ದೇಶ

ಕೇಂದ್ರಾಡಳಿತ ಪ್ರದೇಶ, ರಾಜ್ಯಗಳಿಗೆ 101 ಕೋಟಿಗೂ ಅಧಿಕ ಡೋಸ್ ಕೋವಿಡ್-19 ಲಸಿಕೆ ಪೂರೈಕೆ: ಕೇಂದ್ರ ಸರ್ಕಾರ

Nagaraja AB

ನವದೆಹಲಿ: ಇಲ್ಲಿಯವರೆಗೂ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ ಸುಮಾರು 101 ಕೋಟಿಗೂ ಅಧಿಕ ಡೋಸ್ ಕೋವಿಡ್-19 ಲಸಿಕೆಯನ್ನು ಪೂರೈಸಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶನಿವಾರ ತಿಳಿಸಿದೆ. 

ಸುಮಾರು 11.12 ಕೋಟಿ ಡೋಸ್ ಸಮತೋಲಿತ ಮತ್ತು ಬಳಕೆಯಾಗದ ಲಸಿಕೆ ಈಗಲೂ ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಲ್ಲಿ ಲಭ್ಯವಿರುವುದಾಗಿ ಮಾಹಿತಿ ನೀಡಿದೆ.

ಸರ್ಕಾರದ ಉಚಿತ ದರದ ಮಾರ್ಗ ಹಾಗೂ ನೇರವಾಗಿ ರಾಜ್ಯ ಖರೀದಿ ಕೆಟಗರಿ ಮೂಲಕ ಈವರೆಗೂ ಕೇಂದ್ರಾಡಳಿತ ಪ್ರದೇಶ ಮತ್ತು ರಾಜ್ಯಗಳಿಗೆ 101 ಕೋಟಿ ( 1,01,51,66,665) ಡೋಸ್ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ. 

ಲಸಿಕಾ ಅಭಿಯಾನದ ಅಡಿಯಲ್ಲಿ ದೇಶದಲ್ಲಿ ತಯಾರಿಸಲಾಗುವ ಲಸಿಕೆಗಳನ್ನು ಕೇಂದ್ರ ಸರ್ಕಾರ ಖರೀದಿಸಿ, ಕೇಂದ್ರಾಡಳಿತ ಪ್ರದೇಶ ಹಾಗೂ ರಾಜ್ಯಗಳಲ್ಲಿ ಶೇಕಡಾ 75 ರಷ್ಟು ಡೋಸ್ ನ್ನು ಪೂರೈಕೆ ಮಾಡುತ್ತಿದೆ.

SCROLL FOR NEXT