ದೇಶ

ಮಹಿಳೆಯರ ಬಗ್ಗೆ ಸಚಿವ ಸುಧಾಕರ್ ಹೇಳಿಕೆ ಅವರ 'ಮನುವಾದಿ' ಚಿಂತನೆಯನ್ನು ತೋರಿಸುತ್ತಿದೆ: ಸುಭಾಷಿಣಿ ಅಲಿ

Lingaraj Badiger

ನವದೆಹಲಿ: ಆಧುನಿಕ ಭಾರತೀಯ ಮಹಿಳೆಯರು ಮದುವೆ, ಮಕ್ಕಳನ್ನು ಬಯಸುವುದಿಲ್ಲ ಎಂದಿದ್ದ ಆರೋಗ್ಯ ಸಚಿವ ಡಾ. ಕೆ.ಸುಧಾಕರ್ ಅವರ ಹೇಳಿಕೆಯನ್ನು ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ(ಮಾರ್ಕ್ಸ್ ವಾದಿ) ಪೊಲಿಟ್ ಬ್ಯೂರೊ ಸದಸ್ಯೆ ಮತ್ತು ಮಹಿಳಾ ಕಾರ್ಯಕರ್ತೆ ಸುಭಾಷಿಣಿ ಅಲಿ ಅವರು ತೀವ್ರವಾಗಿ ಖಂಡಿಸಿದ್ದು, ಅವರ ಹೇಳಿಕೆ 'ಸಂಪ್ರದಾಯವಾದಿ, ಕಳಪೆ ಚಿಂತನೆಯನ್ನು ಬಿಂಬಿಸುತ್ತದೆ ಎಂದು ಸೋಮವಾರ ಹೇಳಿದ್ದಾರೆ.

ಆರೋಗ್ಯ ಸಚಿವರು ತಮ್ಮ 'ಮನುವಾದಿ' ಚಿಂತನೆಯನ್ನು ತೋರಿಸಿದ್ದಾರೆ. ಯಾವುದೇ ವ್ಯಕ್ತಿ ಮಹಿಳೆಯರು ಏನು ಮಾಡಬೇಕು ಅಥವಾ ಅವರು ಹೇಗೆ ಜೀವನ ನಡೆಸಬೇಕು ಎಂಬುದನ್ನು ನಿರ್ಧರಿಸಬಾರದು ಎಂದು ಮಹಿಳಾ ಕಾರ್ಯಕರ್ತೆ ಹೇಳಿದ್ದಾರೆ.

"ಕರ್ನಾಟಕ ಆರೋಗ್ಯ ಸಚಿವರು ತಮ್ಮ 'ಮನುವಾದಿ' ಚಿಂತನೆಯನ್ನು ತೋರಿಸುತ್ತಿದ್ದಾರೆ ಎಂದು 
ಸುಧಾಕರ್ ವಿರುದ್ಧ ವಾಗ್ದಾಳಿ ನಡೆಸಿದ ಅಲಿ, ಅವರ ಪ್ರಕಾರ ಮಹಿಳೆಯರು ಹೇಗಿರಬೇಕು ಎಂಬುದನ್ನು ಇತರರು ನಿರ್ಧರಿಸಬೇಕು. ಈ ಚಿಂತನೆಯ ಪ್ರಕಾರ, ಮಹಿಳೆ ತನ್ನ ದೇಹದ ಬಗ್ಗೆ, ಜೀವನದ ಬಗ್ಗೆ ತಾನೇ ನಿರ್ಧರಿಸಬಾರದು. ಅಂತಹ ಮಹಿಳೆಯನ್ನು ಆದರ್ಶ ಮಹಿಳೆ ಎಂದು ಪರಿಗಣಿಸಲಾಗುತ್ತದೆ. ಇದನ್ನು ನಾವು 'ಮನುವಾದಿ' ಚಿಂತನೆ ಎಂದು ಕರೆಯುತ್ತೇವೆ ಎಂದಿದ್ದಾರೆ.

"ಇದು ಅತ್ಯಂತ ಸಂಪ್ರದಾಯವಾದಿ ಮತ್ತು ಕಳಪೆ ಚಿಂತನೆ. ಇಂದಿನ ಯುಗದಲ್ಲಿ, ಈ ರೀತಿ ಮಾತನಾಡುವುದು ಎಂದರೆ ಸಮಾಜವನ್ನು ಹಿಂದಕ್ಕೆ ಕೊಂಡೊಯ್ಯುವುದು ಎಂದರ್ಥ. ಒಬ್ಬ ಮಹಿಳೆ ಮದುವೆಯಾಗಲಿ ಅಥವಾ ಇಲ್ಲದಿರಲಿ, ಆಕೆಗೆ ಮಕ್ಕಳು ಇದೆಯೋ ಇಲ್ಲವೋ ಅಥವಾ ಅವಳಿಗೆ ಎಷ್ಟು ಮಕ್ಕಳು ಇದೆ ಎಂಬುದು ಅವಳ ವೈಯಕ್ತಿಕ ವಿಷಯ" ಸುಭಾಷಿಣಿ ಅಲಿ ಹೇಳಿದ್ದಾರೆ.

SCROLL FOR NEXT