ವಿಮಾನ ನಿಲ್ದಾಣ (ಸಂಗ್ರಹ ಚಿತ್ರ) 
ದೇಶ

ಉತ್ತರ ಪ್ರದೇಶದಲ್ಲಿ 5 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: ದೇಶದಲ್ಲೇ ಅತಿ ಹೆಚ್ಚು ಏರ್ಪೋರ್ಟ್ ಹೊಂದಿರುವ ರಾಜ್ಯ

ಉತ್ತರ ಪ್ರದೇಶದಲ್ಲಿ ನ.25 ರಂದು ಪ್ರಧಾನಿ ನರೇಂದ್ರ ಮೋದಿ ಜೇವರ್ ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.

ಲಖನೌ: ಉತ್ತರ ಪ್ರದೇಶದಲ್ಲಿ ನ.25 ರಂದು ಪ್ರಧಾನಿ ನರೇಂದ್ರ ಮೋದಿ ಜೇವರ್ ನಲ್ಲಿ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
 
ಈ ವಿಮಾನ ನಿಲ್ದಾಣದ ಮೂಲಕ ಉತ್ತರ ಪ್ರದೇಶ ದೇಶದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಹೊಂದಿರುವ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ರಾಜ್ಯದಲ್ಲಿ ಈಗ 8 ವಿಮಾನ ನಿಲ್ದಾಣಗಳು ಕಾರ್ಯನಿರ್ವಹಣೆ ಮಾಡುತ್ತಿದ್ದು ಇನ್ನೂ 13 ವಿಮಾನ ನಿಲ್ದಾಣಗಳು 7 ಏರ್ ಸ್ಟ್ರಿಪ್ ಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ.

ನ.25 ರಂದು ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಶಿಲಾನ್ಯಾಸ ಮಾಡುವ ಮೂಲಕ ಉತ್ತರ ಪ್ರದೆಶಕ್ಕೆ 5 ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲಭ್ಯವಾಗಲಿದೆ, ದೇಶದಲ್ಲೇ ಅತಿ ಹೆಚ್ಚು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದಿರುವ ರಾಜ್ಯವಾಗಿರಲಿದೆ ಉತ್ತರ ಪ್ರದೇಶ ಎಂದು ಬಿಜೆಪಿ ನೇತೃತ್ವದ ಸರ್ಕಾರ ತಿಳಿಸಿದೆ. 2012 ವರೆಗೂ ಉತ್ತರ ಪ್ರದೇಶದಲ್ಲಿ ಲಖನೌ ಮತ್ತು ವಾರಣಾಸಿಗಳಲ್ಲಿ ಮಾತ್ರವೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಇತ್ತು.

ಅಕ್ಟೋಬರ್ 20 ರಂದು ಕುಷಿನಗರ್ ನಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದರು. ಇನ್ನು ರಾಮಜನ್ಮಭೂಮಿ ಇರುವ ಅಯೋಧ್ಯೆಯಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಕಾಮಗಾರಿ ವೇಗವಾಗಿ ನಡೆಯುತ್ತಿದ್ದು, ಮುಂದಿನ ವರ್ಷ ಸೇವೆಗಳು ಸಾರ್ವಜನಿಕರಿಗೆ ಮುಕ್ತವಾಗುವ ಸಾಧ್ಯತೆ ಇದೆ. 5 ನೇ ವಿಮಾನ ನಿಲ್ದಾಣ ಎನ್ ಸಿಆರ್ ನ ನೊಯ್ಡಾ ಬಳಿ ಇರುವ ಜೇವರ್ ನಲ್ಲಿ ತಲೆ ಎತ್ತುತ್ತಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Repo ದರದಲ್ಲಿ ಯಾವುದೇ ಬದಲಾವಣೆ ಇಲ್ಲ; ಶೇ. 5.25ರಲ್ಲೇ ಯಥಾಸ್ಥಿತಿ ಕಾಯ್ದುಕೊಂಡ RBI, ಜಾಗತಿಕ ಅನಿಶ್ಚಿತತೆ ನಡುವೆ ತಟಸ್ಥ ನಿಲುವು ಮುಂದುವರಿಕೆ..!

Hormuz ಜಲಸಂಧಿ ಬಿಕ್ಕಟ್ಟು ಶೀಘ್ರದಲ್ಲೇ ಅಂತ್ಯ: ಅಂತಿಮ ಘಟ್ಟದಲ್ಲಿ ಅಮೆರಿಕ–ಇರಾನ್ ಶಾಂತಿ ಒಪ್ಪಂದ, ಇಂದೇ ಅಧಿಕೃತ ಘೋಷಣೆ ಸಾಧ್ಯತೆ..!

Yemen ಕರಾವಳಿಯಲ್ಲಿ ಭಾರತೀಯ ಧ್ವಜದ ವಾಣಿಜ್ಯ ಹಡಗಿನ ಮೇಲೆ ಕ್ಷಿಪಣಿ ದಾಳಿ; ಸಮುದ್ರದಲ್ಲಿ ಮುಳುಗಿದ ಹಡಗು, 13 ಮಂದಿ ಭಾರತೀಯರು ಸೇರಿ ಎಲ್ಲಾ 14 ಸಿಬ್ಬಂದಿ ರಕ್ಷಣೆ..!

Hormuz ಜಲಸಂಧಿ ವಿವಾದ: 'ನಮ್ಮ ಒಪ್ಪಿಗೆ ಇಲ್ಲದೆ ಹಡಗು ಸಂಚಾರಕ್ಕೆ ಅವಕಾಶವೇ ಇಲ್ಲ'; ಯಾರ ಅನುಮತಿ ಬೇಕಿಲ್ಲ ಎಂದ ಅಮೆರಿಕಕ್ಕೆ Iran ತಿರುಗೇಟು..!

ಮಾಧ್ಯಮಗಳ ಧ್ವನಿ ಅಡಗಿಸಲು ಪಾಕ್‌ ಮುಂದು? ಅನುಮತಿ ಇಲ್ಲದೆ ವರದಿಗಾರಿಕೆಗೆ ನಿಷೇಧ; ಸತ್ಯ ಮುಚ್ಚಿಡಲು ವಿದೇಶಿ ಮಾಧ್ಯಮಗಳ ರೆಕ್ಕೆ ಕತ್ತರಿಸಿದ ಸರ್ಕಾರ..!