ದೇಶ

ಹೊಸ ಕೋವಿಡ್ ರೂಪಾಂತರಿ ಮ್ಯು, ಸಿ.1.2 ವೈರಾಣು ಪ್ರಕರಣ ಭಾರತದಲ್ಲಿ ಇನ್ನೂ ವರದಿಯಾಗಿಲ್ಲ: ಜೀನೋಮಿಕ್ ಒಕ್ಕೂಟ

Srinivas Rao BV

ನವದೆಹಲಿ: ಭಾರತದಲ್ಲಿ ಈ ವರೆಗೂ ಕೋವಿಡ್-19 ನ ಹೊಸ ರೂಪಾಂತರಿ ತಳಿ ಮ್ಯು, ಸಿ.1.2 ಸೋಂಕು ವರದಿಯಾಗಿಲ್ಲ ಎಂದು ರಾಷ್ಟ್ರೀಯ ಜಿನೋಮಿಕ್ ಒಕ್ಕೂಟ ಹೇಳಿದೆ.

ಆದರೆ ಅಂತಾರಾಷ್ಟ್ರೀಯ ಪ್ರಯಾಣಿಕರಿಂದ ದೃಢಪಟ್ಟ ಮಾದರಿಗಳ ಸೀಕ್ವೆನ್ಸಿಂಗ್ ಗೆ ಸಂಬಂಧಿಸಿದಂತೆ ಈಗಿರುವ ಶಿಫಾರಸ್ಸುಗಳನ್ನು ಇನ್ನೂ ಕಠಿಣವಾಗಿ ಜಾರಿಗೊಳಿಸುವುದಕ್ಕೆ ಒತ್ತಾಯಿಸಿದೆ.

ಭಾರತದ SARS-CoV-2 ಜಿನೋಮಿಕ್ಸ್ ಒಕ್ಕೂಟದ ವಾರದ ಬುಲೆಟಿನ್  ನಲ್ಲಿ ಡೆಲ್ಟಾ ಹಾಗೂ ಡೆಲ್ಟಾದ ಉಪತಳಿಗಳು ಭಾರತದಲ್ಲಿ ವಿಒಸಿ (ವೇರಿಯೆಂಟ್ಸ್ ಆಫ್ ಕನ್ಸರ್ನ್) ಆಗಿವೆ ಭಾರತ ಹಾಗೂ ಜಾಗತಿಕವಾಗಿ ಎವೈ4 ಹೆಚ್ಚು ಕಾಣಿಸಿಕೊಳ್ಳುತ್ತಿರುವ ಉಪತಳಿಯಾಗಿದೆ. ಐಎನ್ಎಸ್ಎಸಿಒಜಿಯಿಂದ ಸೀಕ್ವೆನ್ಸ್ ನ ಪೈಕಿ 63,774 ವೇರಿಯೆಂಟ್ ಆಫ್ ಕನ್ಸರ್ನ್ ಹಾಗೂ ವೇರಿಯೆಂಟ್ ಆಫ್ ಇಂಟ್ರೆಸ್ಟ್ ಪೈಕಿ 42,833 ಪ್ರಕರಣಗಳು ಡೆಲ್ಟಾ ಆಗಿವೆ.

ಡಬ್ಲ್ಯುಹೆಚ್ಒ ಆ.30 ರಂದು ವೇರಿಯೆಂಟ್ಸ್ ಆಫ್ ಇಂಟ್ರಸ್ಟ್ ಗಳ ಪಟ್ಟಿಗೆ ಬಿ.1.621 (ಬಿ.1.621.1) ನ್ನು ಸೇರಿಸಿ ಮ್ಯು ಎಂಬ ಹೆಸರನ್ನು ನೀಡಿತ್ತು.

SCROLL FOR NEXT