ದೇಶ

ವಿಶ್ವ ಆನೆ ದಿನ: ಶೇ.60ರಷ್ಟು ಏಷ್ಯನ್ ಆನೆಗಳಿಗೆ ಭಾರತ ನೆಲೆ

Sumana Upadhyaya

ಇಂದು ಆಗಸ್ಟ್ 12 ವಿಶ್ವ ಆನೆ ದಿನ (World elephant day). ಪ್ರಾಣಿಗಳಲ್ಲಿ ಗಜ, ಆನೆಗೆ ವಿಶೇಷ ಸ್ಥಾನಮಾನವಿದೆ. ಗಜಪಡೆ ಸಾಗುವುದನ್ನು ನೋಡುವುದೇ ಚೆಂದ. ಗತ್ತು-ಗಾಂಭೀರ್ಯದಿಂದ ಹೆಜ್ಜೆ ಹಾಕುವ ಗಜಗಳಿಗೆ ಅವುಗಳೇ ಸಾಟಿ. ಆನೆಗೆ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ದೇವರ ಸ್ಥಾನವನ್ನು ನೀಡಲಾಗುತ್ತದೆ.

ಇಂದು ವಿಶ್ವ ಆನೆ ದಿನದ ಅಂಗವಾಗಿ ಗಣ್ಯರು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ದಿನವನ್ನು ನೆನಪಿಸಿ ವಿಶೇಷ ಗೌರವ ಸಲ್ಲಿಸಿದ್ದಾರೆ. ಆನೆಗಳ ಸಂರಕ್ಷಣೆ ಮತ್ತು ಮಹತ್ವದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಮೊದಲ ಬಾರಿಗೆ 2012 ರಲ್ಲಿ ಆಚರಿಸಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿಯವರು, ಏಷ್ಯಾದ ಎಲ್ಲಾ ಆನೆಗಳಲ್ಲಿ ಸುಮಾರು ಶೇಕಡಾ 60ರಷ್ಟು ಭಾರತದಲ್ಲಿ ಇವೆ. ಕಳೆದ 8 ವರ್ಷಗಳಲ್ಲಿ ಆನೆಗಳ ಸಂಖ್ಯೆ ಹೆಚ್ಚಿರುವುದು ಸಂತಸ ವಿಷಯ. ಆನೆಗಳ ರಕ್ಷಣೆಯಲ್ಲಿ ತೊಡಗಿರುವ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ ಎಂದಿದ್ದಾರೆ.

ಮಾನವ-ಪ್ರಾಣಿ ಸಂಘರ್ಷವನ್ನು ಕಡಿಮೆ ಮಾಡಲು ಮತ್ತು ಪರಿಸರ ಪ್ರಜ್ಞೆಯನ್ನು ಹೆಚ್ಚಿಸಲು ಸ್ಥಳೀಯ ಸಮುದಾಯಗಳು ಮತ್ತು ಅವರ ಸಾಂಪ್ರದಾಯಿಕ ಬುದ್ಧಿವಂತಿಕೆಯನ್ನು ಸಂಯೋಜಿಸಲು ಭಾರತದಲ್ಲಿ ನಡೆಯುತ್ತಿರುವ ದೊಡ್ಡ ಪ್ರಯತ್ನಗಳ ಸಂದರ್ಭದಲ್ಲಿ ಆನೆ ಸಂರಕ್ಷಣೆಯಲ್ಲಿನ ಯಶಸ್ಸನ್ನು ನೋಡಬಹುದಾಗಿದೆ ಎಂದಿದ್ದಾರೆ.

SCROLL FOR NEXT