ ಹೆಚ್ಚುವರಿ ನೀರು ಕರ್ನಾಟಕಕ್ಕೆ ಸೇರಿದೆಯೆಂಬುದು ನಿಲುವಾಗಿದೆಂದು ಕರ್ನಾಟಕವು ವಾದಿಸುತ್ತಿದೆ. 

ಈ ವಾದವು 2018ರಂದು ಫೆಬ್ರಬರಿ 16ರಂದು ಸರ್ವೋಚ್ಚ ನ್ಯಾಯಾಲಯವು ನೀಡಿದ ತೀರ್ಪಿನ ಅಡಿಯಲ್ಲಿ ಈ ನಿಲುವು ತಳೆಯಲಾಗಿದೆ. ಕುಡಿಯುವ ನೀರು ಒದಗಿಸಲು ಕರ್ನಾಟಕವು ಮೇಕೆದಾಟು ಬಳಿ ನಿರ್ಮಿಸಲು ಉದ್ದೇಶಿಸಿರುವ ಸಮತೋಲನ ಜಲಾಶಯವನ್ನು ತಮಿಳನಾಡು ವಿರೋದಿಸುತ್ತಿದೆ.

SCROLL FOR NEXT