ದೇಶ

ತೆಲಂಗಾಣ, ಕರ್ನಾಟಕಗಳಲ್ಲಿ ಡ್ರಗ್ಸ್ ದಂಧೆ ಭೇದಿಸಿದ ಎನ್ ಸಿಬಿ ತಂಡ: ಇಬ್ಬರ ಬಂಧನ 

Sumana Upadhyaya

ಹೈದರಾಬಾದ್: ಮೇಡ್ಚಲ್-ಮಲ್ಕಾಜ್‌ಗಿರಿ ಜಿಲ್ಲೆಯಿಂದ ನಿಷೇಧಿತ ಮತ್ತು ಅಬಕಾರಿ ಇಲಾಖೆ 2 ಕೋಟಿ ರೂಪಾಯಿ ಮೌಲ್ಯದ ಅಪಾರ ಪ್ರಮಾಣದ ಮಾದಕ ದ್ರವ್ಯಗಳನ್ನು ವಶಪಡಿಸಿಕೊಂಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. 

ಶಂಕಿತರು ಮಿಯಾಂವ್ ಮಿಯಾವ್ ಎಂದು ಕರೆಯಲ್ಪಡುವ ಪಾರ್ಟಿ ಡ್ರಗ್ ಮೆಫೆಡ್ರೋನ್ ಅನ್ನು ಸರಬರಾಜು ಮಾಡುತ್ತಿದ್ದರು. ಅವರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ನಿಷೇಧ ಮತ್ತು ಅಬಕಾರಿ ಅಧಿಕಾರಿ ಕೆ ವಿಜಯಭಾಸ್ಕರ್ ತಿಳಿಸಿದ್ದಾರೆ.

ಖಚಿತ ಮಾಹಿತಿಯ ಆಧಾರದ ಮೇಲೆ, ಜಿಲ್ಲಾ ಟಾಸ್ಕ್ ಫೋರ್ಸ್ ತಂಡವು ಕುಕಟ್‌ಪಲ್ಲಿಯ ಫ್ಲ್ಯಾಟ್‌ನ ಮೇಲೆ ದಾಳಿ ನಡೆಸಿ ಪವನ್ ಅಲಿಯಾಸ್ ಚಿಟುಕುರಿ ಪ್ರಶಾಂತ್ ರೆಡ್ಡಿಯನ್ನು ಬಂಧಿಸಿ ಆತನಿಂದ 5 ಗ್ರಾಂ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಿದ್ದಾರೆ. ಆತನಿಂದ ದೊರೆತ ಮಾಹಿತಿಯನ್ನು ಬಳಸಿ, ನಗರದ ಹೊರವಲಯದ ಬೊಂಗುಲೂರ್ ಗೇಟ್‌ನಲ್ಲಿರುವ ಕನ್ನ ರೆಡ್ಡಿ ಅಲಿಯಾಸ್ ಮಹೇಶ್ ಕಣ್ಣ ರೆಡ್ಡಿ ನಿವಾಸ ಮೇಲೆ ದಾಳಿ ನಡೆಸಲಾಯಿತು. ಆತನಿಂದ 921 ಗ್ರಾಂ ಮಾದಕದ್ರವ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಕನ್ನಾ ರೆಡ್ಡಿಯ ತಪ್ಪೊಪ್ಪಿಗೆ ಆಧಾರದ ಮೇಲೆ ಅಧಿಕಾರಿಗಳು ನಾಗರಕರ್ನೂಲ್ ಜಿಲ್ಲೆಯ ತಿಮ್ಮಾಜಿಪೇಟೆಯಲ್ಲಿ ಕೆ ರಾಮಕೃಷ್ಣ ಗೌಡರನ್ನು ವಶಕ್ಕೆ ಪಡೆದು ನಾಗರಿಕ ಸರಬರಾಜು ಗೋದಾಮಿನ ಆವರಣದಲ್ಲಿ ನಿಲ್ಲಿಸಿದ್ದ 4 ಕೆಜಿ ಮಾದಕ ದ್ರವ್ಯಗಳನ್ನು ವಶಪಡಿಸಿಕೊಳ್ಳಲಾಗಿದೆ.

