ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ 
ದೇಶ

ಪಬ್ಲಿಕ್ ನಿಮ್ಮ ಕಂಟೆಂಟ್ ಅನ್ನು ನೋಡಬೇಕು ಅಂದರೆ ಅವರ ಭಾವನೆಗಳನ್ನು ಗೌರವಿಸಬೇಕು: ಒಟಿಟಿ ಬಗ್ಗೆ ಪ್ರಸೂನ್ ಜೋಶಿ 

ಈ ಹಿಂದೆ ಹಲವು ಒಟಿಟಿ ಪ್ಲಾಟ್ ಫಾರ್ಮುಗಳಲ್ಲಿ ಪ್ರಸಾರವಾದ ಕೆಲ ಧಾರಾವಾಹಿ ಸರಣಿ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಅವುಗಳಿಂದ ಹಿಂದೂಗಳ ಭಾವನೆಗೆ ಧಕ್ಕೆಯಾಗಿದೆ ಎನ್ನುವ ಆರೋಪ ಕೇಳಿಬಂದಿತ್ತು.

ಪಣಜಿ: ದೇಶದಲ್ಲಿ ಒಟಿಟಿ (ಓವರ್ ದಿ ಟಾಪ್) ಮನರಂಜನಾ ತಾಣಗಳು ಜನಪ್ರಿಯತೆ ಪಡೆದುಕೊಳ್ಳುತ್ತಿವೆ. ಅದರಲ್ಲಿ ಪ್ರಸಾರವಾಗುತ್ತಿರುವ ಆಕ್ಷೇಪಾರ್ಹ ಸಿನಿಮಾಗಳು, ಧಾರಾವಾಹಿಗಳ ಬಗ್ಗೆ ಸೆನ್ಸಾರ್ ಬೋರ್ಡ್ ಅಧ್ಯಕ್ಷ ಪ್ರಸೂನ್ ಜೋಶಿ ಕಿಡಿ ಕಾರಿದ್ದಾರೆ. ಪಬ್ಲಿಕ್ ನಿಮ್ಮ ಕಂಟೆಂಟ್ ಅನ್ನು ನೋಡಬೇಕು ಅಂದರೆ ನೀವೂ ಪಬ್ಲಿಕ್ ನ ಸೆಂಟಿಮೆಂಟನ್ನು ಗೌರವಿಸಬೇಕು ಎಂದು ಪ್ರಸೂನ್ ಜೋಶಿ ಒಟಿಟಿ ಗಳಿಗೆ ಸಲಹೆ ನೀಡಿದ್ದಾರೆ.

ಪ್ರಸ್ತುತ ಸನ್ನಿವೇಶದಲ್ಲಿ ಇಂಟರ್ನೆಟ್ ಸಹಾಯದಿಂದ ಮನರಂಜನಾ ತಾಣಗಳು ಯಾವರೀತಿ ಉಗಮಗೊಳ್ಳುತ್ತದೆ ಎನ್ನುವುದರ ಬಗ್ಗೆ ಸ್ಪಷ್ಟ ಚಿತ್ರಣ ಇನ್ನೂ ದೊರೆತಿಲ್ಲ. ಪಬ್ಲಿಕ್ ನೀಡುವ ಹಣದಿಂದ ನೀವು ಲಾಭ ಮಾಡಿಕೊಳ್ಳುತ್ತೀರಿ ಎಂದಾದರೆ ಪಬ್ಲಿಕ್ ನ ಅಭಿಪ್ರಾಯವನ್ನು ನೀವು ಕೇಳಬೇಕಾಗುತ್ತದೆ ಎಂದು ಪ್ರಸೂನ್ ಜೋಶಿ ಹೇಳಿದ್ದಾರೆ. 

ಈ ಹಿಂದೆ ಹಲವು ಒಟಿಟಿ ಪ್ಲಾಟ್ ಫಾರ್ಮುಗಳಲ್ಲಿ ಪ್ರಸಾರವಾದ ಕೆಲ ಧಾರಾವಾಹಿ ಸರಣಿ ಬಗ್ಗೆ ಆಕ್ಷೇಪಗಳು ವ್ಯಕ್ತವಾಗಿದ್ದವು. ಮುಖ್ಯವಾಗಿ ಬಲಪಂಥೀಯ ಪಕ್ಷಗಳು ಅವುಗಳ ವಿರುದ್ಧ ಪ್ರತಿಭಟನೆ ನಡೆಸಿದ್ದವು. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಫೈನಲ್ ಫೈಟ್: ಸಿದ್ದರಾಮಯ್ಯ ಮನವೊಲಿಕೆಗೆ ರಾಹುಲ್ ಗಾಂಧಿ ಯತ್ನ: ಯತೀಂದ್ರಗೆ DCM ಸ್ಥಾನ, ರಾಜ್ಯಸಭೆ ಆಫರ್?

ಪಟ್ಟಕ್ಕಾಗಿ ಫೈನಲ್ ಫೈಟ್: ಮೂರು ಷರತ್ತುಗಳನ್ನು ಹೈಕಮಾಂಡ್ ಮುಂದಿಟ್ಟ ಡಿಕೆಶಿ; CM ಹುದ್ದೆಗಾಗಿ ಬಿಗಿಪಟ್ಟು!

Indian Stock Market: ಕಚ್ಚಾ ತೈಲ ದರ ಏರಿಕೆ, ರೂಪಾಯಿ ಮೌಲ್ಯ, Sensex ಕುಸಿತ

ರಾಜ್ಯ ಸರ್ಕಾರದ 'ದ್ವೇಷ ಭಾಷಣ' ಮಸೂದೆಗೆ ಅಮಿತ್ ಶಾ ಅಡ್ಡಗಾಲು; ಅಸ್ತಿತ್ವದಲ್ಲಿರುವ ಕಾನೂನೇ ಸಾಕು: ಕೇಂದ್ರ

Mekedatu row: ಕರ್ನಾಟಕದ DPR ತಿರಸ್ಕರಿಸಿ; ಪ್ರಧಾನಿ ಮೋದಿಗೆ ತಮಿಳುನಾಡು ಸಿಎಂ ವಿಜಯ್ ಮನವಿ

SCROLL FOR NEXT