ಜ್ಯೋತಿ ನೈನ್ವಾಲ್ 
ದೇಶ

ಹುತಾತ್ಮ ಯೋಧ ನಾಯ್ಕ್ ವಿಧವೆ ಪತ್ನಿ ಸೇನಾ ಆಫೀಸರ್ ಆಗಿ ತೇರ್ಗಡೆ

ಪದವಿಗ್ರಹಣ ಸಂದರ್ಭದಲ್ಲಿ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡ ಜ್ಯೋತಿ ತಮ್ಮ ಪತಿ ಹುತಾತ್ಮರಾದ ಸಂದರ್ಭದಲ್ಲಿ ತಮ್ಮ ತಾಯಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.

ನವದೆಹಲಿ: ಭಾರತೀಯ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ದೀಪಕ್ ನೈನ್ವಾಲ್ ಜಮ್ಮು ಕಾಶ್ಮೀರದ ಕುಲ್ಗಾಂನಲ್ಲಿ ಉಗ್ರರೊಡನೆ ಹೋರಾಡುವ ಸಂದರ್ಭದಲ್ಲಿ ಗುಂಡೇಟಿಗೆ ಬಲಿಯಾಗಿದ್ದರು. ಪತಿಯ ಅಕಾಲಿಕ ನಿಧನದಿಂದ ಅವರನ್ನೇ ಎದುರುನೋಡುತ್ತಿದ್ದ ಕುಟುಂಬಕ್ಕೆ ದಿಕ್ಕೇ ತೋಚದಂತಾಗಿತ್ತು. ಪತಿ ನಿಧನದ ತರುವಾಯ ದೀಪಕ್ ಪತ್ನಿ ಜ್ಯೋತಿ ನೈನ್ವಾಲ್ ಸೇನೆ ಸೇರಲು ನಿರ್ಧರಿಸಿದ್ದರು. ಇದೀಗ ಚೆನ್ನೈ ಸೇನಾ ಕಚೇರಿಯಿಂದ ಆಫೀಸರ್ ಆಗಿ ಅವರು ತೇರ್ಗಡೆಯಾಗಿದ್ದಾರೆ. 

ಅವರಿಗೆ ಇಬ್ಬರು ಪುಟ್ಟ ಮಕ್ಕಳಿದ್ದಾರೆ ಎನ್ನುವುದು ಅಚ್ಚರಿ. ಅದಕ್ಕೂ ಮಿಗಿಲಾದ ಹೆಮ್ಮೆಯ ಸಂಗತಿ ಎಂದರೆ ಜ್ಯೋತಿ ಅವರು ತಮ್ಮ ಮಕ್ಕಳ ಸಮ್ಮುಖದಲ್ಲೇ ಪದವಿ ಸ್ವೀಕರಿಸಿರುವುದು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಅಭಿಪ್ರಾಯ ಹಂಚಿಕೊಂಡ ಜ್ಯೋತಿ ತಮ್ಮ ಪತಿ ಹುತಾತ್ಮರಾದ ಸಂದರ್ಭದಲ್ಲಿ ತಮ್ಮ ತಾಯಿ ಹೇಳಿದ ಮಾತನ್ನು ನೆನಪಿಸಿಕೊಂಡಿದ್ದಾರೆ.

'ಇನ್ನುಮುಂದಿನ ನಿನ್ನ ಬದುಕು ನಿನ್ನ ಮಕ್ಕಳಿಗೆ ಪ್ರೇರಣಾದಾಯಕವಾಗುವಂತೆ ಬದುಕು' ಎಂದು ಅವರ ತಾಯಿ ಹೇಳಿದ್ದರು. ಅದರಂತೆ ಹುತಾತ್ಮ ಯೋಧನ ಪತ್ನಿಯಾಗಿ ಛಲ ಬಿಡದೆ ಸೇನೆ ಸೇರಿ ಆಫೀಸರ್ ಪದವಿ ಪಡೆದು ಅವರು ತಾಯಿಯ ಮಾತನ್ನು ಪೂರೈಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೈಕಮಾಂಡ್ ಸೂಚನೆಗೆ ಮಣಿದ ಸಿದ್ದರಾಮಯ್ಯ: ಮುಖ್ಯಮಂತ್ರಿ ಸ್ಥಾನ ತ್ಯಜಿಸಲು ಸಮ್ಮತಿ; ಕಾಂಗ್ರೆಸ್ ಪವರ್ ಶಿಫ್ಟ್‌ಗೆ ಕೌಂಟ್‌ಡೌನ್ ಶುರು, ಡಿಕೆಶಿಗೆ ಸಿಎಂ ಪಟ್ಟ..?

CMRL ಹಣ ಅಕ್ರಮ ವರ್ಗಾವಣೆ ಪ್ರಕರಣ: ಕೇರಳ ಮಾಜಿ ಸಿಎಂ ಪಿಣರಾಯಿ ವಿಜಯನ್ ನಿವಾಸದ ಮೇಲೆ ED ದಾಳಿ..!

IPL 2026: ಗುಜರಾತ್ ವಿರುದ್ಧ ಭರ್ಜರಿ ಗೆಲುವು; ಸತತ 2ನೇ ಬಾರಿ ಫೈನಲ್ಸ್ ಪ್ರವೇಶಿಸಿದ RCB

IPL 2026: 33 ಎಸೆತ, 9 ಸಿಕ್ಸರ್, ಒಂದೇ ಒಂದು ಡಾಟ್.. Rajat Patidar ಸ್ಫೋಟಕ ಬ್ಯಾಟಿಂಗ್ ಗೆ ಕೊಹ್ಲಿ ಸೇರಿ ಕ್ರೀಡಾಂಗಣವೇ ದಂಗು!

ಈ ವಾರವೇ ಸಿದ್ದರಾಮಯ್ಯ ರಾಜೀನಾಮೆ ಸಾಧ್ಯತೆ; ಆಪ್ತರ ಬಳಿ CM ಹೇಳಿದ್ದೇನು?: ಮೇ.27 ರಂದು ರಾಜ್ಯಕ್ಕೆ ಹೈಕಮಾಂಡ್ ನಾಯಕರು

SCROLL FOR NEXT