ನಾರ್ಕೋಟಿಕ್ ಕಂಟ್ರೋಲ್ ಬ್ಯೂರೋ (NCB), ಬೆಂಗಳೂರು ವಲಯ ಘಟಕ, ನಾರ್ಕೋಟಿಕ್ ಡ್ರಗ್ಸ್ & ಸೈಕೋಟ್ರೋಪಿಕ್ ಸಬ್ಸ್ಟೆನ್ಸ್ (NDPS) ಆಕ್ಟ್, 1985 ರ ಅಡಿಯಲ್ಲಿ ಎರಡು ಪ್ರಕರಣಗಳಲ್ಲಿ ಆರು ಜನರನ್ನು ಬಂಧಿಸಿದೆ. ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.

ದೇವನಹಳ್ಳಿ ಟೋಲ್‌ನಲ್ಲಿ ಆಂಧ್ರಪ್ರದೇಶದ (ಎಪಿ) ನೋಂದಣಿ ಹೊಂದಿರುವ ಮಾರುತಿ ಸ್ವಿಫ್ಟ್ ಕಾರನ್ನು ತಡೆದು ಎಮ್‌ಡಿಎಂಎ ಮಾತ್ರೆಗಳು, ಮೆಥಾಂಫೆಟಮೈನ್ ಮತ್ತು ಮೆಥಾಕ್ವಾಲೋನ್ ಅನ್ನು ವೈಜಾಗ್ ನಿವಾಸಿಗಳಿಂದ ವಶಪಡಿಸಿಕೊಂಡ ನಂತರ ನಾಲ್ಕು ಜನರನ್ನು ಬಂಧಿಸಲಾಗಿದೆ. ಉಳಿದ ಮೂವರು ಬಿಹಾರ ಮತ್ತು ಹೈದರಾಬಾದ್ ಮೂಲದವರು. ಅವರು ಬೆಂಗಳೂರಿನಿಂದ ಹೈದರಾಬಾದ್ ಕಡೆಗೆ ಹೋಗುತ್ತಿದ್ದರು ಎಂದು ಎನ್ ಸಿಬಿ ಅಧಿಕಾರಿ ಅಮಿತ್ ಘಾವಟೆ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ 3 ಕೆಜಿ ಕ್ರಿಸ್ಟಲ್ ಮೆತ್ ಕಾಂಪೊನೆಂಟ್ ವಶ
ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ), ಬೆಂಗಳೂರು ವಲಯ ಘಟಕವು ಕಳೆದ ಮೂರು ದಿನಗಳಲ್ಲಿ ಎರಡು ಡ್ರಗ್ ಘಟಕಗಳನ್ನು ಭೇದಿಸಿದೆ. ಲೆಹೆಂಗಾದಲ್ಲಿ ಬಚ್ಚಿಟ್ಟಿದ್ದ ಎಂಡಿಎಂಎ ಮಾತ್ರೆಗಳು, ಮೆಥಾಂಫೆಟಮೈನ್ ಮತ್ತು ಮೆಥಾಕ್ವಾಲೋನ್ ಮತ್ತು ಹೈದರಾಬಾದ್‌ನಿಂದ 3 ಕೆಜಿ ಸೂಡೊಫೆಡ್ರಿನ್ ಅನ್ನು ಸಂಸ್ಥೆಯು ಬೆಂಗಳೂರಿನಲ್ಲಿ ವಶಪಡಿಸಿಕೊಂಡಿದೆ ಎಂದು ಎನ್‌ಸಿಬಿ ವಲಯ ನಿರ್ದೇಶಕ ಅಮಿತ್ ಘಾವಟೆ ತಿಳಿಸಿದ್ದಾರೆ.

SCROLL FOR NEXT