ಕೋವಿಡ್-19 ಸೋಂಕು ಪತ್ತೆ ಪರೀಕ್ಷೆ 
ದೇಶ

ಕಳೆದ ವಾರ ಭಾರತದ ಶೇ.68 ರಷ್ಟು ಕೋವಿಡ್-19 ಪ್ರಕರಣ ವರದಿಯಾಗಿದ್ದು ಕೇರಳದಿಂದ!

ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಅತಿ ಹೆಚ್ಚಾಗಿರುವ ರಾಜ್ಯಗಳ ಪೈಕಿ ಕೇರಳ ಮುಂಚೂಣಿಯಲ್ಲಿದೆ. ಕಳೆದ ವಾರ ಭಾರತದಲ್ಲಿ ಒಟ್ಟು ವರದಿಯಾದ ಪ್ರಕರಣಗಳಲ್ಲಿ ಶೇ.68 ರಷ್ಟು ಕೇರಳದಿಂದ ವರದಿಯಾಗಿದೆ.

ನವದೆಹಲಿ: ಭಾರತದಲ್ಲಿ ಕೋವಿಡ್-19 ಪ್ರಕರಣಗಳು ಅತಿ ಹೆಚ್ಚಾಗಿರುವ ರಾಜ್ಯಗಳ ಪೈಕಿ ಕೇರಳ ಮುಂಚೂಣಿಯಲ್ಲಿದೆ. ಕಳೆದ ವಾರ ಭಾರತದಲ್ಲಿ ಒಟ್ಟು ವರದಿಯಾದ ಪ್ರಕರಣಗಳಲ್ಲಿ ಶೇ.68 ರಷ್ಟು ಕೇರಳದಿಂದ ವರದಿಯಾಗಿದೆ.

ಕಳೆದ 24 ಗಂಟೆಳಲ್ಲಿ 43,263 ಪ್ರಕರಣಗಳು ದೇಶಾದ್ಯಂತ ವರದಿಯಾಗಿದ್ದರೆ ಈ ಪೈಕಿ 32,000 ಪ್ರಕರಣಗಳು ಕೇರಳದಲ್ಲಿ ವರದಿಯಾಗಿದೆ.

ಕಳೆದ ವಾರ ಭಾರತದಲ್ಲಿ ವರದಿಯಾದ ಒಟ್ಟಾರೆ ಪ್ರಕರಣಗಳ ಪೈಕಿ ಶೇ.68 ರಷ್ಟು ಕೇರಳದಿಂದ ವರದಿಯಾಗಿತ್ತು ಎಂದು ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಹೇಳಿದ್ದಾರೆ.

ಭಾರತದಲ್ಲಿ ಒಟ್ಟಾರೆ ಕೋವಿಡ್-19 ಪ್ರಕರಣಗಳು ಇಳಿಕೆಯಾಗುತ್ತಿದ್ದು ಇಳಿಕೆಯ ಟ್ರೆಂಡ್ ಮೊದಲ ಅಲೆಯಲ್ಲಿದ್ದ ಟ್ರೆಂಡ್ ನ ಶೇ.50 ಕ್ಕಿಂತ ಕಡಿಮೆ ಇದೆ. ಭಾರತದಲ್ಲಿ 2 ನೇ ಅಲೆ ಇನ್ನೂ ಇದ್ದು ಮುಕ್ತಾಯಗೊಂಡಿಲ್ಲ ಎಂದು ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್ ಮಾಹಿತಿ ನೀಡಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಶನಿವಾರ; ತದನಂತರ ನೂತನ ಸಿಎಂ ಪದಗ್ರಹಣ ಸಾಧ್ಯತೆ!

Karnataka CM News LIVE Updates | ಸಿದ್ದರಾಮಯ್ಯ ರಾಜೀನಾಮೆ; ಸಿಎಲ್‌ಪಿ ಸಭೆ ಶನಿವಾರ; ಅಂದೇ ನೂತನ ಸಿಎಂ ಪ್ರಮಾಣ ವಚನ ಸಾಧ್ಯತೆ!

ವಿದಾಯದ ಕೊನೇ ಕ್ಷಣದಲ್ಲೂ Siddaramaiah ಮಹತ್ವದ ಕ್ರಮ: ಆಪ್ತ ಕಾರ್ಯದರ್ಶಿ, ವಿಶೇಷಾಧಿಕಾರಿ ವರ್ಗಾವಣೆ

ನಿಮ್ಮ ಪ್ರೀತಿಗೆ ಧನ್ಯವಾದ: ರಾಜೀನಾಮೆ ನೀಡಿದ ಬಳಿಕ ರಾಜ್ಯದ ಜನರಿಗೆ ಸಿಎಂ ಸಿದ್ದರಾಮಯ್ಯ ಭಾವುಕ ಪೋಸ್ಟ್!

ಬಕ್ರೀದ್: ಗೋವಿಗೆ ‘ರಾಷ್ಟ್ರೀಯ ಪ್ರಾಣಿ’ ಸ್ಥಾನಮಾನ ನೀಡಿ: ಈದ್ ಆಚರಣೆ ಸಂದರ್ಭದಲ್ಲೇ ಮುಸ್ಲಿಂ ಸಂಘಟನೆಗಳ ಆಗ್ರಹ

SCROLL FOR NEXT