ರಾಣ ದಗ್ಗುಬಾಟಿ 
ದೇಶ

ಡ್ರಗ್ಸ್ ಪ್ರಕರಣ: ಜಾರಿ ನಿರ್ದೇಶನಾಲಯ ಎದುರು ನಟ ರಾಣಾ ದಗ್ಗುಬಾಟಿ ಹಾಜರು

ಡ್ರಗ್ಸ್ ಪ್ರಕರಣದಲ್ಲಿ ತೆಲುಗು ನಟ ರಾಣಾ ದಗ್ಗುಬಾಟಿ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

ಹೈದರಾಬಾದ್: ಡ್ರಗ್ಸ್ ಪ್ರಕರಣದಲ್ಲಿ ತೆಲುಗು ನಟ ರಾಣಾ ದಗ್ಗುಬಾಟಿ ಜಾರಿ ನಿರ್ದೇಶನಾಲಯದ ಎದುರು ವಿಚಾರಣೆಗೆ ಹಾಜರಾಗಿದ್ದಾರೆ.

2017 ರಲ್ಲಿ ಹೈ-ಎಂಡ್ ಡ್ರಗ್ ಜಾಲವನ್ನು ಪತ್ತೆ ಮಾಡಿದ್ದ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ತನಿಖೆಗಾಗಿ ಹಾಜರಾಗಲು ರಾಣಾ ದಗ್ಗುಬಾಟಿಗೆ ಜಾರಿ ನಿರ್ದೇಶನಾಲಯ ಸಮನ್ಸ್ ಜಾರಿಗೊಳಿಸಿತ್ತು. ಬಾಹುಬಲಿ ಸಿನಿಮಾದ ನಟ ಇಡಿ ಸಮನ್ಸ್ ಪಡೆದ 10 ಟಾಲಿವುಡ್ (ತೆಲುಗು ಸಿನಿಮಾ ರಂಗ)ದ ನಟ- ನಿರ್ದೇಶಕರ ಪೈಕಿ ಒಬ್ಬರಾಗಿದ್ದಾರೆ.

ಈ ವರ್ಷದ ಆ.31 ರಿಂದ ನಿರ್ದೇಶಕ ಪುರಿ ಜಗನ್ನಾಥ್, ನಟಿ ಚಾರ್ಮಿ ಕೌರ್, ರಾಕುಲ್ ಪ್ರೀತ್ ಸಿಂಗ್, ನಟಿ ನಂದು ಕೇಂದ್ರೀಯ ಏಜೆನ್ಸಿಯ ಎದುರು ತನಿಖೆಗೆ ಹಾಜರಾಗಿದ್ದರು.

2017 ರ ಜುಲೈ ನಲ್ಲಿ ತೆಲಂಗಾಣದ ನಿಷೇಧ ಮತ್ತು ಅಬಕಾರಿ ಇಲಾಖೆ ಡ್ರಗ್ಸ್ ಜಾಲವನ್ನು ಪತ್ತೆ ಮಾಡಿ ಎಲ್ ಎಸ್ ಡಿ ಹಾಗೂ ಎಂಡಿಎಂಎ ಡ್ರಗ್ಸ್ ಪೆಡ್ಲಿಂಗ್ ನಲ್ಲಿದ್ದವರ ಪೈಕಿ 3 ಮಂದಿಯನ್ನು ಬಂಧಿಸಿತ್ತು. ಡ್ರಗ್ಸ್ ಸೇವನೆ- ಮಾರಾಟದಲ್ಲಿ ತೊಡಗಿದ್ದವರ ವಿರುದ್ಧ ಪ್ರಕರಣ ದಾಖಲಿಸಿ 20 ಮಂದಿಯನ್ನು ಬಂಧಿಸಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ಕಾವೇರಿ' ವಿಚಾರದಲ್ಲಿ ಕರ್ನಾಟಕಕ್ಕೆ ಮತ್ತೆ ಶಾಕ್: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪ್ರದೋಶ್ ಮಾಫಿ ಸಾಕ್ಷಿ ಅರ್ಜಿ ಅಂಗೀಕರಿಸಿದ ಕೋರ್ಟ್; 'ದಾಸ'ನಿಗೆ ಬಿಗ್ ಶಾಕ್!

'ಕಾಂಗ್ರೆಸ್ ಸರ್ಕಾರದ ವೈಫಲ್ಯ' ವಿರೋಧಿಸಿ ಸೆಪ್ಟೆಂಬರ್ 1 ರಿಂದ 10ರವರೆಗೆ ರಾಯಚೂರಿನಿಂದ ಬಳ್ಳಾರಿಗೆ BJP-JDS ಪಾದಯಾತ್ರೆ!

Uorfi Javed: ಮದ್ವೆ ಆಗ್ತೀನೋ ಇಲ್ಲವೋ ಗೊತ್ತಿಲ್ಲ, ಆದ್ರೆ ತಾಯಿ ಆಗ್ತೀನಿ; ಸೀಕ್ರೆಟ್‌ ರಿವೀಲ್ ಮಾಡಿದ ಉರ್ಫಿ ಜಾವೇದ್

ಡಿಕೆಶಿ ಸಂಪುಟಕ್ಕೆ ಮತ್ತೆ ಸರ್ಜರಿ? ಭಾರಿ ಬದಲಾವಣೆ, 3-5 ಸಚಿವರಿಗೆ ಕೊಕ್?; ಮಹಿಳೆ ಸೇರಿ ಕೆಲ ರೆಬೆಲ್ ನಾಯಕರಿಗೆ ಅವಕಾಶ ಸಾಧ್ಯತೆ