ದೇಶ

ಒಂದೇ ದಿನ 2.5 ಕೋಟಿ ಲಸಿಕೆ ಹಂಚಿದ ದಾಖಲೆ ಸೃಷ್ಟಿಸಿದರೆ ರಾಜಕೀಯ ಪಕ್ಷಗಳಿಗೆ ಏಕೆ ಜ್ವರ: ಮೋದಿ ಪ್ರಶ್ನೆ

Harshavardhan M

ನವದೆಹಲಿ: ಒಂದೇ ದಿನದಲ್ಲಿ ಅತಿ ಹೆಚ್ಚು ಮಂದಿಗೆ ಲಸಿಕೆ ನೀಡಿದ ದಾಖಲೆ ಮಾಡಲ್ಪಟ್ಟ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಲಸಿಕಾ ದಾಖಲೆ ವಿರುದ್ಧ ಮಾತನಾಡುತ್ತಿರುವ ರಾಜಕೀಯ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.

ಸೆ.17 ಶುಕ್ರವಾರದಂದು ದೇಶದಲ್ಲೇ ಪ್ರಥಮಬಾರಿಗೆ ಒಂದೇ ದಿನ 2.5 ಕೋಟಿ ಮಂದಿಗೆ ಲಸಿಕೆ ನೀಡಿದ ದಾಖಲೆ ಸೃಷ್ಟಿಯಾಗಿತ್ತು. ಅದೇ ದಿನ ಮೋದಿಯವರ ಜನ್ಮದಿನ. 

ಹೀಗಾಗಿ ರಾಜಕೀಯ ಪಕ್ಷಗಳು, ದಾಖಲೆ ಪ್ರಮಾಣದ ಲಸಿಕೆ ನೀಡಲು ಮೋದಿಯವರ ಜನ್ಮದಿನದ ತನಕ ಏಕೆ ಕಾಯಬೇಕು ಎಂದು ಟೀಕೆ ಮಾಡಿದ್ದವು. 

ರಾಜಕೀಯ ಪಕ್ಷಗಳ ಟೀಕೆಗೆ ಪ್ರತಿಕ್ರಿಯಿಸಿರುವ ಮೋದಿ ಯಾವುದೇ ಪಕ್ಷದ ಹೆಸರನ್ನು ಹೇಳದೆಯೇ, ದೇಶದಲ್ಲಿ 2.5 ಕೋಟಿ ಲಸಿಕೆ ಹಂಚಿಕೆ ಮಾಡಿದರೆ ಪಕ್ಷಗಳಿಗೆ ಏಕೆ ಜ್ವರ ಎಂದು ಕಿಡಿ ಕಾರಿದ್ದಾರೆ. 

ಮೋದಿ ಪ್ರತಿಕ್ರಿಯೆಗೂ ಮುನ್ನ ಕಾಂಗ್ರೆಸ್ ನಾಯಕ ಪಿ.ಚಿದಂಬರಂ ಈ ಬಗ್ಗೆ ಟ್ವೀಟ್ ಮಾಡಿದ್ದರು. ಅವರ ಟ್ವೀಟ್ ಪ್ರಕಟಗೊಂಡ ಕೆಲವೇ ಸಮಯದಲ್ಲಿ ಮೋದಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ತಮ್ಮ ಟ್ವೀಟ್ ನಲ್ಲಿ ಚಿದಂಬರಂ ಅವರು 'ಲಸಿಕೆ ಹಂಚಿಕೆ ಎನ್ನುವುದು ನಿರಂತರ ಪ್ರಕ್ರಿಯೆ. ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಹೋಗಬೇಕು. ಪ್ರಧಾನಿಯವರ ಜನ್ಮದಿನದಂದು ಮಾತ್ರವೇ ಏಕೆ ಏರಿಕೆ ಕಾಣಬೇಕು' ಎಂದು ಅವರು ಪ್ರಶ್ನಿಸಿದ್ದರು.

SCROLL FOR NEXT