ದೇಶ

ತಾಲಿಬಾನ್ ವಶವಾದ ನಂತರ ಅಫ್ಘಾನಿಸ್ತಾನಕ್ಕೆ ಭಾರತದ ಸಕ್ಕರೆ ರಫ್ತು ಸಂಪೂರ್ಣ ಸ್ಥಗಿತ

Harshavardhan M

ನವದೆಹಲಿ: ಅಫ್ಘಾನಿಸ್ತಾನಕ್ಕೆ ಭಾರತದ ಸಕ್ಕರೆ ರಫ್ತು ಸಂಪೂರ್ಣ ನಿಲುಗಡೆಯಾಗಿದೆ. ದೇಶ ತಾಲಿಬಾನ್ ವಶವಾಗುತ್ತಿದ್ದಂತೆಯೇ ಅಲ್ಲಿನ ವರ್ತಕರು ತಮ್ಮ ಆರ್ಡರ್ ಗಳನ್ನು ರದ್ದುಪಡಿಸಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಅಮೆರಿಕ ಮುಂದಾಳತ್ವದಲ್ಲಿ ರಚನೆಯಾಗಿದ್ದ ಪ್ರಜಾಪ್ರಭುತ್ವ ಸರ್ಕಾರವನ್ನು ಕಿತ್ತೊಗೆದ ತಾಲಿಬಾನ್ ಕಳೆದ ತಿಂಗಳು ದೇಶವನ್ನು ತನ್ನ ವಶಕ್ಕೆ ಪಡೆದಿತ್ತು. 

ಭಾರತ ಅತ್ಯಧಿಕ ಪ್ರಮಾಣದ ಸಕ್ಕರೆ ರಫ್ತು ಮಾಡುತ್ತಿದ್ದ ಮೂರು ದೇಶಗಳಲ್ಲಿ ಅಫ್ಘಾನಿಸ್ತಾನವೂ ಒಂದಾಗಿತ್ತು. ವಾರ್ಷಿಕ 6- 7 ಲಕ್ಷ ಟನ್ ಪ್ರಮಾಣದ ಸಕ್ಕರೆಯನ್ನು ಅಫ್ಘಾನಿಸ್ತಾನವು ಭಾರತದಿಂದ ಆಮದು ಮಾಡಿಕೊಳ್ಳುತ್ತಿತ್ತು.

ದೇಶದಲ್ಲಿ ತಾಲಿಬಾನ್ ಸರ್ಕಾರ ರಚನೆಯಾದ ಬಳಿಕ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುವ ವಿಶ್ವಾಸವನ್ನು ಭಾರತದ ಆಹಾರ ಸಚಿವಾಲಯದ ಕಾರ್ಯದರ್ಶಿ ಸುಬೋಧ್ ಕುಮಾರ್ ಸಿಂಗ್ ವ್ಯಕ್ತಪಡಿಸಿದ್ದಾರೆ.

SCROLL FOR NEXT