ಸುಪ್ರೀಂ ಕೋರ್ಟ್ 
ದೇಶ

ಗ್ರಾಹಕರ ವೇದಿಕೆಯಲ್ಲಿ ಖುದ್ದು ಗ್ರಾಹಕರು ಮಾತ್ರವೇ ದೂರು ನೀಡಬೇಕು: ಸುಪ್ರೀಂ ಕೋರ್ಟ್

ಗ್ರಾಹಕರ ವೇದಿಕೆಯಲ್ಲಿ ಗ್ರಾಹಕರ ಪರವಾಗಿ ಎರಡನೇ ವ್ಯಕ್ತಿಗಳು ದೂರು ನೀಡಲಾಗದು, ತಮಗೆ ಆಗಿರುವ ತೊಂದರೆಯ ಕುರಿತಾಗಿ ಖುದ್ದು ಗ್ರಾಹಕರೇ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು.

ನವದೆಹಲಿ: ಗ್ರಾಹಕರ ವೇದಿಕೆಯಲ್ಲಿ ಗ್ರಾಹಕರ ಪರವಾಗಿ ಎರಡನೇ ವ್ಯಕ್ತಿಗಳು ದೂರು ನೀಡಲಾಗದು, ತಮಗೆ ಆಗಿರುವ ತೊಂದರೆಯ ಕುರಿತಾಗಿ ಖುದ್ದು ಗ್ರಾಹಕರೇ ಗ್ರಾಹಕರ ವೇದಿಕೆಗೆ ದೂರು ಸಲ್ಲಿಸಬೇಕು ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿದೆ.

ಗರ್ಭಿಣಿಯೋರ್ವರಿಗೆ ಸರಿಯಾದ ಚಿಕಿತ್ಸೆ ನೀಡಿಲ್ಲ ಎಂದು ಗರ್ಭಿಣಿಯ ಸಂಬಂಧಿಕರೊಬ್ಬರು ಗ್ರಾಹಕರ ವೇದಿಕೆಗೆ ದೂರು ನೀಡಿದ್ದರು. ಆದರೆ ಗ್ರಾಹಕರ ವೇದಿಕೆಯಲ್ಲಿ ಅವರ ದೂರು ಅರ್ಜಿ ತಿರಸ್ಕೃತಗೊಂಡಿತ್ತು. ಅರ್ಜಿ ತಿರಸ್ಕೃತಗೊಂಡಿದ್ದನ್ನು ಪ್ರಶ್ನಿಸಿ ದೂರುದಾರ ವ್ಯಕ್ತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ದೂರುದಾರ ವ್ಯಕ್ತಿ ತಮ್ಮದು ಜಾಯಿಂಟ್ ಹಿಂದೂ ಕುಟುಂಬವಾಗಿದ್ದು, ತಾವು ಕುಟುಂಬದ ಮುಖ್ಯಸ್ಥ ಎಂದು ಹೇಳಿಕೊಂಡಿದ್ದರು. ದೂರುದಾರ ವ್ಯಕ್ತಿ ದೂರು ನೀಡಲ್ಪಟ್ಟಿರುವ ಆಸ್ಪತ್ರೆಯಿಂದ ಯಾವುದೇ ಸೇವೆಯನ್ನು ಪಡೆದುಕೊಳ್ಳದೇ ಇರುವುದರಿಂದ ಅವರು ದೂರು ನೀಡಲು ಆಗುವುದಿಲ್ಲ ಎಂಡು ಕೋರ್ಟ್ ತಿಳಿಸಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಪ್ರತಿಪಕ್ಷಗಳು ಸಂಪುಟದಿಂದ ವಜಾಕ್ಕೆ ಆಗ್ರಹಿಸುತ್ತಿರುವ ಮಧ್ಯೆ ಸಚಿವ ಬಿ. ನಾಗೇಂದ್ರಗೆ ಹೈಕೋರ್ಟ್ ಬಿಗ್ ರಿಲೀಫ್!

ರಾಂಚಿ ಪರೀಕ್ಷೆ ವಿವಾದ: ಬ್ಯಾರಿಕೇಡ್ ಮುರಿದು ವಿಧಾನಸೌಧದತ್ತ ನುಗ್ಗಿದ ವಿದ್ಯಾರ್ಥಿಗಳು! ಜಲಫಿರಂಗಿ ಬಳಸಿದ ಪೊಲೀಸರು, Video

'JDS ಪಾದಯಾತ್ರೆಯ ಬಂಡವಾಳ ಬಯಲು ಮಾಡಿದ ವಿಜಯೇಂದ್ರ': ಕಾಂಗ್ರೆಸ್​​ನಿಂದ ವಿಡಿಯೋ ಬಿಡುಗಡೆ!

ವಿದ್ಯಾರ್ಥಿಗಳ ಪ್ರತಿಭಟನೆಯ ಕುರಿತು ಚರ್ಚೆಗೆ ಅಮಿತ್ ಶಾ ಉತ್ತರಿಸುತ್ತಾರೆ, ಆದರೆ...: ಕಿರಣ್ ರಿಜಿಜು

ಅಮೃತ್ ಭಾರತ್ ಯೋಜನೆಗೆ ವೇಗದ ಕೊರತೆ? ಕರ್ನಾಟಕದ 61 ರೈಲು ನಿಲ್ದಾಣಗಳಲ್ಲಿ 12 ಮಾತ್ರ ಮೇಲ್ದರ್ಜೆಗೆ