ದೇಶ

ಪಂಜಾಬ್ ಮುಖ್ಯಮಂತ್ರಿಯಾಗಲಾರೆ; ಹೈಕಮಾಂಡ್ ಆಫರ್ ಗೆ ಅಂಬಿಕಾ ಸೋನಿ ನಕಾರ

Srinivas Rao BV

ಚಂಡೀಗಢ: ಪಂಜಾಬ್ ನ ನೂತನ ಸಿಎಂ ಆಯ್ಕೆ ಪ್ರಕ್ರಿಯೆಯಲ್ಲಿ ತೊಡಗಿರುವ ಕಾಂಗ್ರೆಸ್ ಹೈಕಮಾಂಡ್, ಅಚ್ಚರಿಯ ಬೆಳವಣಿಗೆಯಲ್ಲಿ ಅಂಬಿಕಾ ಸೋನಿ ಅವರಿಗೆ ಸಿಎಂ ಹುದ್ದೆಯ ಆಫರ್ ನೀಡಿದೆ.

ಆದರೆ ಕಾಂಗ್ರೆಸ್ ನಾಯಕಿ ಅಂಬಿಕಾ ಸೋನಿ, ಹೈಕಮಾಂಡ್ ಆಫರ್ ನ್ನು ನಿರಾಕರಿಸಿರುವ ಅಂಬಿಕಾ ಸೋನಿ ಪಂಜಾಬ್ ಗೆ ಸಿಖ್ ಸಮುದಾಯದವರೇ ಸಿಎಂ ಆಗಬೇಕೆಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ. 

ಆ.18 ರಂದು ರಾತ್ರಿ ರಾಹುಲ್ ಗಾಂಧಿ ಕಾಂಗ್ರೆಸ್ ನ ಹಿರಿಯ ನಾಯಕಿ ಅಂಬಿಕಾ ಸೋನಿ ಅವರನ್ನು ಭೇಟಿ ಮಾಡಿದ್ದು ಈ ವೇಳೆ ಸಿಎಂ ಆಫರ್ ನೀಡಿದ್ದಾರೆ ಎಂಬ ಮಾಹಿತಿ ಎನ್ ಡಿಟಿವಿ ವರದಿಯ ಮೂಲಕ ತಿಳಿದುಬಂದಿದೆ.

ಸಿಖ್ ಸಮುದಾಯೇತರ ವ್ಯಕ್ತಿಯಾಗಿರುವ ತಾವು ಅಡ್ಡಪರಿಣಾಮಗಳು ಎದುರಾಗುತ್ತದೆ ಆದ್ದರಿಂದ ತಾವು ಸಿಎಂ ಆಗುವುದಕ್ಕೆ ಆಗುವುದಿಲ್ಲ, ಈ ಹಿನ್ನೆಲೆಯಲ್ಲಿ ತಮ್ಮ ಹೆಸರನ್ನು ಪರಿಗಣಿಸುವುದು ಬೇಡ ಎಂದು ಅಂಬಿಕಾ ಸೋನಿ ಹೇಳಿದ್ದಾರೆ.

ಕಾಂಗ್ರೆಸ್ ನ ಮೂವರು ರಾಜಕೀಯ ವೀಕ್ಷಕರು ಪಂಜಾಬ್ ಸಿಎಂ ಆಯ್ಕೆ ಸಂಬಂಧ ಸಭೆ ನಡೆಸುತ್ತಿದ್ದು ಅಂತಿಮ ನಿರ್ಧಾರ ಕೈಗೊಳ್ಳುವುದಕ್ಕೆ ಹೈಕಮಾಂಡ್ ಗೆ ವರದಿ ಸಲ್ಲಿಸಲಿದ್ದಾರೆ. ಪಂಜಾಬ್ ಸಿಎಂ ಆಯ್ಕೆಯ ವಿಷಯವನ್ನು ಕೆಟ್ಟದಾಗಿ ನಿರ್ವಹಣೆ ಮಾಡಿರುವುದಕ್ಕೆ ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಅಸಮಾಧಾನ ಭುಗಿಲೆದ್ದಿದೆ.

SCROLL FOR NEXT