ದೇಶ

ಸಂಜಯ್ ರಾವತ್ ಗೆ ಮತ್ತೊಂದು ಸಂಕಷ್ಟ: ಮಹಿಳಾ 'ಸಾಕ್ಷಿ'ಯಿಂದ ಶಿವಸೇನೆ ನಾಯಕನ ವಿರುದ್ಧ ಬೆದರಿಕೆ ಆರೋಪ, ಎಫ್ಐಆರ್ 

Srinivas Rao BV

ಮುಂಬೈ: ಭೂ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದಿಂದ ಈಗಾಗಲೇ ಬಂಧನಕ್ಕೊಳಗಾಗಿರುವ ಶಿವಸೇನೆ ನಾಯಕ, ಸಂಸದ ಸಂಜಯ್ ರಾವತ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. 

ಜಾರಿ ನಿರ್ದೇಶನಾಲಯವೇ ತನಿಖೆ ನಡೆಸುತ್ತಿರುವ ಅಕ್ರಮ ಹಣ ವರ್ಗಾವಣೆ ಪ್ರಕರಣವೊಂದರಲ್ಲಿ ಸಾಕ್ಷಿಯಾಗಿರುವ ಮಹಿಳೆ ಸಂಜಯ್ ರಾವತ್ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದು, ಆಕೆಯ ದೂರಿನ ಆಧಾರದಲ್ಲಿ ಶಿವಸೇನೆಯ ಮುಖಂಡನ ವಿರುದ್ಧ ಮುಂಬೈ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ. 

ಇದನ್ನೂ ಓದಿ: ಭೂ ಹಗರಣ: ತೀವ್ರ ವಿಚಾರಣೆ, ದಾಳಿ ಬಳಿಕ ಶಿವಸೇನೆ ಸಂಸದ ಸಂಜಯ್ ರಾವತ್ ಬಂಧನ
 
ಜು.15 ರಂದು ತನಗೆ ಸುದ್ದಿ ಪತ್ರಿಕೆಯೊಂದರಲ್ಲಿ ಟೈಪ್ ಮಾಡಿದ ಪತ್ರವೊಂದನ್ನು ಇಟ್ಟು ಅತ್ಯಾಚಾರ, ಹತ್ಯೆ ಬೆದರಿಕೆ ಬಂದಿತ್ತು, ಎಂದು ಸ್ವಪ್ನ ಪಾಟ್ಕರ್ ಆರೋಪಿಸಿದ್ದಾರೆ. ವಕೋಲಾ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಎಫ್ಐಆರ್ ದಾಖಲಾಗಿದೆ.

ಇತ್ತೀಚೆಗೆ ಪುರುಷ ವ್ಯಕ್ತಿಯ ಧ್ವನಿಯುಳ್ಳ ಆಡಿಯೋ ಕ್ಲಿಪ್ ಮೂಲಕ ಮಹಿಳೆಯೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕಿದ್ದು ವೈರಲ್ ಆಗಿತ್ತು. 

ಐಪಿಸಿ ಸೆಕ್ಷನ್ 507 (ಅನಾಮಧೇಯ ಸಂವಹನದಿಂದ ಕ್ರಿಮಿನಲ್ ಬೆದರಿಕೆ) ಆರೋಪದಡಿಯಲ್ಲಿ non-cognisable (NC) ಪ್ರಕರಣ ದಾಖಲಿಸಲಾಗಿದೆ.ಸ್ವಪ್ನಾ ಪಾಟ್ಕರ್ ಅವರು ಹೇಳಿಕೆಯನ್ನು ದಾಖಲಿಸಿದ್ದು, ಭದ್ರತೆಗೆ ಮನವಿ ಮಾಡಿದ್ದಾರೆ.

SCROLL FOR NEXT